ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕದ ವತಿಯಿಂದ ನವೆಂಬರ್ 15ರಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ರಿಯಲ್ ಹೀರೋ ಮತ್ತೊಂದು ಆವೃತಿ ನಡೆಸಲ್ಪಟ್ಟಿತು.
ಉಪ್ಪೂರು ಕೆ.ಜಿ ರೋಡ್ ಬಳಿಯ ಸ್ಪಂದನ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕರಾದ ಶ್ರೀ ಜನಾರ್ದನ ಎಂ ಅವರ ವಿಶೇಷ ಮಕ್ಕಳ ಲಾಲನೆ, ಪಾಲನೆ ಮತ್ತು ಪೋಷಣೆಯನ್ನು ಗುರುತಿಸಿ ಸಮ್ಮಾನಿಸಲಾಯಿತು.
ಬುದ್ಧಿಮಾಂದ್ಯ ಎನ್ನುವುದು ಸುಧಾರಣೆ ಆಗಬಹುದು ವಿನಃ ಗುಣಮುಖರಾಗುವುದಿಲ್ಲ ಆದರೆ ಬುದ್ಧಿ ಮಾಂದ್ಯತೆ ಬಾರದಿರಲು ಕಾಳಜಿಯೇ ಮದ್ದು ಎಂದು ತಿಳಿಸಿ ಹಾಗೆಯೇ ಈ ಲಕ್ಷಣಕ್ಕೆ ಕಾರಣವಾಗುವ ವಿವಿಧ ಆಯಾಮದ ಬಗೆಗೆ ವಿವರಿಸಿದರು ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ ಮಾಡಬೇಕು ಎಂದು ತೀರ್ಮಾನಿಸಿದವರು ಇಂತಹ ಸಂಸ್ಥೆಗಳಿಗೆ ಸಹಾಯ ಮಾಡಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ಎನ್ ಎಸ್ ಎಸ್ ಅಧಿಕಾರಿ ಶ್ರೀ ರಾಜೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ವಂದಿಸಿದರು.
ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.