ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಾರ್ಚ್ 6 ರಂದು ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇದರ ಸಹಭಾಗಿತ್ವದಲ್ಲಿ ಕಾರ್ಯಾಲಯ ನೀತಿಗಳು ಮತ್ತು ವೃತ್ತಿಪರ ನಡವಳಿಕೆ ಎಂಬ ವಿಶೇಷ ಕಾರ್ಯಾಗಾರ ನಡೆಯಿತು.
ಮುಖ್ಯ ಅಭ್ಯಾಗತರಾದ ಹಿರಿಯ ವಿದ್ಯಾರ್ಥಿ ಸಲಹೆಗಾರರು ಮಾಹೆ ಮಣಿಪಾಲ್ ನ ಶ್ರೀ ರೆಯಾನ್ ಮಥಾಯಿಸ್ ಮಾತನಾಡಿ ಆಧುನಿಕ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿದಿರುವ ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಮುಂದಿನ ವೃತ್ತಿ ಜೀವನದ ಕೌಶಲಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ವಿವರಿಸಿದರು, ಹಾಗೆಯೇ ವೃತ್ತಿ ಜೀವನದಲ್ಲಿ ಸತ್ಯನಿಷ್ಠತೆ, ನ್ಯಾಯಬದ್ಧತೆ, ಜವಾಬ್ದಾರಿ, ಕಠಿಣ ಪರಿಶ್ರಮ ಹಾಗೂ ಸಮಯ ನಿಷ್ಠತೆಗಳ ಮಹತ್ವ ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು.
ಎಂ. ಎಸ್. ಡಿ. ಸಿ ಸಂಸ್ಥೆಯ ನೆಟ್ ವರ್ಕ್ ಅಡ್ಮಿನಿಸ್ಟ್ರೇಟರ್ ಸಿಂಥಿಯಾ ಮೆನೆಜಿಸ್ ಕಾರ್ಯಕ್ರಮ ನಿರೂಪಿಸಿದರು.