ಸೈಂಟ್ ಫಿಲೋಮಿನ ಕಾಲೇಜು, ಪುತ್ತೂರು ಇವರು ಇತ್ತೀಚೆಗೆ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಈಜು ಸ್ವರ್ಧೆಯ ಪುರುಷರ ವಿಭಾಗದ 1500 ಮೀಟರ್ ಫ್ರಿಸ್ಟೈಲ್ ಮತ್ತು 400 ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವೀತಿಯ ಬಿ.ಕಾಮ್ ವಿದ್ಯಾರ್ಥಿ ಮೊಹಮದ್ ಫರ್‍ಹಾನ್ ಇವರನ್ನು ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಅಭಿನಂದಿಸಿದರು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು