ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ವಿ.ವಿ.ಮಟ್ಟದ ಅಂತರ್ಕಾಲೇಜು ಆಹ್ವಾನಿತ ವಾಲಿಬಾಲ್ ಪಂದ್ಯಾಟದಲ್ಲಿ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಯು.ಪಿ.ಎಂ.ಸಿ ಟ್ರೋಫಿ ಹಾಗೂ ನಗದು ರೂ. ೧೦,೦೦೦ ನ್ನು ಗೆದ್ದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಬಾರ್ಕೂರ್ ಎಸ್.ಆರ್.ಎಸ್.ಎಂ., ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೭,೦೦೦ ಮತ್ತು ಶಾಶ್ವತ ಫಲಕವನ್ನು, ತೃತೀಯ ಸ್ಥಾನವನ್ನು ಕಟೀಲ್ ಎಸ್.ಡಿ.ಪಿ.ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೫,೦೦೦ ಮತ್ತು ಶಾಶ್ವತ ಫಲಕ, ಹಾಗೂ ಚತುರ್ಥ ಸ್ಥಾನವನ್ನು ಸರಕಾರಿ ಪದವಿ ಕಾಲೇಜು, ಕೋಟೇಶ್ವರ, ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೩,೦೦೦ ಮತ್ತು ಶಾಶ್ವತ ಫಲಕವನ್ನು ಗೆದ್ದು ಕೊಂಡಿದ್ದಾರೆ.
ಬೆಸ್ಟ್ ಆಲ್ರೌಂಡರ್ : ಕಟೀಲ್ ಕಾಲೇಜಿನ – ಶಬರೀಶ್ ರೈ, ಬೆಸ್ಟ್ ಲಿಫ್ಟರ್ : ಬಾರ್ಕೂರು ಕಾಲೇಜಿನ ಲಕ್ಷ್ಮೀಶ್ ಮತ್ತು ಬೆಸ್ಟ್ ಎಟೆಕರ್ : ಶಿರ್ವಾ ಕಾಲೇಜಿನ ಪ್ರಮೋದ್ ಗೆದ್ದುಕೊಂಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತರಾದ ಕೃಷ್ಣಮೂರ್ತಿ ಆಚಾರ್ಯ, ವಿನುಗಾರಿಕ ಫೆಡರೇಶನ್ ಅಧ್ಯಕ್ಷರಾದ ಶ್ರೀಯುತ ಯಶ್ಪಾಲ್ ಎ.ಸುವರ್ಣ ಹಾಗೂ ಶ್ರೀಮತಿ ಜ್ಯೋತಿ ರಮನಾಥ್ ಶೆಟ್ಟಿಯವರು ಉಪಸಿತ್ಥರಿದ್ದು ಬಹುಮಾನ ವಿತರಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಪೆರ್ಡೂರಿನ ಉಪೇಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಅನನ್ಯ ಅತಿಥಿಗಳನ್ನು ಸ್ವಾಗತಿಸಿ ವಂದನಾರ್ಪಣೆಯನ್ನು ನೆರವೇರಿಸಿದರು.