ಯು.ಪಿ.ಎಂ.ಸಿ ತಂಡ- ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ.

Categories:

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಾಟಕ ತಂಡವು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಇವರ ಸಹಯೋಗದೊಂದಿಗೆ, ಉಡುಪಿ ಜಿಲ್ಲೆಯ 21 ಕಡೆ ಯಶಸ್ವಿಯಾಗಿ ಪ್ರದರ್ಶಿಸಿದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟಕವು ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಮಾರ್ಚ್ 13ರಂದು 22ನೆ ಬಾರಿ ಪ್ರದರ್ಶಿಸಲ್ಪಟ್ಟು ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್, ಪ್ರತಿಷ್ಠಾನದ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ, ಉಡುಪಿಯ ಶಿಕ್ಷಣಾಧಿಕಾರಿ ಚಂದ್ರಕಲಾ, ಐ ಎಂ ಎ ಉಡುಪಿ – ಕರಾವಳಿಯ ಅಧ್ಯಕ್ಷರಾದ ಡಾ. ಸುರೇಶ್ ಶೆಣೈ, ಕಾರ್ಯದರ್ಶಿ ಡಾ. ಶರಶ್ಚಂದ್ರ, ನಿಕಟ ಪೂರ್ವ ಅಧ್ಯಕ್ಷ ಡಾ. ರಾಜಲಕ್ಷ್ಮಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಅರ್ಚನಾ ಭಕ್ತ, ಕಲಾವಿದೆ ಪದ್ಮಾಸಿನಿ ಉದ್ಯಾವರ, ವಿವೇಕಾನಂದ ಎನ್, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಆರೋಗ್ಯ ಶುಶ್ರುಷಕಿ ಮಮತಾ, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ, ಬೀದಿ ನಾಟಕದ ಸಂಯೋಜಕ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ, ಉಪನ್ಯಾಸಕರಾದ ರಾಜೇಶ್ ಕುಮಾರ್ , ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ದಯಾನಂದ, ಬೀದಿನಾಟಕದ ವಿದ್ಯಾರ್ಥಿ ಸಂಚಾಲಕ ಗಿರೀಶ್ ಕಾಮತ್, ಸಹ ಸಂಚಾಲಕ ಜೀವನ್, ವಿದ್ಯಾರ್ಥಿ ಕಲಾವಿದರಾದ ಶ್ರೇಯಾ, ವಿನಾಯಕ್, ಕೃತಿಕಾ, ಪ್ರಧಾನ್, ನಂದೀಶ್, ಸನ್ನಿಧಿ ಶೆಟ್ಟಿ, ಶಿವಾಲಿಕ, ನೇಮಾಭಾರತಿ, ಅಚ್ಚುತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *