‘ಕುಸಲ್ದ ಗೊಬ್ಬುಲು’ ತುಳು ಉತ್ಸವಕ್ಕೆ ಚಾಲನೆ

Categories:

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿ‌ನ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 4 ರಂದು ಆಯೋಜಿಸಿದ ‘ಕುಸಲ್ದ ಗೊಬ್ಬುಲು 2024’- ಒಂದು ದಿನದ ತುಳು ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತುಳು ಸಂಸ್ಕೃತಿಯ ವೈಭವವನ್ನು ವಿವರಿಸುತ್ತ ತುಳು ಸಂಸ್ಕೃತಿಯನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಲು ಕರೆ ನೀಡುವುದರ ಜೊತೆಗೆ ದಿನನಿತ್ಯದ ಪಾಠ ಪ್ರವಚನಗಳೊಂದಿಗೆ ಇಂತಹ ಉತ್ಸವಗಳ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಬಾಳ್ವೆ, ಶಾಂತಿ, ಸೌಹಾರ್ದತೆಗಳು ಬೆಳೆಯಲು ಕಾರಣವಾಗುವುದಾಗಿ ಹೇಳಿದರು.


ತುಳು ಉತ್ಸವದ ಉಪನ್ಯಾಸಕ ಸಂಯೋಜಕರಾದ ಚಂದ್ರಶೇಖರ್, ಜಾವೇದ್, ರಾಘವೇಂದ್ರ ಜಿ.ಜಿ, ಹರಿಕೇಶವ್ ಇವರು ತುಳು ಸಂಸ್ಕೃತಿಯ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕರದರ್ಪುನಿ, ಕೆರೆದಡ, ಟೊಂಕಾಟ, ಗುಂಟಾಟ, ಲಗೋರಿ, ಸೊಪ್ಪಾಟ ಮೊದಲಾದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆನಂದಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರಭಾ ಕಾಮತ್, ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ರಾಧಾಕೃಷ್ಣ ರಾವ್ ಹಾಗೂ ಉತ್ಸವ ವಿದ್ಯಾರ್ಥಿ ಸಂಯೋಜಕರಾದ ಪ್ರೇಮಸಾಯಿ, ಮನೀಶ್ ಕಾಂಚನ್, ಸವೀನ್ ಪಾಲನ್, ಸುಹಾಗ್, ನೌಶೀನ್, ಕಾವ್ಯ ಶೆಟ್ಟಿ, ಆಶಿಕಾ, ಸಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.
ನೌಶಿನ್ ತೃತೀಯ ಬಿ.ಕಾಂ ಸ್ವಾಗತಿಸಿದರು, ಕಾವ್ಯ ಶೆಟ್ಟಿ ತೃತೀಯ ಬಿಬಿಎ ಧನ್ಯವಾದವಿತ್ತರು, ಚೈತ್ರಾ ದೇವಾಡಿಗ ತೃತೀಯ ಬಿಬಿಎ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *