ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ, ಮಹಿಳಾ ವೈದ್ಯರ ಸಂಘ, ಲಯನ್ಸ್ ಕ್ಲಬ್ ಮಣಿಪಾಲ್ ಸಹಭಾಗಿತ್ವದಲ್ಲಿ ಏಪ್ರಿಲ್ 7 ರಂದು ಉಡುಪಿ ಯ ಅಜ್ಜರಕಾಡುವಿನ ಭುಗಂಜ ಪಾರ್ಕ್ ನಲ್ಲಿ ಹಮ್ಮಿಕೊಂಡ ವಿಶ್ವ ಆರೋಗ್ಯ ದಿನದ ಕಾರ್ಯಕ್ರಮದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಆರೋಗ್ಯ-ಶಿಕ್ಷಣ ಕುರಿತಾದ ಬೀದಿನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಐ.ಎಂ.ಎ ಉಡುಪಿ- ಕರಾವಳಿಯ ಅಧ್ಯಕ್ಷರಾದ ಡಾ.ರಾಜಲಕ್ಷ್ಮಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು.
ಕಾಲೇಜಿನ ವಾಣಿಜ್ಯ ಉಪನ್ಯಾಸಕ ಹಾಗೂ ಬೀದಿನಾಟಕದ ಸಂಯೋಜಕ ಶ್ರೀ ರಾಘವೇಂದ್ರ ಜಿ.ಜಿ, ನಿರ್ದೇಶಕ ರಾಮಾಂಜಿ, ವಿದ್ಯಾರ್ಥಿಗಳಾದ ಪ್ರೇಮ್ ಸಾಯಿ, ಗಿರೀಶ್, ಕಾವ್ಯ ಶೆಟ್ಟಿ, ಆಶಿಕಾ, ರಕ್ಷಿತಾ, ಶ್ರೇಯಾ, ನಂದೀಶ್, ಪ್ರಧಾನ್, ಸವೀನ್, ಲಕ್ಷ್ಮೀ ಶೆಣೈ ಉಪಸ್ಥಿತರಿದ್ದರು.