ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕು.ವರ್ಷಾ ಕಾಮತ್ ಏಪ್ರಿಲ್ 5 ರಂದು ಯುನಿವರ್ಸಿಟಿ ಕಾಲೇಜು ಮಂಗಳೂರು ಇಲ್ಲಿಯ ಹಳೆವಿದ್ಯಾರ್ಥಿ ಸಂಘ ಆಯೋಜಿಸಿದ್ದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯ ಹಿಂದೂಸ್ತಾನಿ ಗೀತೆ ವೈಯಕ್ತಿಕ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ನಗದು ಬಹುಮಾನ ಗಳಿಸಿದ್ದಾರೆ.
ಯುಪಿಎಂಸಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಭಿನಂದನ ಪತ್ರ, ಪದಕ ಮತ್ತು ನಗದನ್ನು ಹಸ್ತಾಂತರಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಹಿಂದಿ ಉಪನ್ಯಾಸಕಿ ಶ್ರೀಮತಿ ಸುನೀತಾ ಕಾಮತ್ ಉಪಸ್ಥಿತರಿದ್ದರು.