ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಸಂಘದ ವತಿಯಿಂದ ನವೆಂಬರ್ 8 ರಂದು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಜರಗಿತು.
ಸೆಬಿ SEBI ಆಯೋಜಿಸಿರುವ ಸ್ಮಾರ್ಟ್ ಇನ್ವೆಸ್ಟರ್ ಅವರ್ನೆಸ್ ಪ್ರೋಗ್ರಾಂ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಾಬು ವಿ ಭಟ್ ಪದವಿ ವಿದ್ಯಾರ್ಥಿಗಳಿಗೆ ಮ್ಯೂಚುವಲ್ ಫಂಡ್ಸ್, ಡಿಮ್ಯಾಟ್ ಖಾತೆ, ಸಣ್ಣ ಹೂಡಿಕೆ, ಉಳಿತಾಯ, ಇನ್ಸೂರೆನ್ಸ್ ಹಾಗೆಯೇ ಅಟಲ್ ಪೆನ್ಷನ್ ಯೋಜನೆಯ ಬಗೆಗೆ ಪ್ರಸ್ತುತ ಕಾಲಘಟ್ಟದ ಉದಾಹರಣೆಯ ಮೂಲಕ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.