ಕೌಶಲಗಳ ಅಭಿವ್ಯಕ್ತಿಯಿಂದ ವಿದ್ಯಾರ್ಥಿ ಪರಿಪೂರ್ಣ

Categories:

ವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷಣದ ಜೊತೆಗೆ ಕೌಶಲಗಳ ಅಭಿವ್ಯಕ್ತಿಯು ಅನಿವಾರ್ಯವಾಗಿದ್ದು ಇಂದಿನ ಜಾಗತಿಕ ಮಟ್ಟದ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಯು ಪರಿಪೂರ್ಣನೆನಿಸಲು ಕೌಶಲಗಳ ಪ್ರಾಯೋಗಿಕತೆಯನ್ನು ಮೆರೆಯುವುದು ಅತ್ಯವಶ್ಯ ಎಂದು ಮಣಿಪಾಲದ ಡಾ.ಟಿ.ಎಂ.ಪೈ ಪ್ರತಿಷ್ಠಾನದ ಅಂಗಸಂಸ್ಥೆಯಾದ ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ (MSDC)ಯ ಮಖ್ಯಸ್ಥರಾದ ಡಾ. ಅಂಜಯ್ಯ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏಪ್ರಿಲ್ 5 ರಂದು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರಾಜಲಕ್ಷ್ಮಿಯವರು ಪದವಿ ಶಿಕ್ಷಣದ ಜೊತೆಗೆ ತಾಂತ್ರಿಕ ಕ್ಷೇತ್ರದಲ್ಲಿ ಉಪಯೋಗವಾಗುವ ವಿವಿಧ ಕೋರ್ಸ್ ಗಳ ಬಗೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆರ್ ಸಾಫ್ಟ್‌ವೇರ್, ಪೈಥಾನ್, ಬ್ಯುಸಿನೆಸ್ ಇಂಟಲಿಜೆನ್ಸ್, ಆರ್ಟಿಫೀಶಿಯಲ್ ಇಂಟಲಿಜೆನ್ಸ, ಡೇಟಾ ಮೈನಿಂಗ್, ಡಾಟಾ ವಿಶುವಲೈಸೇಶನ್ ಮೊದಲಾದ ತಂತ್ರಜ್ಞಾನದ ವಿಚಾರಗಳನ್ನು ಅವರು ಸಾದರ ಪಡಿಸಿದರು.

ಎಂ.ಎಸ್.ಡಿ.ಸಿ ಯ ಕುಲಸಚಿವ ಡಾ.ನಾರಾಯಣ ಶೆಣೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ನಿರೂಪಿಸಿದರು.

Leave a Reply

Your email address will not be published. Required fields are marked *