ಯು.ಪಿ.ಎಂ.ಸಿ- ಬೃಹತ್ ರಕ್ತದಾನ ಶಿಬಿರ

Categories:

ಫ್ರೆಂಡ್ಸ್ ಗ್ರೂಪ್ ಉಡುಪಿ ಮತ್ತು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಜಂಟಿಯಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರವು ಏಪ್ರಿಲ್ 27 ರಂದು ಯು.ಪಿ.ಎಂ.ಸಿಯಲ್ಲಿ ನಡೆಯಿತು.

ಮಣಿಪಾಲದ ಕೆ. ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ದೀಪಿಕಾ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತಕ್ಕೆ ಪರ್ಯಾಯ ಎಂಬುದು ಇಲ್ಲ ಆರೋಗ್ಯವಂತ ವ್ಯಕ್ತಿ ಯಾವುದೇ ಪ್ರತಿಫಾಪೇಕ್ಷೆಯಿಲ್ಲದೆ ರಕ್ತದಾನ ಮಾಡಿ ಒಂದು ದಾನದಿಂದ ಮೂರುನಾಲ್ಕು ರೋಗಿಗಳ ಜೀವ ಉಳಿಸಲು ಸಹಕಾರಿ ಯಾಗಲಿದೆ, ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ ರಕ್ತವು ಅತ್ಯವಶ್ಯವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಮಾಜವು ಮಾಡುವ ಸ್ವಯಂ ಪ್ರೇರಿತ ರಕ್ತದಾನವು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ಫ್ರೆಂಡ್ಸ್ ಕ್ಲಬ್ ಉಡುಪಿ ಇದರ ಗೌರವಾಧ್ಯಕ್ಷರಾದ ಶ್ರೀ ವಸಂತರಾವ್ ಕರಂಬಳ್ಳಿ, ಅಧ್ಯಕ್ಷರಾದ ಶ್ರೀ ಸಂದೀಪ್, ಸುನಿಲ್ ಹಾಗು ಫ್ರೆಂಡ್ಸ್ ಗ್ರೂಪ್ ನ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.

ಎನ್.ಎಸ್.ಎಸ್ ಘಟಕದ ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ವಂದಿಸಿದರು. ಯೋಜನಾಧಿಕಾರಿ ರಾಜೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *