ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸ್ವಚ್ಛತಾ ಹೀ ಸೇವಾ ಎಂಬ ಪರಿಕಲ್ಪನೆಯಲ್ಲಿ ಮೈ ಭಾರತ್ ಪೋರ್ಟಲ್ ಆಯೋಜಿಸಿದ್ದ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚೇತನ್ ರಾಮಚಂದ್ರ ಭಟ್ ದ್ವಿತೀಯ ಬಿಬಿಎ ಪ್ರಥಮ, ಕಾಜಲ್ ಆರ್ ಬಂಗೇರ ತೃತೀಯ ಬಿಕಾಂ ದ್ವಿತೀಯ ಮತ್ತು ಶ್ರಾವ್ಯ ರಾವ್ ತೃತೀಯಾ ಬಿಕಾಂ ಪ್ರಥಮ, ಶರಣ್ಯ ನಾಯಕ್ ತೃತೀಯ ಬಿಬಿಎ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ, ಬಹುಮಾನವನ್ನು ಕಾರ್ಯಕ್ರಮದ ಅಭ್ಯಾಗತರದ ಸ್ಪಂದನಾ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕರಾದ ಶ್ರೀ ಜನಾರ್ದನ ಎಂ ವಿತರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ರಾಷ್ಟ್ರೀಯ ಸೇವಾ ಯೋಜನ ಅಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ವಂದಿಸಿದರು, ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.