ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುತ್ಪಾಡಿ ಯ ಸತ್ಯಯುಗ ಯೋಗಾಶ್ರಮದಲ್ಲಿ ನಡೆಯುತ್ತಲಿದ್ದು ಮಾರ್ಚ್ 25ರಂದು ಎಸ್. ಡಿ . ಎಂ ಆಯುರ್ವೇದ ಆಸ್ಪತ್ರೆ ಕುತ್ಪಾಡಿ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಎಸ್. ಡಿ.ಎಂ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಲತಾ ಕಾಮತ್, ಡಾ. ವೀರಕುಮಾರ ಕೆ. ಡಾ. ಶ್ರೇಯಶ್ರಿ ಏನ್ ಸುವರ್ಣ ಇವರ ನೇತೃತ್ವದ ತಂಡದಿಂದ ಸುಮಾರು 70 ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ನೀಡಲಾಯಿತು.
ಈ ಸಂದರ್ಭದಲ್ಲಿ ಯುಪಿಎಂಸಿ ಯ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.