ಉಡುಪಿ : – ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ 78 ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ದ ಚಾರ್ಟರ್ಡ್ ಅಕೌಂಟೆoಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಉಪಾಧ್ಯಕ್ಷರು ಕುಮಾರಿ ಅರ್ಚನಾ ಮಯ್ಯ ಇವರು ಧ್ವಜಾರೋಹಣ ಗೈದು ಸ್ವಾತಂತ್ರೋತ್ಸವ ಸಂದೇಶವನ್ನಿತ್ತರು. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ, ಉಡುಪಿ ಸಿ.ಎ ವಲಯದ ಸದಸ್ಯರು, ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಧ್ವಜ ಸಂಹಿತೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ಸಿಂಚನಾ ಸ್ವಾಗತಿಸಿದರು, ಶ್ರಾವ್ಯ ರಾವ್ ಧನ್ಯವಾದವಿತ್ತರು, ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.