ಇಂದಿನ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವುದೇ ಹೆಚ್ಚು, ಹೀಗಿರುವಾಗ ಕಲೆ, ಸಂಗೀತ ಮತ್ತು ಸಾಹಿತ್ಯದ ಒಲವು ನಮ್ಮ ಮನಸಿನ ಭಾವನೆಗಳನ್ನು ಅರಳಿಸುತ್ತದೆ ಎಂದು ಚಿತ್ರ ನಟ, ರಂಗ ನಟ ಹಾಗು ರಂಗಭೂಮಿ ಉಡುಪಿ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 29 ರಂದು ನಡೆದ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನಾ ನುಡಿಯಲ್ಲಿ ಸಾಹಿತ್ಯ ಬದುಕುವ ದಾರಿಯನ್ನು ತೋರಿಸುತ್ತದೆ, ನಾವು ಮತ್ತು ನಮ್ಮ ವ್ಯಕ್ತಿತ್ವ ಅರಿವಾಗಲು, ಸಂಬಂಧಗಳು ಬೆಸೆಯಲು ಸಾಹಿತ್ಯ ಅತಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೆಯೇ ನಮ್ಮ ಕಾಯ ಅಳಿದರೂ ನಮ್ಮ ಸಾಧನೆ ಸದಾ ಜನಮಾನಸದಲ್ಲಿ ಅಜರಾಮರವಾಗಿರಬೇಕು, ಜೀವನದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಖುಷಿ ಮತ್ತು ದುಃಖ ಎರಡೂ ಸಮಯದಲ್ಲೂ ಬರೆಯುವ ಅಭ್ಯಾಸ ಮೈಗೂಡಿಸಿಕೊಳ್ಳಿ, ಪ್ರಪಂಚ ತಿದ್ದುವ ಮುನ್ನ ನಮ್ಮನ್ನು ನಾವು ತಿದ್ದುಕೊಳ್ಳುವುದೇ ನಿಜವಾದ ಬದುಕು ಎಂದು ವಿದ್ಯಾರ್ಥಿಗಳಿಗೆ ತಮ್ಮ ಜೀವಾನುಭವವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ಹಿಂದಿ ಉಪನ್ಯಾಸಕಿ ಶ್ರೀಮತಿ ಸುನೀತಾ ಕಾಮತ್, ಗ್ರಂಥಾಪಾಲಕಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ಸಂಚಾಲಕ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಪ್ರಾಸ್ತಾವಿಕ ನುಡಿಗಳ ಸ್ವಾಗತಿಸಿದರು.
ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ್ ಎಸ್ ಶೆಟ್ಟಿ ವಂದಿಸಿದರು.
ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕು. ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.