ಶೈಕ್ಷಣಿಕ ವರ್ಷ 2024ರಲ್ಲಿ ಹೊಸತಾಗಿ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಶುಭಕಾಮನೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ 31ರಂದು ಜರಗಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿಯು ಹಂತದಿಂದ ಪದವಿಗೆ ಪ್ರವೇಶಿಸುವ ವಿದ್ಯಾರ್ಥಿಗಳ ಮನದಲ್ಲಿ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ, ಸ್ನೇಹ ಬೆಳೆಯಲು ಇದೊಂದು ಉತ್ತಮ ವೇದಿಕೆಯಾಗಿದ್ದು ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಸ್ಫೂರ್ತಿ ತುಂಬುತ್ತಾ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟರು.
ಕಾಲೇಜಿನ ಅಂತಿಮ ಬಿ.ಕಾಂ, ಬಿಬಿಎ ವಿದ್ಯಾರ್ಥಿ ಪ್ರತಿನಿಧಿಗಳಾದ ಗಿರೀಶ್ ಕಾಮತ್, ಜೀವನ್ ಕುಂದರ್, ಶ್ರೇಯಾ, ಜಮಾಲ್, ಇಫ್ರಾಜ್, ಫರೀದ್, ಸಿಂಚನ ಶೆಟ್ಟಿಗಾರ್, ಫವಾಸ್, ರಾಹೀಬ್ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾಲೇಜಿನ ಪ್ರಾಚಾರ್ಯರರು ಬಹುಮಾನಗಳನ್ನು ವಿತರಿಸಿದರು. ಉಪಪ್ರಾಚಾರ್ಯ ಶ್ರೀ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.
ಶರಣ್ಯ ತೃತೀಯ ಬಿಬಿಎ ಸ್ವಾಗತಿಸಿದರು, ಜಮಾಲ್ ತೃತೀಯ ಬಿ.ಕಾಂ ವಂದಿಸಿದರು, ತೃತೀಯ ಬಿಬಿಎ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.