ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 30 ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಚ್ಛತಾ ಹಿ ಸೇವಾ ಎಂಬ ಶೀರ್ಷಕೆಯಡಿಯಲ್ಲಿ ಮೈ ಭಾರತ್ ಪೋರ್ಟಲ್ ನ ಅಧಿಸೂಚನೆಯಂತೆ ಕ್ಯಾಂಪಸ್ ಸ್ವಚ್ಛತೆಯ ಕಾರ್ಯಕ್ರಮ ಜರಗಿತು.
ಸುಮಾರು 100 ವಿದ್ಯಾರ್ಥಿ – ವಿದ್ಯಾರ್ಥಿನಿ ಸ್ವಯಂ ಸೇವಕರು ಈ ಕಾರ್ಯದಲ್ಲಿ ತೊಡಗಿ ಕ್ಯಾಂಪಸ್ ಸ್ವಚ್ಛತೆಯ ನಡೆಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಮೈ ಭಾರತ್ ಕ್ಯಾಪ್ ಮತ್ತು ಹ್ಯಾಂಡ್ ಗ್ಲೌಸ್ ವಿತರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ವಚ್ಛತೆಯ ಮಹತ್ವದ ಬಗ್ಗೆ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ರಾಧಾಕೃಷ್ಣ ರಾವ್, ಪ್ರಭಾ ಕಾಮತ್, ರಾಘವೇಂದ್ರ ಜಿ ಜಿ, ಹರಿಕೇಶವ್, ಜಾವೇದ್ ಉಪಸ್ಥಿತರಿದ್ದರು.