ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2024-25 ನೇ ಸಾಲಿನ 34ನೇ ವಾರ್ಷಿಕ ಕ್ರೀಡಾಕೂಟವು ಫೆಬ್ರವರಿ 25 ರಂದು ಎಂ.ಐ.ಟಿ ಅಥ್ಲೆಟಿಕ್ ಸ್ಟೇಡಿಯಂ ಮಣಿಪಾಲ್ ನಲ್ಲಿ ಜರಗಿತು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗು ಐಸಿಎಐ ಉಡುಪಿ ಶಾಖೆಯ ಮಾಜಿ ಅಧ್ಯಕ್ಷರಾದ ಶ್ರೀ ಸಿಎ ಲೋಕೇಶ್ ಶೆಟ್ಟಿ ಉದ್ಘಾಟಿಸಿ, ಕ್ರೀಡೆಯನ್ನು ನಾನು ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡಿದ್ದೇನೆ, ವಿದ್ಯಾರ್ಥಿಗಳು ಏಕಾಗ್ರತೆ ಬೆಳೆಸಿಕೊಳ್ಳಲು ಕ್ರೀಡೆ ಅತ್ಯುತ್ತಮ ವೇದಿಕೆ, ಜೀವನದಲ್ಲಿ ಸೋಲು ಗೆಲುವು ಇರುತ್ತದೆ ಗೆಲುವಿನ ಜೀವನ ಅನುಭವಿಸುವ ಮೊದಲು ಸೋಲಿನ ರುಚಿ ಅರಿವಾಗಿರಬೇಕು, ವಿದ್ಯಾರ್ಥಿಗಳ ಜೀವನದಲ್ಲಿ ಒಂದಲ್ಲಾ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಚಾರ್ಯ ಶ್ರೀ ರಾಧಾಕೃಷ್ಣ ರಾವ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.
ವಿಶಾಲ್ ಆರ್. ಪಿ ತೃತೀಯ ಬಿ. ಕಾಮ್ ಕ್ರೀಡಾವಿಧಿ ಬೋಧಿಸಿದರು. ತೃತೀಯ ಬಿ.ಕಾಂ ನ ಶ್ರಾವ್ಯ ರಾವ್ ಸ್ವಾಗತಿಸಿದರು, ಸಿಂಚನ ಶೆಟ್ಟಿಗಾರ್ ವಂದಿಸಿದರು, ಶರಣ್ಯ ತೃತೀಯ ಬಿಬಿಎ ನಿರೂಪಿಸಿದರು.