ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮೇ 27 ರಂದು ಅಂತರ್ಕಕ್ಷ್ಯಾ ಮೆಗಾ ಇವೆಂಟ್ ಎಕ್ಸ್ ಪ್ಲೋರಿಕಾ-24 ರ ಕರ್ಟನ್ ರೈಸರ್ ಕಾರ್ಯಕ್ರಮಕ್ಕೆ ತುಳು ಹಾಸ್ಯ ದಿಗ್ಗಜ ಶ್ರೀ ಅರವಿಂದ ಬೋಳಾರ್ ವಿದ್ಯುಕ್ತ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ, ಬೊಂಬಾಟ್ ಸಿನಿಮಾ ಯು ಟ್ಯೂಬ್ ಚಾನಲ್ ನ ಸೂರಜ್, ರವಿಶಂಕರ್ ರೈ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.