Download

Click here to Apply Online Application

Prospectus 2020

ಆತ್ಮೀಯರೇ, 

ವಾಣಿಜ್ಯ ಮತ್ತು ವ್ಯವಹಾರ ಆಡಳಿತ (B.Com & BBA) ಎರಡೇ ವಿಷಯಗಳನ್ನು ಬೋಧಿಸುತ್ತಾ..  ಕಳೆದ 29 ವರ್ಷಗಳಿಂದ ವಿದ್ಯಾರ್ಜನೆ ನೀಡುತ್ತಾ.. ಹಾಗೆಯೇ ಹತ್ತುಹಲವು  Rank ಗಳನ್ನು ಹೊತ್ತುತರುತ್ತಾ..

ವಾರ್ಷಿಕ ಸಂಚಿಕೆ ‘ಸುಪ್ರಭಾ’ ಸತತವಾಗಿ 11 ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ಕಾಲೇಜು ವಾರ್ಷಿಕಾಂಕ ಸ್ಪರ್ಧೆಯಲ್ಲಿ ಬಹುಮಾನ ಗಳಿಸುತ್ತಾ.. ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ.. ವಿದ್ಯಾರ್ಥಿಗಳ ಏಳ್ಗೆಗೆ ಸದಾ ಶ್ರಮಿಸುತ್ತಾ.. ಎಲ್ಲಾ ವಿದ್ಯಾರ್ಥಿಗಳ ಮೇಲೆ ನಿಗವಹಿಸುತ್ತಾ.. ಪೋಷಕ ವರ್ಗದದೊಂದಿಗೆ ಉತ್ತಮ ಸೌಹಾರ್ದ ಬೆಳೆಸುತ್ತಾ.. ಆಟೋಟಗಳಲ್ಲಿ ಜಯಗಳಿಸುತ್ತಾ..

ಹೀಗೆ ಕಾಲೇಜಿನ ಎನ್‌.ಎಸ್.ಎಸ್. ರೆಡ್ ಕ್ರಾಸ್, ದಿಶಾ, ಸ್ಪೋರ್ಟ್ಸ್, ಕಾಮರ್ಸ್ & ಮ್ಯಾನೇಜ್ಮೆಂಟ್ ಅಸೋಸಿಯೇಷನ್, ಕಲ್ಚರಲ್ ಅಸೊಶಿಯೇಶನ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಸದಾ ಹುರಿದುಂಬಿಸಿ ಅವಕಾಶ ನೀಡಿ ವೇದಿಕೆ ಕಲ್ಪಿಸುತ್ತಾ..

ವಿದ್ಯಾರ್ಥಿಗಳ ಯಶಸ್ಸನ್ನು ಸದಾ ಬಯಸುತ್ತಾ ಬಂದಿರುವ, ಬರುತ್ತಿರುವ, ಬರಲಿರುವ ಕಾಲೇಜು ಎಂದರೆ ಅದೇ ಉಡುಪಿಯ ಕುಂಜಿಬೆಟ್ಟುವಿನ ‘ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು’… 

Upendra Pai Memorial College, Kunjibettu, Udupi has introduced a new system of Online Admission.

The procedure is as follows:

1. Go to the website-  www.upmcmanipal.org

2. Download the Online Application Form, fill the Form and send to the college mail Id, upmcadmission2020@gmail.com  

3. After sending the filled Application Form through Mail, contact the college Office 0820-2522658 for Online Admission Process. 

4. After the Online Admission Process with the Principal is done, the fees payment procedure will be intimated to your Email ID / Contact number.

5. After the fees payment, the payment details , name of the student and class should be sent to the college e-mail Id upmcadmission2020@gmail.com .

ಬಿ.ಕಾಮ್, ಬಿ.ಬಿ.ಎಂ. ವಿದ್ಯಾರ್ಥಿಗಳ ಆಶಾಕಿರಣ –

ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು

ಆನ್‌ಲೈನ್ – ಆಫ್‌ಲೈನ್ ಮೂಲಕ ಬಿ.ಕಾಂ, ಬಿ.ಬಿ.ಎ. ಶಿಕ್ಷಣ

ಮಣಿಪಾಲದ ಪ್ರತಿಷ್ಠಿತ ಡಾ|ಟಿ.ಎಂ.ಎ. ಪೈ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು (ಯು.ಪಿ.ಎಂ.ಸಿ) ವಾಣಿಜ್ಯ(ಬಿ.ಕಾಮ್) ಮತ್ತು ವ್ಯವಹಾರ ಆಡಳಿತ(ಬಿ.ಬಿ.ಎ.) ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಆಶಾಕಿರಣವಾಗಿ ಮುನ್ನಡೆಯುತ್ತಿದೆ.

ಮಂಗಳೂರು ವಿವಿಯ ಸಂಯೋಜನೆಗೆ ಒಳಪಟ್ಟು ಕಳೆದ ೨೯ ವರ್ಷಗಳಿಂದ ವಾಣಿಜ್ಯ, ವ್ಯವಹಾರ ಆಡಳಿತಕ್ಕೆ ಸಂಬಂಧಿಸಿದ ಬಿ.ಕಾಂ, ಬಿ.ಬಿ.ಎ. ಪದವಿಗಳನ್ನು ಮಾತ್ರ ಹೊಂದಿರುವ ಉಡುಪಿ ನಗರ ಭಾಗದ ಈ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆಫ್‌ಲೈನ್ ಜೊತೆಗೆ ಹೆಚ್ಚುವರಿಯಾಗಿ ಆನ್‌ಲೈನ್ ಮೂಲಕ ಬಿ.ಬಿ.ಎ. ಮತ್ತು ಬಿ.ಕಾಮ್ ತರಗತಿಗಳನ್ನು ನಡೆಸಲಾಗುತ್ತಿದೆ.

ಪಿಎಚ್‌ಡಿ, ಎಂಫಿಲ್ ಮುಂತಾದ ಉನ್ನತ ಪದವಿಗಳನ್ನು ಹೊಂದಿ ಇಪ್ಪತ್ತು ವರ್ಷಕ್ಕೂ ಮೀರಿದ ಬೋಧನಾನುಭವ ಹೊಂದಿರುವ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳ ಚಿಂತನ ಮಂಥನಗಳಿಗೆ ಪೂರಕವಾದ ವಾತಾವರಣ ಹೊಂದಿದ ಸುಸಜ್ಜಿತ ವಾಚನಾಲಯ, ಕಂಪ್ಯೂಟರ್ ಲ್ಯಾಬ್, ಉತ್ತಮ ಕ್ರೀಡಾಂಗಣ, ಪ್ರತಿ ವಿದ್ಯಾರ್ಥಿಯ ವಿಷಯದಲ್ಲಿ ವೈಯಕ್ತಿಕ ನಿಗಾ ಹೊಂದಿರುವುದು. ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ಹೊಸವಿಶ್ರಾಂತಿ ಕೊಠಡಿ, ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿಗಳ ಸುರಕ್ಷತೆಗೆ ಸಿಸಿ ಟಿ.ವಿ. ಅಳವಡಿಕೆ ಮುಂತಾದುವು ಈ ಕಾಲೇಜಿನ ವೈಶಿಷ್ಟ್ಯಗಳಾಗಿವೆ.

ಪವರ್ ಪಾಯಿಂಟ್ ಪ್ರಸಂಟೇಶನ್:- ಪ್ರತಿಯೊಂದು ತರಗತಿಗಳಿಗೂ ಸ್ಕ್ರೀನ್ ಪ್ರೊಜೆಕ್ಟರ್ ಅಳವಡಿಸಲಾಗಿದ್ದು I.ಅ.ಖಿ ಅಟಚಿsses (Iಟಿಜಿoಡಿmಚಿಣioಟಿ & ಅommuಟಿiಛಿಚಿಣioಟಿ ಖಿeಛಿhಟಿoಟogಥಿ)ಮಾದರಿಯಲ್ಲಿ ಪಾಠ ಪ್ರವಚನಗಳು ಇಲ್ಲಿ ನಡೆಯುತ್ತಿವೆ. ಇಂದಿನ ತಾಂತ್ರಿಕ ಕಾಲಘಟ್ಟದಲ್ಲಿ ಪಾಠ್ಯವಿಷಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟಾಗಿಸಲು ಇದು ಸಹಕಾರಿಯಾಗಿದೆ.

ಸಿ.ಎ. ಪರೀಕ್ಷಾಕೇಂದ್ರ :- ದಿ ಚಾರ್ಟರ್ಡ್ ಆಕೌಂಟೆಂಟ್ಸ್ ಆಘ್ ಇಂಡಿಯಾ ನ್ಯೂಡೆಲ್ಲಿ ಇವರು ನಡೆಸುತ್ತಿರುವ ಸಿಎ ಫೈನಲ್, ಐಪಿಸಿಇ ಹಾಗೂ ಸಿ.ಎ, ಫೌಂಡೇಶನ್ ಪರೀಕ್ಷೆಗಳ ಉಡುಪಿಯ ಏಕೈಕ ಪರೀಕ್ಷಾ ಕೇಂದ್ರ ಇದಾಗಿದ್ದು ೨೦೦೨ ನೇ ಇಸವಿಯಿಂದ ಈ ಪರೀಕ್ಷೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ದಿ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಜೊತೆಗೆ ಕಾಲೇಜು ನಿಕಟ ಬಾಂಧವ್ಯ ಹೊಂದಿದ್ದು ಸಿ.ಎ. ಕಲಿಯಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದ ಪ್ರತಿಷ್ಠಿತ ಹುದ್ದೆಗಳಲ್ಲಿ ವೃತ್ತಿ ನಿರತರಾಗಿರುವುದು ಉಲ್ಲೇಖನೀಯವಾಗಿದೆ. ವ್ಯವಹಾರ ಕೌಶಲಕ್ಕಾಗಿ ಸುಲಭ ಇಂಗ್ಲಿಷ್ ಸಂವಹನ ಕಮ್ಮಟ, ಕಾಮರ್ಸ್‌ಗೆ ಸಂಬಂಧಿಸಿದ ಕೆಲವು ಪಠ್ಯ ವಿಷಯಗಳ ಮೇಲೆ ಸಿ.ಎ. ಪರಿಣತರಿಂದ ವಿಶೇಷೋಪನ್ಯಾಸ, ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ, ಕೈಗಾರಿಕಾ ಭೇಟಿ, ಸಾಹಿತ್ಯ ವಿಷಯಗಳಲ್ಲಿ ತಜ್ಞರಿಂದ ವಿಶೇಷ ಮಾಹಿತಿ ಇವೇ ಮೊದಲಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಂಡು ಬರುತ್ತಿರುವುದು ಕಾಲೇಜಿನ ಸಂಪ್ರದಾಯವಾಗಿದೆ. ಮಂಗಳೂರು ವಿವಿ ಅಂತರ್ಕಾಲೇಜು ಮಟ್ಟದ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸ್ಪರ್ಧೆಗಳಲ್ಲಿ ಭಾಗಿಯಾಗಿರುವುದರ ಜೊತೆಗೆ ಕ್ರೀಡಾ ವಿಭಾಗದಲ್ಲಿಯೂ ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ಬಹುಮಾನ ಪಡೆದ ಹೆಗ್ಗಳಿಕೆ ಕಾಲೇಜಿಗಿದೆ.

ಬಿಬಿಎ. ರ‍್ಯಾಂಕ್:- ಮಂಗಳೂರು ವಿಶ್ವವಿದ್ಯಾಲಯ ನಡೆಸುತ್ತಿರುವ ಬಿ.ಬಿ.ಎ. ಪರೀಕ್ಷೆಗಳಲ್ಲಿ ಹಲವಾರು ರ‍್ಯಾಂಕ್‌ಗಳನ್ನು ಗಳಿಸಿದ ಹೆಗ್ಗಳಿಕೆ ಕಾಲೇಜಿಗಿದೆ.

ಕ್ಯಾಂಪಸ್:- ಟಿ.ಸಿ.ಎಸ್., ಆಕ್ಸಿಸ್ ಬ್ಯಾಂಕ್, ಟೆಕ್‌ಮಹೇಂದ್ರ, ಎಂಪಾಸಿಸ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

‘ಸುಪ್ರಭಾ’ ನಿರಂತರ ಬಹುಮಾನ ಗಳಿಕೆ:-ವಿದ್ಯಾರ್ಥಿಗಳ ಪ್ರತಿಭಾವೈವಿಧ್ಯಗಳ ಲೇಖನ ರೂಪದ ಸಂಕಲನ ಸುಪ್ರಭಾ ಕಾಲೇಜು ವಾರ್ಷಿಕಾಂಕವು ಕೆಟಗರಿ ‘ಬಿ’ ವಿಭಾಗದಲ್ಲಿ (೫೦೦ ಕ್ಕೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಸಂಸ್ಥೆ) ಕಳೆದ ೧೧ ವರ್ಷಗಳಿಂದ ಬಹುಮಾನಗಳನ್ನು ಗಳಿಸುತ್ತ ಬಂದಿರುವುದು ಕಾಲೇಜಿನ ಗರಿಮೆಗೆ ಮತ್ತೊಂದು ಸಾಕ್ಷಿಯಾಗಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಪಿ.ಯು. ಮಂಡಳಿಯಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಕೂಡಲೇ ಪ್ರಥಮ ಬಿ.ಕಾಂ, ಬಿ.ಬಿ.ಎ. ತರಗತಿಗಳ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು ೨೦೨೦-೨೧ ರ ಸಾಲಿನ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಕಾಲೇಜನ್ನು (0820-2522658) ಸಂಪರ್ಕಿಸಿ ಅರ್ಜಿಯನ್ನು ಸ್ವೀಕರಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

ನಮ್ಮ ಕಾಲೇಜು ಇಪ್ಪತ್ತೈದು ವರ್ಷಗಳಿಂದ ಬಿ.ಕಾಮ್, ಬಿ.ಬಿ.ಎಂ. ಪದವಿ ತರಗತಿಗಳನ್ನು ಮಾತ್ರ ನಡೆಸುತ್ತಿದ್ದು ಚಾರ್ಟರ್ಡ್ ಆಕೌಂಟೆಂಟ್ಸ್ ಆಘ್ ಇಂಡಿಯಾ ಉಡುಪಿ ಶಾಖೆಯ ಜೊತೆಗೆ ನಿಕಟ ಬಾಂಧವ್ಯವನ್ನು ಹೊಂದಿದೆ. ಪಿಯು ತರಗತಿಯಲ್ಲಿ ಮಧ್ಯಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳೂ ಇಲ್ಲಿಂದ ಉತ್ತಮ ದರ್ಜೆಯಲ್ಲಿ ಬಿ.ಕಾಮ್. ಬಿ.ಬಿ.ಎಂ. ಡಿಗ್ರಿಗಳನ್ನು ಮುಗಿಸಿ ಸಿ.ಎ., ಎಂ.ಬಿ.ಎ. ಗಳನ್ನು ಪೂರೈಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಕಾಲೇಜಿನ ಗರಿಮ್ಣತೆಗೆ ಸಾಕ್ಷಿಯಾಗಿದೆ. ಶ್ರೀ ಗುರುದೇವತಾನುಗ್ರಹದಿಂದ, ಆಡಳಿತ ಮಂಡಳಿಯ ಪೂರ್ಣ ಸಹಕಾರದಿಂದ, ಕಾಲೇಜಿನ ಅಭಿವೃದ್ಧಿಯಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಪರಿಶ್ರಮಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರ ಸಹಕಾರದಿಂದ ಇಪ್ಪತ್ತೈದನೆಯ ರಜತ ವರ್ಷವನ್ನು ಕಾಣುತ್ತಿರುವ ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲರನ್ನು ಕಾಲೇಜು ಸ್ಮರಿಸುತ್ತಿದೆ.
ಪ್ರಾಚಾರ್ಯರು
ಡಾ|ಮಧುಸೂದನ ಭಟ್

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಪಿ.ಯು. ಮಂಡಳಿಯಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಕೂಡಲೇ ಪ್ರಥಮ ಬಿ.ಕಾಮ್, ಬಿ.ಬಿ.ಎಂ. ತರಗತಿಗಳ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು 2020-21ರ ಸಾಲಿನ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಕೂಡಲೇ ಕಾಲೇಜನ್ನು (0820-2522658) ಸಂಪರ್ಕಿಸಿ ಅರ್ಜಿಯನ್ನು ಸ್ವೀಕರಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.