ವಾಣಿಜ್ಯ ಸಂಘ – ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

Categories:

ಉಡುಪಿ-ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಫ್ರಾಂಕ್ಲಿನ್ ಟೆಂಪಲ್ಟೆನ್ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಏಪ್ರಿಲ್ 5ರಂದು ನಡೆಯಿತು.

ಫ್ರಾಂಕ್ಲಿನ್ ಟೆಂಪೆಲ್ಟನ್ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಯ ಹಿರಿಯ ಶಾಖಾ ಪ್ರಬಂಧಕ ಶ್ರೀ ಲಿಯೋ ಅಮಲ್ ಎ ವಿದ್ಯಾರ್ಥಿಗಳಿಗೆ ಹೂಡಿಕೆ ಮಾಡುವ ವಿಧಾನ ಮತ್ತು ಹೂಡಿಕೆಯ ಅಗತ್ಯಗಳನ್ನು ತಿಳಿ ಹೇಳಿದರು. ಇಂದಿನ ಯುವ ಜನತೆ ಗಳಿಕೆಯ ಹಣವನ್ನು ಸಂಪೂರ್ಣವಾಗಿ ಅಗತ್ಯತೆಗಳಿಗೆ ವ್ಯಯಿಸುತ್ತಿದ್ದಾರೆ ಹಣ ಉಳಿತಾಯದ ಬಗ್ಗೆ ಯೋಚಿಸುತ್ತಿಲ್ಲ ಇದರಿಂದ ಭವಿಷ್ಯದ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಐಕ್ಯೂಏಸಿ ಸಂಚಾಲಕ ಶ್ರೀ ಜಾವೇದ್, ಕಾರ್ಯಕ್ರಮದ ಸಂಯೋಜಕ ಶ್ರೀ ರಾಘವೇಂದ್ರ ಜಿ ಜಿ ಉಪಸ್ಥಿತರಿದ್ದರು.

ಶ್ರಾವ್ಯ ರಾವ್ ತೃತೀಯ ಬಿ.ಕಾಮ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *