ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ತೃತೀಯ ಬಿ ಬಿ ಎ ವಿದ್ಯಾರ್ಥಿ ಲೋಕೇಶ್ ಎಂ. ಜೂನ್ 1ರಂದು ಶ್ರೀನಿವಾಸ್ ಯುನಿವರ್ಸಿಟಿ ಮುಕ್ಕಾ ಇದರ ಎಂಬಿಎ ಡಿಪಾರ್ಟ್ಮೆಂಟ್ ಆಯೋಜಿಸಿದ ಮೈಂಡ್ ಮಾಸ್ಟರ್ ಅಂತರ್ಕಾಲೇಜು ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 5000 ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ ಪಡೆದಿರುತ್ತಾರೆ.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ರವರಿಗೆ ಫಲಕ ಹಸ್ತಾಂತರಿಸಿದರು.