ಯುಪಿಎಂಸಿ ಎಕ್ಸ್ ಪ್ಲೋರಿಕಾ- 2025 ಉತ್ಸವಕ್ಕೆ ಚಾಲನೆ

Categories:

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಎಕ್ಸ್ ಪ್ಲೋರಿಕಾ 2025 ಸಾಂಸ್ಕೃತಿಕ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಇವರು ಏಪ್ರಿಲ್ 28 ರಂದು ಚಾಲನೆ ನೀಡಿದರು.
ಪದವಿ ಹಂತದಲ್ಲಿ ಇಂತಹ ನಿರ್ವಹಣಾ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಲ್ಲಿ ಹಣಕಾಸು, ಸಮಯ, ಕಾರ್ಯ ನಿರ್ವಹಣೆ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ಡಾಜ್ ಬಾಲ್, ಪೆನಾಲ್ಟಿ ಕಿಕ್, ಸುಡೊಕು, ಬೆಸ್ಟ್ ಮೇಕಪ್, ಬೆಸ್ಟ್ ಸೆಲ್ಫಿ, ಮೊದಲಾದ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ಮೂಡಿಬಂದವು.
ಉಪ ಪ್ರಾಚಾರ್ಯ ಪ್ರೊ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಕಾರ್ಯಕ್ರಮದ ಅಧ್ಯಾಪಕ ಸಂಯೋಜಕ ಶ್ರೀ ಹರಿಕೇಶವ್, ವಿದ್ಯಾರ್ಥಿ ಸಂಯೋಜಕರಾದ ಜೀವನ್, ಶರಣ್ಯ, ಶ್ರೇಯಾ, ಶ್ರಾವ್ಯ, ತೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರಾವ್ಯ ರಾವ್ ಸ್ವಾಗತಿಸಿದರು, ಶರಣ್ಯ ವಂದಿಸಿದರು, ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *