ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್, ಅಲೈಡ್ ಆಟ್ಸ್ ವತಿಯಿಂದ ನವೆಂಬರ್ ೭ ಮತ್ತು ೮ ರಂದು ಹಳೆಯಂಗಡಿಯ ಶ್ರೀ ರಾಮಾನುಗ್ರಹ ಸಭಾಭವನದಲ್ಲಿ ಜರಗಿದ ೨೭ನೇ ರಾಜ್ಯಮಟ್ಟದ ಅಂತರ್ಡೊಜೋ ಕರಾಟೆ ಚಾಂಪಿಯನ್‌ಶಿಪ್‌ನ ಆರೆಂಜ್ ಹಾಗೂ ಗ್ರೀನ್ ಬೆಲ್ಟಿನ ೧೮ರ ಮೇಲಿನ ವಯೋಮಿತಿಯ ೬೫ ಕೆ.ಜಿ. ವಿಭಾಗದ ಕಟ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಸುಬೋಧ್ ಎಸ್. ಕುಮಾರ್ ಇವರು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.