ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 12 ರಂದು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಶೀರ್ಷಿಕೆ ಅಡಿಯಲ್ಲಿ ಸೇಫ್ಟಿ ಫಸ್ಟ್ ಅಭಿಯಾನ ಎಂಬ ಮಾಹಿತಿ ಕಾರ್ಯಕ್ರಮ ಜರಗಿತು.
ಮಂಗಳೂರಿನ ಫೈರ್ ಆಂಡ್ ಸೇಫ್ಟಿ ಆಫೀಸರ್ ಶ್ರೀ ಸತ್ಯರಾಜ್ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ವಿವಿಧ ಅಗ್ನಿ ಅವಘಡಗಳನ್ನು ನೆನಪಿಸುತ್ತಾ, ಅಗ್ನಿ ಅವಘಡಗಳು ಉಂಟಾದಲ್ಲಿ ತೆಗೆದುಕೊಳ್ಳ ಬಹುದಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸುತ್ತಾ ಅಗ್ನಿ, ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ಕ್ರಮಗಳ ಪ್ರಾತ್ಯಕ್ಷಿಕೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ವಂದಿಸಿದರು, ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.