ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕ ದಿನಾಚರಣೆಯ ಅಂಗವಾಗಿ ಬಿ.ಕಾಮ್ ಮತ್ತು ಬಿಬಿಎ ಪದವಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಅಭಿವೃದ್ಧಿಯ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಲೈಫ್ಸ್ ಸ್ಕಿಲ್ ಟ್ರೈನರ್ ಆಗಿರುವ ನೇಚರ್ ಬೌಂಡ್ ಸಹ್ಯಾದ್ರಿ, ಅಂಕೋಲಾ ಇದರ ನಿರ್ದೇಶಕರಾದ ಶ್ರೀ ಪಿ. ಜಿ. ಕೊಣ್ಣೂರ್ ವಿದ್ಯಾರ್ಥಿಗಳಿಗೆ ಪದವಿ ಜೀವನದಲ್ಲಿ ಜೀವನ ಕೌಶಲಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಹಾಗೆಯೇ ಮುಂದಿನ ದಿನದಲ್ಲಿ ವರ್ಷಕ್ಕೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿ ಆದರೂ ಕೇವಲ ಪದವಿ ಸರ್ಟಿಫಿಕೆಟ್ ಪಡೆದ ವಿದ್ಯಾರ್ಥಿಗಳು ಸಿಗುತ್ತಾರೆ ವಿನಃ ಕೌಶಲಭರಿತ ಅಭ್ಯರ್ಥಿ ಸಿಗುವುದು ತುಂಬಾ ವಿರಳವಾಗುತ್ತಿದೆ ಎಂಬುವುದು ಖೇಧನೀಯ ಎಂದು ವಿಷಾಧಿಸಿ, ಲೈಫ್ ಸ್ಕಿಲ್ ಅತೀ ಅವಶ್ಯ ಎಂದು ಕೆಲವು ಉದಾಹರಣೆಗಳ ಮುಖೇನ ತಿಳಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೆಯೇ ಪ್ರಸ್ತುತ ಶ್ರೀ ಭಾರತೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ನಿರ್ದೇಶಕರಾದ ಶ್ರೀ ಗಿರೀಶ್ ಎಂ ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಸ್ವಾಗತಿಸಿದರು. ಶ್ರೀ ರಾಜೇಶ್ ಕುಮಾರ್ ವಂದಿಸಿದರು.
ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.