ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮೇ 6ರಂದು ಯುಪಿಎಂಸಿ ಪ್ರಿಮಿಯರ್ ಲೀಗ್ – 24 ಕ್ರಿಕೆಟ್ ಪಂದ್ಯಾಟವು ಜರಗಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಕಾರ್ಯಕ್ರಮವನ್ನು ಕ್ರಿಕೆಟ್ ಜರ್ಸಿ ಮತ್ತು ಟ್ರೋಫಿ ಅನಾವರಣ ಮಾಡಿ ಉದ್ಘಾಟಿಸುತ್ತ ಬಿ.ಕಾಮ್ ಮತ್ತು ಬಿಬಿಎ ತರಗತಿಯ ಪಾಠಗಳಿಗೆ ಪ್ರಾಯೋಗಿಕತೆಯನ್ನು ಕಲ್ಪಿಸುವ ದೃಷ್ಟಿಯಿಂದ ಮಕ್ಕಳಿಗೇ ಜವಾಬ್ದಾರಿ ಇತ್ತು ನಡೆಸಿದ ಪಂದ್ಯಾಟವು ಇದಾಗಿದೆ. ಐಪಿಲ್ ಮಾದರಿಯಲ್ಲಿ ಆಟಗಾರರ ಏಲಂ ನಡೆಸಿ ಐದು ತಂಡಗಳನ್ನು ರಚಿಸಿ ವಿದ್ಯಾರ್ಥಿಗಳು ನಡೆಸಿದ ಈ ಪಂದ್ಯಾಟವು ನಾಯಕತ್ವವೇ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿ ಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕರಾದ ಚಂದ್ರಶೇಖರ್, ರಾಘವೇಂದ್ರ ಜಿ.ಜಿ, ಹರಿಕೇಶವ್, ಶಶಿಕಾಂತ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್, ಪ್ರವೀಣ್, ವಿದ್ಯಾರ್ಥಿ ತಂಡಗಳ ಮಾಲಕರುಗಳಾದ ಪ್ರೀತಂ ಶೆಟ್ಟಿ, ನಿಹಾಲ್ ನಾಗೇಶ್, ತುಷಾರ್, ಸಿನನ್, ಮತ್ತು ಹಳೆ ವಿದ್ಯಾರ್ಥಿ ಪ್ರಜ್ವಲ್ ಕಾಮತ್ ಉಪಸ್ಥಿತರಿದ್ದರು.
ಸಾಕ್ಷಿ ಸ್ವಾಗತಿಸಿದರು, ನಿರೀಕ್ಷ ಧನ್ಯವಾದವಿತ್ತರು, ನೌಶೀನ್ ಕಾರ್ಯಕ್ರಮ ನಿರೂಪಿಸಿದರು.