ಬೀದಿನಾಟಕದ ಮುಖೇನ ಆರೋಗ್ಯ ಶಿಕ್ಷಣ – ತಂಬಾಕಾಸುರ ವಧೆ ಬೀದಿನಾಟಕ ಪ್ರದರ್ಶನ

Categories:

ತಂಬಾಕು ಮುಕ್ತ ಯುವ ಅಭಿಯಾನ 3.0

ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೀದಿನಾಟಕ ತಂಡದ ವಿದ್ಯಾರ್ಥಿಗಳಿಂದ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಉಡುಪಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಉಡುಪಿ ಇವರುಗಳ ಸಹಯೋಗದೊಂದಿಗೆ ತಂಬಾಕು ಮುಕ್ತ ಯುವ ಅಭಿಯಾನ 3.0 ಎಂಬ ವಿಶೇಷ ಶೀರ್ಷಿಕೆಯಲ್ಲಿ ‘ತಂಬಾಕಾಸುರ ವಧೆ’ ಎಂಬ ಬೀದಿನಾಟಕಕ್ಕೆ ನವೆಂಬರ್ 22ರಂದು ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.

ಕಾಲೇಜಿನ ಬಿ.ಕಾಂ, ಬಿಬಿಎ ಹಾಗೂ ಬಿಸಿಎ ಪದವಿಯ ವಿದ್ಯಾರ್ಥಿಗಳಾದ ವಿನಾಯಕ, ಪ್ರಧಾನ್, ಕೃತಿಕಾ, ನೇಮ ಭಾರತಿ, ನಂದೀಶ, ಶಿವಾಲಿಕ, ದೀಕ್ಷಾ, ಸಿಂಚನ, ಶ್ರೇಯಾಂಕ್, ಧನುಜ್, ಸಿರಿ, ಚೇತನ್ ಭಟ್ ಹಾಗೂ ಅಚ್ಯುತ ಭಾಗವಹಿಸಿದ್ದರು.

ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಿಂದ ಜಿಲ್ಲಾ ಸಲಹೆಗಾರರಾದ ಶ್ರೀಮತಿ ಮಂಜುಳಾ ಶೆಟ್ಟಿ, ಯುಪಿಎಂಸಿ ಎನ್ ಎಸ್ ಎಸ್ ಘಟಕದ ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಸಮಾಜ ಕಾರ್ಯಕರ್ತರಾದ ಶ್ರೀ ಮಹೇಶ್, ಆರೋಗ್ಯ ಇಲಾಖೆಯ ಕೀರ್ತಿ, ಶರತ್, ರಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.

ಬೀದಿನಾಟಕವನ್ನು ಹಳೆ ವಿದ್ಯಾರ್ಥಿ ಮಹೇಶ್ ಮಲ್ಪೆ ನಿರ್ದೇಶಿಸಿ, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಹಾಗೂ ಆರೋಗ್ಯ ಇಲಾಖೆಯ ಶ್ರೀ ದಿನೇಶ್ ಸಂಘಟಿಸಿದ್ದರು.

ಮಲ್ಪೆ ಬಸ್ ನಿಲ್ದಾಣ, ಮಲ್ಪೆ ಸೀ ವಾಕ್, ಉಡುಪಿಯ ಬೋರ್ಡ್ ಹೈ ಸ್ಕೂಲ್ ಬಳಿ ಬೀದಿನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀಮತಿ ಮಂಜುಳಾ ಶೆಟ್ಟಿ ತಿಳಿಸಿದರು.

ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ಬೀದಿನಾಟಕವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

Leave a Reply

Your email address will not be published. Required fields are marked *