ಪವರ್ ಉಡುಪಿ – ಅಭಿವಂದನಾ ಕಾರ್ಯಕ್ರಮ

Categories:

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಾರ್ಚ್ 3 ರಂದು ಪವರ್ ಉಡುಪಿ ಇದರ ವತಿಯಿಂದ ಅಭಿವಂದನಾ ಕಾರ್ಯಕ್ರಮ ಜರಗಿತು.
ಇತ್ತೀಚೆಗೆ ನಡೆದ ಪವರ್ ಪರ್ಬ 5 ನೇ ಆವೃತಿಗೆ ಸ್ವಯಂ ಸೇವಕರಾಗಿ ಭಾಗವಹಿಸಿದ್ದ ಕಾಲೇಜಿನ 23 ವಿದ್ಯಾರ್ಥಿಗಳ ಕಾರ್ಯ ಕ್ಷಮತೆಯನ್ನು ಶಾಘ್ಲಿಸಿ ಪ್ರಶಂಸಿಸಿ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಪವರ್ ಉಡುಪಿ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ರೇಣು ಜಯರಾಂ ಮಾತನಾಡಿ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಿರ್ವಹಣಾ ಶೀಲತೆಯನ್ನು ಬೆಳೆಸುವಲ್ಲಿ ನೆರವಾಗುತ್ತದೆ ಎಂದರು.
ಪವರ್ ಉಡುಪಿ ಇದರ ಅಧ್ಯಕ್ಷರಾದ ಶ್ರೀಮತಿ ತನುಜಾ ಮಾಬೆನ್ ರವರು ಮಾತನಾಡಿ ಮುಂದಿನ ನಿಮ್ಮ ಬಯೋಡೇಟಾ ದಲ್ಲಿ ಪವರ್ ಪರ್ಬದಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಬಹುದಾಗಿದೆ ಎಂದರು. ಉದ್ಯಮಿ ಮತ್ತು ಪವರ್ ಉಡುಪಿ ಯ ಸದಸ್ಯೆ ಶ್ರೀಮತಿ ಸುಪ್ರಿಯಾ ಕಾಮತ್ ವಿದ್ಯಾರ್ಥಿಗಳ ವೃತ್ತಿ ಕೌಶಲವನ್ನು ಪ್ರಶಂಸಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗು ಪವರ್ ಪರ್ಬ ಆಯೋಜಕಿ ಶ್ರೀಮತಿ ಸುಗುಣ ಮುಂದಿನ ದಿನಗಳಲ್ಲಿ ನೀವೆಲ್ಲರೂ ನಮ್ಮ ತರ ಸ್ವ ಉದ್ಯೋಗ ದಲ್ಲಿ ತೊಡಗಿಸಿಕೊಳ್ಳಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಪವರ್ ಉಡುಪಿ ಯ ಉಪಾಧ್ಯಕ್ಷರಾದ ಪ್ರಿಯಾ ಕಾಮತ್, ಸದಸ್ಯರಾದ ಶಾಲಿನಿ ಬಂಗೇರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗಿರೀಶ್ ಕಾಮತ್, ಅಪೇಕ್ಷ, ಶಿವಾಲಿಕ, ವಿನಾಯಕ, ಸಿಂಚನ, ಶರಣ್ಯ, ಪ್ರಧಾನ್ ಅನಿಸಿಕೆ ವ್ಯಕ್ತಪಡಿಸಿದರು.
ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *