ಯುಪಿಎಂಸಿ ಕಾಲೇಜು ವಾರ್ಷಿಕೋತ್ಸವ

Categories:

ಕನಸಿನ ಸಾಕಾರತೆಗೆ ಪರಿಶ್ರಮ ಅತ್ಯವಶ್ಯ- ಶ್ರೀ ಪ್ರದೀಪ್ ಆರ್ ಭಕ್ತ

ಪ್ರತಿಯೊಬ್ಬರು ಸುಂದರ ಭವಿಷ್ಯದ ಕನಸು ಕಾಣಬೇಕು. ಕನಸಿನ ಸಾಕಾರತೆಗೆ ಪ್ರಯತ್ನವು ಅತ್ಯವಶ್ಯ. ಪ್ರಯತ್ನಕ್ಕೆ ತುರ್ತು ಯಶಸ್ಸನ್ನು ನಿರೀಕ್ಷಿಸದೆ ಹಲವಾರು ಸೋಲುಗಳನ್ನು ಅನುಭವಿಸಿದ ನಂತರ ಸಿಗುವ ಯಶಸ್ಸು ಪರಿಪೂರ್ಣವಾಗಿದ್ದು ಅದರಿಂದ ಸುಂದರ ಭವಿಷ್ಯದ ನಿರ್ಮಾಣವಾಗುವುದಾಗಿ ಕೆನರಾ ಬ್ಯಾಂಕ್ ನ ನಿವೃತ್ತ ಡಿ. ಜಿ. ಎಂ ಶ್ರೀ ಪ್ರದೀಪ್ ಆರ್ ಭಕ್ತ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 33 ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ಶ್ರೀ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು.
ಅಧ್ಯಕ್ಷ ಸ್ಥಾನದಿಂದ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಇವರು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಉಪೇಂದ್ರ ಪೈಗಳ, ಡಾ.ಮಾಧವ ಪೈಗಳ ಸಾಧನೆಯ ಯಶಸ್ಸಿನ ಹಿಂದಿರುವ ಪರಿಶ್ರಮಗಳು ಸಾರ್ವಕಾಲಿಕ ಆದರ್ಶವಾಗಿರುವುದಾಗಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾಕುಮಾರಿಯವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೂರು ವರ್ಷಗಳ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಕಾವ್ಯ ಪಿ ಶೆಟ್ಟಿ ಹಾಗೂ ಅತ್ಯುತ್ತಮ ಕ್ರಿಯಾಶೀಲ ಪ್ರಶಸ್ತಿಯನ್ನು ತೃತೀಯ ಬಿಕಾಂ ನ ಪ್ರೇಮ್ ಸಾಯಿ ರಾಘವೇಂದ್ರ ಪಡೆದುಕೊಂಡರು.
ಕಾಲೇಜಿನ ಕಛೇರಿಯ ಹಿರಿಯ ಸಿಬ್ಬಂದಿಗಳಾದ ಶ್ರೀ ವಿಠಲ ನಾಯಕ್ ಮತ್ತು ಶ್ರೀ ಶಶಿಕಾಂತ್ ಶೆಟ್ಟಿ ಇವರನ್ನು ವಿದ್ಯಾರ್ಥಿಗಳು ಸನ್ಮಾಸಿದರು.
ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ಹಮೀದ್, ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾವ್ಯ ಶೆಟ್ಟಿ ಸ್ವಾಗತಿಸಿದರು, ಪ್ರೇಮ್ ಸಾಯಿ ವಂದಿಸಿದರು, ಪ್ರಣೀತಾ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *