College History Management Committee Departments Various Association Sports Page This year events Library Download the articles Course & Fees Details Online Results & Attendance Report Latest News UPMC Home Page

Placement Portal

(A Unit of Dr. T.M.A. Pai Foundation, Manipal)

One of the pioneers of

NAAC Report

Manipal

Alumni Association

Parent Teachers Association (Accredited with B++ Grade by NAAC)
Non Teaching Staff
Student Welfare Council

ACTIVITIES 2017-18

Contact
Guest Book
 

Tonse Upendra Anantha Pai

 

 

26-11-1895 to 13-12-1956

ಯು.ಪಿ.ಎಂ.ಸಿ. - ಸಹ್ಯಾದ್ರಿ ವಿಜ್ ಕ್ವಿಜ್ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ವತಿಯಿಂದ ಸಹ್ಯಾದ್ರಿ ವಿಜ್ ಕ್ವಿಜ್ ಸಾಮಾನ್ಯ ಜ್ಞಾನ ಸ್ಪರ್ಧೆ ಕಾರ್ಯಕ್ರಮವು ಫೆಬ್ರವರಿ ೨೮ ರಂದು ನಡೆಯಿತು. ಸಹ್ಯಾದ್ರಿ ಕಾಲೇಜಿನ ಪ್ರೊಫೆಸರ್ ಶ್ರೀ ಗಿರೀಶ್ ಎಂ ಹಾಗೂ ಪ್ರಥಮ ವರ್ಷ ಎಂ.ಬಿ.ಎ ವಿದ್ಯಾರ್ಥಿಗಳಾದ ದೀಪಾಲಿ, ಮಹಮ್ಮದ್ ಹಮದಾನ್, ಸುಗಂಧಿನಿ, ಪ್ರಿಯಾಂಕಾ ಇವರು ಯು.ಪಿ.ಎಂ. ಕಾಲೇಜಿನ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್, ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಅವಿನಾಶ್, ಉಪನ್ಯಾಸಕರಾದ ಶ್ರೀಮತಿ ಇಂದಿರಾ, ಶ್ರೀ ಚಂದ್ರಶೇಖರ್, ಶ್ರೀ ಗಣೇಶ್ ಕೋಟ್ಯಾನ್, ಶ್ರೀ ಜಾವೆದ್, ಶ್ರೀ ರಾಘವೇಂದ್ರ ಜಿ.ಜಿ., ಶ್ರೀ ರಾಜೇಶ್ ಕುಮಾರ್ ಮತ್ತು ಶ್ರೀ ಹರಿಕೇಶವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಯು.ಪಿ.ಎಂ.ಸಿ. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಕಾಲೇಜಿನ ೪ ತಂಡಗಳು ಮಾರ್ಚ್ ೯ ರಂದು ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್.ಟಿ.) ಬಗ್ಗೆ ವಿಶೇಷೋಪನ್ಯಾಸ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಫೆಬ್ರವರಿ ೨೨ರಂದು ಸಿ.ಎ. ಶ್ರೀಧರ್ ಕಾಮತ್ ಇವರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್.ಟಿ.) ಬಗ್ಗೆ ವಿಶೇಷೋಪನ್ಯಾಸ ಕಾರ್ಯಕ್ರಮ ಜರಗಿತು. ಕಾಲೇಜಿನ ಪ್ರಾಚಾರ‍್ಯ ಡಾ.ಮಧುಸೂದನ್ ಭಟ್, ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಪ್ರಭಾ ಕಾಮತ್ ಮತ್ತು ಶ್ರೀ ರಾಘವೇಂದ್ರ ಜಿ.ಜಿ. ಉಪಸ್ಥಿತರಿದ್ದರು. ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಕಾರ್ಕಳದ ಶ್ರೀ ಮಂಜುನಾಥ್ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ಮಟ್ಟದ ಬಾಲ್ ಬ್ಯಾಂಡ್ಮಿಟನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳು ಫಲಕವನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಇವರಿಗೆ ಹಸ್ತಾಂತರಿಸಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯು.ಪಿ.ಎಂ.ಸಿ- ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಇಂಗುಗುಂಡಿ ನಿರ್ಮಾಣ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದಲ್ಲಿ ನಡೆಯುತ್ತಿದ್ದು ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಇಂಗುಗುಂಡಿಗಳ ನಿರ್ಮಾಣ ಕಾರ್ಯವನ್ನು ಕೈಗೊಂಡರು.

ಮಣಿಪಾಲದ ಎಂ.ಐ.ಟಿ ಯ ಪ್ರೊಫೆಸರ್ ಶ್ರೀ ನಾರಾಯಣ ಶೆಣೈಯವರು ಇಂಗು ಗುಂಡಿ ನಿರ್ಮಾಣದ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶಿಬಿರಕ್ಕೆ ಭೇಟಿ ಇತ್ತು , ವಿದ್ಯಾರ್ಥಿಗಳ ಈ ವಿಧದ ಶ್ರಮದಾನ ಕೈಂಕರ್ಯವನ್ನು ಶ್ಲಾಘಿಸಿದರು.

ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಶ್ರೀಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ಶ್ರೀ ರಾಮಚಂದ್ರ ಉಪಾಧ್ಯಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್.ನಿಂದ ವಿದ್ಯಾರ್ಥಿ ಸಮಾಜಮುಖಿ

ಶರೀರದ ಯಾವುದೇ ಅಂಗದಲ್ಲಿ ಸಮಸ್ಯೆ ಉಂಟಾದರೂ ಅದರ ಪರಿಣಾಮ ಇಡಿಯ ಶರೀರದಲ್ಲಿ ಕಾಣುತ್ತದೆ. ಸಮಸ್ಯೆ ಪರಿಹಾರವಾದಾಗ ಆ ಅಂಗಕ್ಕೆ ಮಾತ್ರ ಸೌಖ್ಯ ಸಿಗುವುದಲ್ಲದೆ ಇಡಿಯ ಶರೀರಕ್ಕೆ ಸುಖಾನುಭವವಾಗುವುದು. ಹಾಗೆಯೇ ಸಮಾಜದ ಯಾವ ಮೂಲೆಯಲ್ಲಾದರೂ ಸಮಸ್ಯೆ ಕಂಡರೆ ಅದರ ಪರಿಣಾಮವನ್ನು ಇಡಿಯ ಸಮಾಜ ಎದುರಿಸ ಬೇಕಾಗುತ್ತದೆ. ಸಮಾಜದ ಆ ಒಂದು ಭಾಗದ ಸಮಸ್ಯೆ ಪರಿಹಾರವಾದಾಗ ಇಡಿಯ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯು ನೆಲೆಗೊಳ್ಳುವುದು. ಈ ನಿಟ್ಟಿನಲ್ಲಿ ಸ್ವಾರ್ಥ ಬದುಕಿನಿಂದ ಹೊರಬಂದು ವಿದ್ಯಾರ್ಥಿಗಳು ಸಮಾಜ ಮುಖಿಯಾಗಲು ರಾಷ್ಟ್ರೀಯ ಸೇವಾಯೋಜನೆ ಅನನ್ಯ ವೇದಿಕೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಅವರು ಡಿಸೆಂಬರ್ ೨೨ ರಂದು ಉಡುಪಿ, ಕುಕ್ಕಿಕಟ್ಟೆ, ಶ್ರೀಕೃಷ್ಣ ಬಾಲನಿಕೇತನದಲ್ಲಿ ಆರಂಭಗೊಂಡ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಷಣ್ಮುಖನು ಆರುಮುಖಗಳನ್ನು ಹೊಂದಿದ್ದರೂ ಒಂದೇ ಹೃದಯವನ್ನು ಹೊಂದಿರುವಂತೆ ವಿದ್ಯಾರ್ಥಿಗಳ ಮುಖಗಳು ಅನೇಕ ಇದ್ದರೂ ಅವರೆಲ್ಲರೂ ಒಂದೇ ಮನಸ್ಸಿನಿಂದ ಕ್ರಿಯಾಶೀಲರಾದಾಗ ಸಮಾಜದ ಅಭ್ಯುದಯ ಸಿದ್ಧಿಸುವುದು. ಆ ನಿಟ್ಟಿನಲ್ಲಿ ಐಕ್ಯಮತ್ಯ, ಸಾಮರಸ್ಯ, ಸಹಬಾಳ್ವೆ, ಸತ್‌ಚಿಂತನೆ ಮೊದಲಾದ ಮೌಲ್ಯಗಳನ್ನು ರಾಷ್ಟ್ರೀಯ ಸೇವಾಯೋಜನೆಯು ಕಲಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಶ್ರೀ ದಿನೇಶ್ ಕಿಣೆ, ಕುಕ್ಕಿಕಟ್ಟೆಯ ಕಂಟ್ರಾಕ್ಟರ್ ಶ್ರೀ ಶ್ರೀಧರ್ ಶೆಟ್ಟಿ, ಮಾರ್ಪಳ್ಳಿ ಬಿಲ್ಡರ್ ಹಾಗೂ ಡೆವಲಪರ್ ಶ್ರೀ ಹೇಮಂತ್ ಶೆಟ್ಟಿ, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ಶ್ರೀ ರಾಮಚಂದ್ರ ಉಪಾಧ್ಯಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಯೋಜನಾಧಿಕಾರಿ ಉಪನ್ಯಾಸಕರಾದ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ.. ಕಾರ್ಯಕ್ರಮ ನಿರ್ವಹಿಸಿದರು.

ಕಾಲೇಜು ವಾರ್ಷಿಕಾಂಕ ಸುಪ್ರಭಾ ಪರ್ಯಾಯ ಶ್ರೀಗಳವರಿಂದ ಅನಾವರಣ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೦೧೬-೧೭ರ ವಾರ್ಷಿಕಾಂಕ ಸುಪ್ರಭಾ ಇದರ ಅನಾವರಣವನ್ನು ಪರ್ಯಾಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಇತ್ತೀಚೆಗೆ ನೆರವೇರಿಸಿದರು.

ಪರ್ಯಾಯ ಪೂರ್ವಭಾವಿಯಾಗಿ ತಾನು ಯು.ಪಿ.ಎಂ.ಸಿ.ಗೆ ಭೇಟಿ ಇತ್ತಿದ್ದು ಅದರ ಪ್ರಗತಿಯನ್ನು ಮೆಚ್ಚಿಕೊಂಡಿದ್ದೇನೆ. ಡಾ.ಟಿ.ಎಂ.ಎ.ಪೈ ಪ್ರತಿಷ್ಠಾನದ ಆಡಳಿತದಲ್ಲಿರುವ ಅಂತಹ ಉನ್ನತ ಸಂಸ್ಥೆಯ ವಾರ್ಷಿಕಾಂಕವನ್ನು ಬಿಡುಗಡೆಗೊಳಿಸಲು ಸಂತೋಷವಾಗುತ್ತಿದೆ. ಸಂಸ್ಥೆಗೆ ಉತ್ತರೋತ್ತರ ಶ್ರೇಯಸನ್ನು ಶ್ರೀ ಕೃಷ್ಣಮುಖ್ಯ ಪ್ರಾಣದೇವರು ಕರುಣಿಸಲಿ ಎಂದು ಶ್ರೀಗಳು ಆಶಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ ಭಟ್ ಸಂಚಿಕೆಯ ಸಂಪಾದಕ ಶ್ರೀ ರಾಘವೇಂದ್ರ ಜಿ.ಜಿ., ಕಛೇರಿ ಸಿಬ್ಬಂದಿ ಶ್ರೀಮತಿ ಗಿರಿಜ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಯೋಗ ಗೀತೆಗಳಿಂದ ವಿಕಸಿತ ಚೇತನ ಉಪೇಂದ್ರ ಪೈಗಳು

ಯೋಗದಿಂದ ಬಾಹ್ಯ, ಗೀತೆಯ ತತ್ವಗಳ ಅನುಷ್ಠಾನದಿಂದ ಆಧ್ಯಾತ್ಮ ಹೀಗೆ ಯೋಗ ಮತ್ತು ಗೀತೆಯ ಕರ್ಮ, ಜ್ಞಾನ, ಭಕ್ತಿ ತತ್ವಗಳ ಅನುಷ್ಠಾನದಿಂದ ಸರ್ವತೋಮುಖ ವಿಕಾಸವನ್ನು ಹೊಂದಿದ ವ್ಯಕ್ತಿತ್ವ ಉಪೇಂದ್ರ ಪೈಗಳದ್ದು ಎಂಬುದಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಹೇಳಿದ್ದಾರೆ.

ಅವರು ನವೆಂಬರ್ ೨೬ ರಂದು ಕಾಲೇಜಿನ ಸಭಾಭವನದಲ್ಲಿ ನಡೆದ ಉಪೇಂದ್ರ ಪೈಗಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರು ಪ್ರತಿಷ್ಠೆಗೈದ ಶ್ರೀಕೃಷ್ಣನ ಸನ್ನಿಧಾನದಿಂದ ಉಡುಪಿಯ ಕ್ಷೇತ್ರ ಜಗದ್ವಿಖ್ಯಾತವಾಗಿದ್ದರೆ ವ್ಯವಹಾರ, ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರಗಳಲ್ಲಿ ಮಣಿಪಾಲವು ಇಂದು ಜಗದ್ವಿಖ್ಯಾತರಾಗಿರುವುದಾದರೆ ಅದು ದಿ|ಉಪೇಂದ್ರ ಪೈಗಳು ಹಾಗೂ ಸಹೋದರ ಡಾ|ಮಾಧವ ಪೈಗಳ ಪ್ರಾಮಾಣಿಕ ಪರಿಶ್ರಮದ ಫಲ. ವ್ಯವಹಾರ ರಂಗದಲ್ಲಿ ಉಪೇಂದ್ರ ಪೈಗಳ ಅನುಭವದ ಪರಿಪಾಕ ಅತ್ಯದ್ಭುತ. ಪ್ರತಿಕ್ಷೇತ್ರಗಳಲ್ಲಿ ಅವರ ನಿರ್ವಹಣ ಕೌಶಲ ಅನ್ಯಾದೃಶವಾಗಿದ್ದುದಾಗಿ ಅವರು ಈ ಸಂಧರ್ಭದಲ್ಲಿ ಹೇಳಿದರು.

ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪುಷ್ಪಾಂಜಲಿ ಸಮರ್ಪಿಸಿದರು.

ಹಸಿರೇ ಉಸಿರು- ಯುಪಿಎಂಸಿ ವಿದ್ಯಾರ್ಥಿಗಳ ವಿಶಿಷ್ಟ ಪ್ರಯೋಗ

ಉಡುಪಿಯ ನಮ್ಮ ಮನೆ ನಮ್ಮ ಮರ ಘಟಕದ ಪ್ರೇರಣೆಯಿಂದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ

ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ಹಸಿರೇ ಉಸಿರು ಎಂಬ ವಿನೂತನ ಕಾರ್ಯಕ್ರಮಕ್ಕೆ ಸೆಷ್ಟೆಂಬರ್ ೨೨ ರಂದು ಕಾಲೇಜು ಸಭಾಭವನದಲ್ಲಿ ಚಾಲನೆ ದೊರೆಯುತು.

ನಮ್ಮ ಮನೆ ನಮ್ಮ ಮರ ಘಟಕದ ಶ್ರೀ ಗುರುರಾಜ ಸನಿಲ್, ಶ್ರೀ ರವಿರಾಜ್ ಎಚ್.ಪಿ ಹಾಗೂ ಶ್ರೀ ಅವಿನಾಶ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಲೇಜಿನ ಅವರಣದಲ್ಲಿ ಗಿಡ ನೆಡುವುದರೊಂದಿಗೆ ಪ್ರಾರಂಭವಾದ ಈ ಅಭಿಯಾನ ಮುಂದಿನ ದಿನಗಳಲ್ಲಿ ಕಾಲೇಜಿನ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿ ಗಿಡ ನೆಡುವುದರೊಂದಿಗೆ ಸಂಪನ್ನವಾಗಲಿರುವುದು. ಸಾಮಾಜಿಕ ಸ್ವಾಸ್ಥ್ಯದ ಕಳವಳಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಎಲ್ಲ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂಬುದಾಗಿ ಉರಗತಜ್ಞ ಶ್ರೀ ಗುರುರಾಜ ಸನಿಲ್ ಆಭಿಪ್ರಾಯಪಟ್ಟರು

ಅಂತಿಮ ಬಿ.ಕಾಮ್ ವಿದ್ಯಾರ್ಥಿ ಶ್ರೀ ಮಹೇಶ್ ಸ್ವಾಗತಿಸಿದರು, ಶ್ರವಣ ಕುಮಾರ್ ಧನ್ಯವಾದವಿತ್ತರು.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಜರಗಿದ ಬಿಕ್ವೆಸ್ಟ್ ರಾಷ್ಟ್ರಮಟ್ಟದ ಅಂತರ್ಕಾಲೇಜು ಯು.ಜಿ.ಫೆಸ್ಟ್‌ನಲ್ಲಿ ಬಿಸಿನೆಸ್ ಕ್ವಿಜ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಕಾಲೇಜು ಪ್ರಾಚಾರ‍್ಯ ಡಾ.ಮಧುಸೂದನ್ ಭಟ್ ಇವರಿಗೆ ಹಸ್ತಾಂತರಿಸುತ್ತಿದ್ದಾರೆ. ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ಸುಸಂಸ್ಕೃತ ಸಮಾಜಕ್ಕೆ ಮಾದಕ ದ್ರವ್ಯದಿಂದ ದೂರವಿರಲು ಕರೆ

 

ಯುವ ಜನತೆಯು ರಾಷ್ಟ್ರದ ಶ್ರೇಷ್ಠ ಸಂಪತ್ತಾಗಿ ಪರಿಗಣಿತವಾಗಿದ್ದು ರಾಷ್ಟ್ರದ ಸಂಪೂರ್ಣ ಬಲ ಯುವಶಕ್ತಿಯ ಮೇಲೆ ನಿಂತಿದೆ. ಕಾಲೇಜು ಜೀವನದ ಯೌವನದ ಸಮಯದಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವ ಹೇಗೆ ರೂಪುಗೊಳ್ಳುತ್ತಿದೆಯೋ ಅದೇ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಾಗಿ ಆತನನ್ನು ಸುಸಜ್ಜಿತ ನಾಗರೀಕನನ್ನಾಗಿಸುವಲ್ಲಿ ಸಹಕಾರಿಯಾಗುತ್ತದೆ. ಇದೇ ಯುವಕರು ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾದಾಗ ಅವರ ವ್ಯಕ್ತಿತ್ವ ಸಂಪೂರ್ಣ ಕುಸಿದುಹೋಗುತ್ತದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳನ್ನು ಅರಿತು ಅವುಗಳಿಂದ ದೂರವಿರುವ ಸಂಕಲ್ಪವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಕೈಗೊಳ್ಳಬೇಕು ಎಂದು ಉಡುಪಿ ನಗರ ಪೋಲೀಸ್ ಇಲಾಖೆಯ ಉಪವರಿಷ್ಠಾಧಿಕಾರಿ (ಡಿ.ವೈ.ಎಸ್.ಪಿ.) ಶ್ರೀ ಕುಮಾರಸ್ವಾಮಿ.ಎಸ್.ಜೆ. ಹೇಳಿದ್ದಾರೆ.

ಅವರು ಸೆಪ್ಟೆಂಬರ್ ೧೮ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಉಡುಪಿ ನಗರ ಪೋಲೀಸ್ ಠಾಣೆ ಹಾಗೂ ಸರ್ವಕಾಲೇಜು ವಿದ್ಯಾರ್ಥಿ ಸಂಘ ಇವರ ಜಂಟಿ ಆಶ್ರಯದಲ್ಲಿ ಜರಗಿದ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀ ಪಿ.ವಿ.ಭಂಡಾರಿ, ಎ.ಡಿ.ಪಿ. ಶ್ರೀಮತಿ ಜ್ಯೋತಿ.ಪಿ.ನಾಯಕ್ ಮಾದಕ ದ್ರವ್ಯಗಳ ದುಪ್ಪರಿಣಾಮಗಳ ಅರಿವು ಮೂಡಿಸಿದರು. ಉಡುಪಿ ವೃತ್ತ ಪೋಲೀಸ್ ಅಧೀಕ್ಷಕ (ಸಿಪಿಐ) ಶ್ರೀ ನವೀನ್ ಚಂದ್ರ ಜೋಗಿ, ಉಡುಪಿ ನಗರ ಪೋಲೀಸ್ ಕಾಲೇಜು ಸಬ್ ಇನ್‌ಸ್ ಪೆಕ್ಟರ್ ಶ್ರೀ ಅನಂತ ಪದ್ಮನಾಭ ಕೆ.ಎ. ಸರ್ವಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀ ಅವಿನಾಶ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಗಳಾದ ನಿಶ್ವಿತಾ ಸ್ವಾಗತಿಸಿದರು. ಪನ್ನಗ ಧನ್ಯವಾದವಿತ್ತರು. ನಿಶ್ಮಿತಾ ಧನ್ಯವಾದವಿತ್ತರು. ಜೇನ್ ರೆನಿಟಾ ಡಿಮೆಲ್ಲೋ ಕಾರ್ಯಕ್ರಮ ನಿರ್ವಹಿಸಿದರು.

ವಿ.ವಿ.ಅಂತರ್ಕಾಲೇಜು ಚೆಸ್: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಹಾಗೂ ಶಾರದಾ ಕಾಲೇಜು, ಬಸ್ರೂರು ಚಾಂಪಿಯನ್ಸ್

ಕುಂಜಿಬೆಟ್ಟು ಉಪೇಂದ್ರ್ರ ಪೈ ಮೆಮೋರಿಯಲ್ ಕಾಲೇಜಿನಲ್ಲ್ಲಿ ಜರಗಿದ ಮಂಗಳೂರು ವಿ.ವಿ. ಅಂತರ್ಕಾಲೇಜು ಪುರುಷರ ಹಾಗೂ ಮಹಿಳೆಯರ ಚೆಸ್ ವಿಭಾಗದಲ್ಲಿ ಪುರುಷರ ವಿಭಾಗದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದು ಗುಲಾಬಿ ಶಿವರಾಮ ನೋಂಡಾ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ಶಾರದಾ ಕಾಲೇಜು, ಬಸ್ರೂರು ಚಾಂಪಿಯನ್ಸ್ ಪ್ರಶಸ್ತಿ ಗೆದ್ದು ಕೊಂಡಿದೆ.

ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ ಕಾಲೇಜು ಉಜಿರೆ, ತೃತೀಯ ಸ್ಥಾನವನ್ನು ಶ್ರೀ ಶಾರದಾ ಕಾಲೇಜು ಬಸ್ರೂರು ಹಾಗೂ ಚತುರ್ಥ ಸ್ಥಾನವನ್ನು ಫೀಲ್ಡ್ ಮಾರ್ಷಲ್ ಕರಿಯಪ್ಪ ಕಾಲೇಜು ಮಡಿಕೇರಿ ಗೆದ್ದು ಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ ಕಾಲೇಜು ಉಜಿರೆ, ತೃತೀಯ ಸ್ಥಾನವನ್ನು ಭಂಡಾರ್‌ಕಾರ‍್ಸ್ ಕಾಲೇಜು ಕುಂದಾಪುರ, ಚತುರ್ಥ ಸ್ಥಾನವನ್ನು ವಿವೇಕಾನಂದ ಕಾಲೇಜು, ಪುತ್ತೂರು ಗೆದ್ದುಕೊಂಡಿವೆ.

ದಿನಾಂಕ ೧೬ ರಂದು ಕಾಲೇಜಿನ ಸಭಾಭವನದಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಅಗಸ್ಟಿನ್.ಎ.ಡಯಾಸ್, ಮಲ್ಪೆಯ ಶ್ರೀ ಎನ್.ಟಿ.ಅಮೀನ್, ಬ್ರಹ್ಮಾವರದ ಪಿ.ಡಬ್ಲೂ.ಡಿ. ಕಂಟ್ರಾಕ್ಟರ್ ಶ್ರೀ ರತ್ನಾಕರ್ ಶೆಟ್ಟಿ .ಎಸ್. ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಬಿ.ಕೆ, ಡೆರೆಕ್ಸ್ ಸ್ಕೂಲ್‌ನ ನಿರ್ದೇಶಕ ಪ್ರಸನ್ನ ರಾವ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ ಮಧುಸೂದನ ಭಟ್ ಅಧ್ಯಕ್ಞರಾಗಿದ್ದರು. ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಧನ್ಯವಾದವಿತ್ತರು. ಜೇನ್ ರೆನಿಟಾ ಡಿ ಮೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಕ್ಯಾನ್ಸರ್ ರೋಗದಿಂದ ಬಳುತ್ತಿರುವ ಶಿವಮೊಗ್ಗದ ಆರ್.ಆರ್.ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಮೆಹಕ್.ಜಿ. ಇವರಿಗೆ ೧೫,೦೦೦ ರೂಪಾಯಿಗಳ ಸಹಾಯಧನವನ್ನು ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಈ ದೇಣಿಗೆಯನ್ನು ಪಾಲಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಗೆ ಹಸ್ತಾಂತರಿಸಿದರು. ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯು.ಪಿ.ಎಂ.ಸಿ. ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಆಗಸ್ಟ್ ೧೯ ರಂದು ಕಾಲೇಜು ಸಭಾ ಭವನದಲ್ಲಿ ಜರಗಿತು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಕಾಲೇಜಿನ ಚಟುವಟಿಕೆಗಳ ಅಧವಾರ್ಷಿಕ ವರದಿಯನ್ನು ಪೋಷಕರ ಮುಂದಿರಿಸಿದರು.

ಅನಂತರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀ ಟಿ.ನಾರಾಯಣ ಭಟ್ ನೂತನ ಆಧ್ಯಕ್ಷರಾಗಿಯೂ, ಶ್ರೀ ಗಣೇಶ್ ಆರ್.ರಾಯಕರ್ ಕಾರ್ಯದರ್ಶಿಗಳಾಗಿಯೂ, ಶ್ರೀ ಬಿ.ಸದಾನಂದ ರಾವ್, ಶ್ರೀಮತಿ ಪ್ರತಿಭಾ ಎಸ್.ಆಚಾರ್ಯ, ಶ್ರೀಮತಿ ಸುಕನ್ಯಾ, ಶ್ರೀಮತಿ ಪದ್ಮಾ ಪಿ.ಭಟ್, ಶ್ರೀಮತಿ ಸವಿತಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ, ಮತ್ತು ಪ್ರಾಕ್ತನ ಕಾರ್ಯದರ್ಶಿ ಶ್ರೀಮತಿ ಪದ್ಮಾ.ಪಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಕೃತಿಕಾ.ಪಿ.ರಾವ್ ಪ್ರಾರ್ಥಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ . ಕಾರ್ಯಕ್ರಮ ವಂದಿಸಿದರು.

ಕಾನೂನು ಪಾಲನೆಯಿಂದ ಸರ್ವಜನಹಿತ

ನಮ್ಮ ದೇಶದಲ್ಲಿ ವಾಹನಗಳು ಸಂಖ್ಯೆಯಲ್ಲಿ ಕಡಿಮೆ. ಆದರೆ ಅಪಘಾತಗಳು ಹೆಚ್ಚು. ಅಮೇರಿಕಾದಂತಹ ವಿದೇಶಗಳಲ್ಲಿ ವಾಹನಗಳು ಅಧಿಕ. ಆದರೆ ಅಪಘಾತಗಳು ವಿರಳ. ಸರ್ವಜನ ಹಿತಕ್ಕಾಗಿ ಮಾಡಿರುವ ಕಾನೂನುಗಳ ಬಗೆಗೆ ತೋರುವ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರುವುದಾಗಿ ಉಡುಪಿ ಜಿಲ್ಲಾ ಉಪಪೋಲಿಸ್ ವರಿಷ್ಠಾಧಿಕಾರಿ(ಡಿವೈಎಸ್‌ಪಿ) ಶ್ರೀ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಲೀಗಲ್ ಇನ್‌ಫೋ ಪೇಜಸ್ ಹಾಗೂ ಹ್ಯೂಮನ್ ರೈಟ್ಸ್ ಎಂಡ್ ಗ್ರೀವೆನ್ಸಸ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷತಾ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬೇರೆ ಬೇರೆ ರೋಗಗಳಿಗೆ ಕಾರಣಗಳಿವೆ. ಆದರೆ ಅಪಘಾತ ಮೊದಲಾದ ಆಕಸ್ಮಿಕ ದುರಂತಗಳಿಗೆ ನಿರ್ದಿಷ್ಟ ಕಾರಣವಿಲ್ಲ. ಚಾಲಕನ ಅಥವಾ ಇನ್ನೊಬ್ಬ ಚಾಲಕನ ನಿರ್ಲಕ್ಷ್ಯತನವೇ ಇಂತಂಹ ಅಪಘಾತಗಳಿಗೆ ಕಾರಣವಾಗಿದ್ದು ಇದಕ್ಕೆ ದುಬಾರಿ ಬೆಲೆಯನ್ನು ತೆರಬೇಕಾಗಿರುವುದು. ಈ ನಿಟ್ಟಿನಲ್ಲಿ ಸರ್ವಜನ ಹಿತಕ್ಕಾಗಿ ರೂಪಿಸಲಾದ ಕಾನೂನುಗಳನ್ನು ಪ್ರತಿಯೊಬ್ಬ ಚಾಲಕನೂ ಪಾಲಿಸುವಂತಾಗಬೇಕು ಎಂಬುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಉಡುಪಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಲತಾ ಕಾರ್ಯಕ್ರಮ ಉದ್ಘಾಟಿಸಿ ನ್ಯಾಯಲಯದಲ್ಲಿ ತಮ್ಮ ವಿಭಾಗದಿಂದ ಸಾರ್ವಜನಕರಿಗೆ ಲಭಿಸುವ ಸೇವೆಗಳ ಬಗೆಗೆ ಮಾಹಿತಿ ನೀಡಿದರು.

ಲೀಗಲ್ ಇನ್‌ಫೋ ಪೇಜಸ್‌ನ ಹಿರಿಯ ಸಂಪಾದಕ ಶ್ರೀ ಮೊಹಮದ್ ಇಕ್ಬಾಲ್, ಪ್ರಬಂಧಕ ಸಂಪಾದಕಿ ಸುಲ್ತಾನ್ ಇಕ್ಬಾಲ್ ಪೋಲೀಸ್ ಅಧಿಕಾರಿ ಶ್ರೀ ವಿಶ್ವನಾಥ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಗಳಾದ ಶ್ರೀರಾಮ ಸ್ವಾಗತಿಸಿದರು. ಸಿಂಧು ಧನ್ಯವಾದ ಇತ್ತರು. ಶ್ಯಾಮಲಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ.- ವಿ.ವಿ.ಅಂತರ್ಕಾಲೇಜು ಚೆಸ್ ಪಂದ್ಯಾವಳಿ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ ೧೫ ಹಾಗೂ ೧೬ ರಂದು ಮಂಗಳೂರು ವಿ.ವಿ.ಅಂತರ್ಕಾಲೇಜು ಪುರುಷರ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕರ್ನಾಟಕ ಸರಕಾರ ಸಂಪುಟ ದರ್ಜೆಯ ವಿನುಗಾರಿಕಾ, ಯುವಜನ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಮೋದ ಮಧ್ವರಾಜ್ ಪಂದ್ಯಾವಳಿಯನ್ನು ಉದ್ಘಾಟಿಸಲಿರುವರು. ಉಡುಪಿ ಮಂಗಳೂರು ಸಹಕಾರಿ ವಿನುಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಯಶ್‌ಪಾಲ್.ಎ.ಸುವರ್ಣ, ಶಿರ್ವ ಸೈಂಟ್ ಮೆರಿಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ವೇಣುಗೋಪಾಲಕೃಷ್ಣ ನೊಂಡಾ, ಡೆರಿಕ ಚೆಸ್ ಸ್ಕೂಲ್‌ನ ಸ್ಥಾಪಕರಾದ ಶ್ರೀ ಡೆರಿಕ್ ಪಿಂಟೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಸೆಪ್ಟಂಬರ್ ೧೬ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಅಗಸ್ಟಿನ್.ಎ.ಡಯಾಸ್, ಮಲ್ಪೆಯ ಶ್ರೀ ಎನ್.ಟಿ.ಅಮೀನ್, ಬ್ರಹ್ಮಾವರದ ಪಿ.ಡಬ್ಲೂ.ಡಿ. ಕಂಟ್ರಾಕ್ಟರ್ ಶ್ರೀ ರತ್ನಾಕರ್ ಶೆಟ್ಟಿ .ಎಸ್. ಪಾಲ್ಗೊಳ್ಳಲಿರುವರು.

ಈಗಾಗಲೇ ಮಂಗಳೂರು ವಿ.ವಿ.ಯ ೪೪ ಕಾಲೇಜುಗಳ ೬೪ ಪುರುಷರ ಹಾಗೂ ಮಹಿಳೆಯರ ತಂಡಗಳು ತಮ್ಮ ಭಾಗವಹಿಸುವಿಕೆಯನ್ನು ನೊಂದಾಯಿಸಿರುವುದಾಗಿ ಕಾಲೇಜಿನ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೧೯೯೬-೧೯೯೯ನೇ ಸಾಲಿನ ಬಿ.ಬಿ.ಎಂ. ತೇರ್ಗಡೆಯಾದ ವಿದ್ಯಾರ್ಥಿಗಳು ಇತ್ತೀಚೆಗೆ ಕಾಲೇಜನ್ನು ಸಂಪರ್ಕಿಸಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಉಪಾಧ್ಯಾಯಶ್ಚ ವೈದ್ಯಶ್ಚ್ಕ ಕಾರ್ಯಾಂತೇ ಅಪ್ರಯೋಜಕ: (ಉಪಾಧ್ಯಾಯರು ಹಾಗೂ ವೈದ್ಯರು ಕಾರ್ಯಾನಂತರ ಸ್ಮರಿಸಲ್ಪಡುವುದಿಲ್ಲ) ಎಂಬ ಗಾದೆ ಮಾತನ್ನು ೨೦ ವರ್ಷಗಳ ಬಳಿಕ ವಿದ್ಯಾಲಯವನ್ನು ಸಂಪರ್ಕಿಸಿ ತಮಗೆ ಕಲಿಸಿದ ಶಿಕ್ಷಕರಿಗೆ ಕೃತಜ್ಞತೆ ತೋರುವ ಮೂಲಕ ಇಲ್ಲಿಯ ವಿದ್ಯಾರ್ಥಿಗಳು ಹುಸಿಯಾಗಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಜಲಸಂರಕ್ಷಣೆ ಮಾಹಿತಿ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮಹಿಳಾ ಸಂಘ ದಿಶಾ ಇವರ ಸಂಯುಕ್ತ ಆಶ್ರಯದಲ್ಲಿ ಜಲಸಂರಕ್ಷಣೆ ಮಾಹಿತಿ ಕಾರ್ಯಕ್ರಮ ಆಗಸ್ಟ್ ೧೭ರಂದು ನಡೆಯಿತು. ಕಲ್ಯಾಣಪುರದ ಸಂಪನ್ಮೂಲ ವ್ಯಕ್ತಿ ಶ್ರೀ ಜೋಸೆಪ್ ರೆಬೆಲ್ಲೋ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬದುಕಿನ ಮೂಲಭೂತ ಸೌಲಭ್ಯಗಳಲ್ಲಿ ಪ್ರಮುಖವಾದ ನೀರಿನ ಅಭಾವ ಇಂದಿನ ದಿನಗಳಲ್ಲಿ ತಾಂಡವವಾಡುತ್ತಿದ್ದು ಇದು ಪ್ರಾಂತ ಪ್ರಾಂತಗಳ, ರಾಜ್ಯ ರಾಜ್ಯಗಳ, ದೇಶದೇಶಗಳ ಜಗಳಗಳಿಗೂ ಕಾರಣವಾಗಿದೆ. ಕ್ಷಾಮ, ಡಾಮರಗಳ ಸಂದರ್ಭಗಳಲ್ಲಿ ನೀರಿನ ಹಾಹಾಕಾರ ತಲೆದೋರಿದಾಗ ಜನರ ಬವಣೆ ಅಸದಳವಾಗಿದ್ದು ಈ ನಿಟ್ಟಿನಲ್ಲಿ ಆಧಿದೈವಿಕ ತಾಪಗಳನ್ನು ಎದುರಿಸಲು ತತ್‌ಕ್ಷಣದಲ್ಲಿ ನೀರಿನ ಅವಶ್ಯಕತೆಯಿದ್ದು ಅದಕ್ಕಾಗಿ ಜಲಸಂರಕ್ಷಣೆ ಅತ್ಯವಶ್ಯ ಎಂದು ಹೇಳಿದರು.

ಮಳೆ ನೀರ ಕೊಯ್ಲು ಹಾಗೂ ಸಂಗ್ರಹಿಸಿದ ನೀರಿನ ಸಂರಕ್ಷಣಾ ವಿಧಾನವನ್ನು ಸಾಕ್ಷ್ಯ ಚಿತ್ರಗಳ ಮೂಲಕ ಈ ಸಂದರ್ಭದಲ್ಲಿ ಪ್ರದರ್ಶಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ , ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ದಿಶಾ ಮಹಿಳಾ ಸಂಘದ ಸಂಯೋಜಕರಾದ ಶ್ರೀಮತಿ ಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿ ರೆನಿಟಾ ಸ್ವಾಗಿತಿಸಿದರು. ರಂಜೀನ್ ಧನ್ಯವಾದ ಇತ್ತರು. ಅಂಕಿತಾ ಕಾರ್ಯಕ್ರಮ ನಿರ್ವಹಿಸಿದರು.

ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಎನ್ ಎಸ್ ಎಸ್. ಕ್ಯಾಂಪ್

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕೊಳಲಗಿರಿ ಸಾಲ್ಮರ ಸವಿಪದ ಕುದ್ರುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಪಂದನ ವಿಶೇಷ ಮಕ್ಕಳ ತರಬೇತಿ ಶಾಲೆಯ ಪರಿಸರದಲ್ಲಿ ಒಂದು ದಿನದ ಶ್ರಮದಾನ ಕಾರ್ಯಕ್ರಮ ನಡೆಯಿತು.

ಸ್ಪಂದನ ವಿಶೇಷ ಮಕ್ಕಳ ತರಬೇತಿ ಶಾಲೆಯ ಸಂಚಾಲಕರಾದ ಶ್ರೀ ಜನಾರ್ದನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿನ ತಾಂತ್ರಿಕ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ದೈಹಿಕ ಶ್ರಮದ ಕೊರತೆ ಇದ್ದು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮದಾನದ ಮಹತ್ವವನ್ನರಿತು ಪ್ರಾಯೋಗಿಕವಾಗಿ ಅದನ್ನು ನಡೆಸಿದಾಗ ಶಾಂತಿ, ನೆಮ್ಮದಿ ಹಾಗೂ ಆರೋಗ್ಯಕರವಾದ ಬದುಕು ಅವರದ್ದಾಗುವುದಾಗಿ ಹೇಳಿದರು.

ಕಾಲೇಜಿನ ಎನ್ ಎಸ್ ಎಸ್ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್. ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಉಪನ್ಯಾಸಕಿ ಇಂದಿರಾ ಸ್ಪಂದನ ಶಾಲೆಯ ಶ್ರೀ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಉಪನ್ಯಾಸಕರಾದ ಶ್ರೀ ರಾಜೇಶ್ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು ಹಾಗೂ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

 

ಸ್ವಾತಂತ್ರ್ಯೋತ್ಸವ

ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ ೭೧ ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಬೆಂಗಳೂರು ಶಾಖೆಯ ಅಧ್ಯಕ್ಷರಾದ ಸಿ.ಎ. ಅನಿಲ್ ಕುಮಾರ್ ಇವರು ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶವನ್ನಿತ್ತರು. ಕಾಲೇಜಿನ ಪ್ರಾಚಾರ್ಯರಾದ ಡಾ| ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಉಡುಪಿ ವಲಯ ಸಿ.ಎ.ಶಾಖಾಧ್ಯಕ್ಷರಾದ ಶ್ರೀಮತಿ ರೇಖಾ ದೇವನಾಂದ ಹಾಗೂ ಉಡುಪಿ ವಲಯದ ಸದಸ್ಯರು, ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭವ್ಯ ಕನಸುಗಳ ಸಾಕಾರತೆಗೆ ಕರೆ

ಹಿಂದೆ ಒಂದು ಕಾಲ ಇತ್ತು. ಮಿತ ಸಂತತಿ ದೂರವಿದ್ದ ಸಮಯ. ಹೆತ್ತವರಿಗೆ ಸರಿಯಾದ ಶಿಕ್ಷಣವಿಲ್ಲ. ಭವಿಷ್ಯದ ಗುರಿಯ ಕಲ್ಪನೆ ಇಲ್ಲ. ಹೇಗೋ ಏನೋ ಸ್ವಯಂ ಬದುಕು ರೂಪಿತವಾಗುತ್ತಿತ್ತು. ಆದರೆ ಇಂದು ಹಾಗಿಲ್ಲ. ಪ್ರತಿ ವಿದ್ಯಾರ್ಥಿಯ ಹಿಂದೆ ಸುಶಿಕ್ಷಿತ ಪೋಷಕರು, ಗುರುಗಳು, ಅವರ ಭವಿಷ್ಯ ನಿರ್ಧರಿಸುವಲ್ಲಿ ಸಹಕರಿಸುತ್ತಾರೆ. ಗುರಿ ತಾನಾಗಿಯೇ ನಿರ್ಮಿತವಾಗುತ್ತ್ತದೆ. ಅದನ್ನು ತಲುಪುವ ಕಠಿಣ ಪರಿಶ್ರಮ ಮಾತ್ರ ವಿದ್ಯಾರ್ಥಿಗಳ ಕರ್ತವ್ಯ, ವಾಣಿಜ್ಯ ಹಾಗೂ ವ್ಯವಹಾರ ಆಡಳಿತ ಕ್ಷೇತ್ರಗಳಲ್ಲಿ ಇಂದು ಸಾಕಷ್ಟು ಅವಕಾಶವಿದ್ದು ಅವುಗಳನ್ನು ಬಳಸುವತ್ತ ಸುಂದರ ಕನಸುಗಳನ್ನು ವಿದ್ಯಾರ್ಥಿಗಳು ಹೊಂದಿ ಪ್ರಾಮಾಣಿಕ ಪ್ರಯತ್ನದ ಮೂಲಕ ಕನಸುಗಳ ಸಾಕರತೆಯತ್ತ ಸಾಗಿದಾಗ ಯಶಸ್ವಿ ಜೀವನವನ್ನು ನಡೆಸಬಹುದು ಎಂದು ಹೆಬ್ರಿಯ ಎಸ್.ಆರ್.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಹೇಳಿದರು.

ಅವರು ಆಗಸ್ಟ್ ೧೧ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡುತ್ತಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ಪದ್ಮಾಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಅರ್ಥಶಾಸ್ತ್ರ ಸಾಧಕ ವಿದ್ಯಾರ್ಥಿಗಳ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. ಟ್ಯಾಲಿ ಸರ್ಟಿಫೈಡ್ ಕೋರ್ಸ್‌ಗೆ ಚಾಲನೆ

ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಟ್ಯಾಲಿ ಅರಿವು ಅತ್ಯವಶ್ಯವಾಗಿದ್ದು ಕಾಲೇಜುಗಳಲ್ಲಿ ದೊರೆಯುವ ಟ್ಯಾಲಿ ಕೋರ್ಸ್ ತರಬೇತಿಯ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್‌ನ ಆಡಳಿತಾಧಿಕಾರಿ ಶ್ರೀಮತಿ ಗಾಯತ್ರಿ ಉಪಾಧ್ಯಾಯ ಹೇಳಿದರು.

ಅವರು ಆಗಸ್ಟ್ ೮ ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಟ್ಯಾಲಿ ಸಂಸ್ಥೆ ಬೆಂಗಳೂರು ಇದರ ಮಾನ್ಯತೆ ಪಡೆದಿರುವ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ (ಮೈಸ್) ವತಿಯಿಂದ ಪ್ರಾರಂಭವಾದ ಟ್ಯಾಲಿ ಸರ್ಟಿಫೈಡ್ ಕೋರ್ಸ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಟ್ಯಾಲಿ ತರಗತಿಯ ಜೊತೆಗೆ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಅಭ್ಯಾಸ ತರಗತಿಗಳನ್ನೂ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಸಿಬಿ ಪೌಲ್ ಸ್ವಾಗತಿಸಿದರು ಮತ್ತು ಶ್ರೀಮತಿ ಪ್ರಭಾ ಕಾಮತ್ ವಂದಿಸಿದರು.

ವನಮಹೋತ್ಸವ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು ಆಗಸ್ಟ್ ೫ ರಂದು ಕಾಲೇಜು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಸಿಗಳನ್ನು ನೆಡುವ ಮೂಲಕ ಆವರಣ ಸ್ವಚ್ಛತಾ ಕೆಲಸವನ್ನು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಕೈಗೊಂಡರು.

ಅಂತರ್ತರಗತಿ ಚರ್ಚಾ ಕೂಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಆಗಸ್ಟ್ ೪ ರಂದು ಅಂತರ್ತರಗತಿ ಚರ್ಚಾ ಕೂಟವನ್ನು ಆಯೋಜಿಸಿದರು. ನಮ್ಮ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಯುವಜನರ ಮೇಲೆ ಮಾಧ್ಯಮಗಳ ಪರಿಣಾಮ ಈ ವಿಚಾರಗಳಲ್ಲಿ ವಿದ್ಯಾರ್ಥಿಗಳು ಪರವಿರೋಧ ಚರ್ಚೆಯನ್ನು ಮಂಡಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ಮಹೇಶ್ ಮತ್ತು ಅಂಕಿತಾ ಕಾರ್ಯಕ್ರಮ ನಿರ್ವಹಸಿದರು. ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಉಪಸಂಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಮತ್ತು ಗ್ರಂಥಪಾಲಕಿ ಶ್ರೀಮತಿ ಪಲ್ಲವಿ.ಕೆ. ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಗಳಾದ ಕುಮಾರಿ ನಿಶ್ಮಿತಾ ಸ್ವಾಗತಿಸಿದರು ಮತ್ತು ಕುಮಾರಿ ಶ್ಯಾಮಲಾ ಗೋಪಾಲ್ ಭಟ್ ವಂದಿಸಿದರು.

ಯು.ಪಿ.ಎಂ.ಸಿ. ಯುವ ರೆಡ್‌ಕ್ರಾಸ್ ಘಟಕ ಉಧ್ಪಾಟನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಘಟಕದ ಸಭಾಪತಿಗಳಾದ ಡಾ.ಉಮೇಶ್ ಪ್ರಭು ಜುಲೈ ೨೦ರಂದು ನೆರವೇರಿಸಿದರು.

ಭೂಕಂಪ, ಕ್ಷಾಮಡಾಮರಗಳು, ನೆರೆ ಮೊದಲಾದ ಪ್ರಾಕೃತಿಕ ವಿಕೋಪಗಳಿಗೆ ತತ್‌ಕ್ಷಣದಲ್ಲಿ ಸ್ಪಂದಿಸುವ ಸ್ವಯಂ ಪ್ರೇರಣಾ ಮನೋಭಾವವನ್ನು ಯುವ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಘಟಕದ ಉಪ ಸಭಾಪತಿಗಳಾದ ಡಾ. ಅಶೋಕ್ ಕುಮಾರ್ ವೈ.ಜಿ. ಇವರು ಸ್ವಯಂ ಪ್ರೇರಿತ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ರೆಡ್‌ಕ್ರಾಸ್ ಘಟಕದ ಕೋಶಾಧಿಕಾರಿ ಡಾ.ರಾಮಚಂದ್ರ ಕಾಮತ್, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಅಧ್ಯಾಪಕ ಸಲಹೆಗಾರ ಶ್ರೀ ಜಾವೆದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಗಳಾದ ಕುಮಾರಿ ನಮಿತಾ ವಂದಿಸಿದರು ಮತ್ತು ಕುಮಾರಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

ವ್ಯವಹಾರ ಆಡಳಿತ ಪದವಿಗೆ ಅವಕಾಶಗಳು ವಿಪುಲ

ಬ್ಯಾಂಕಿಂಗ್ ವ್ಯವಹಾರ, ಸೇವಾ ಕ್ಷೇತ್ರಗಳು, ವೈದ್ಯಕೀಯ, ಸ್ವೋದ್ಯೋಗ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ವಿಪುಲ ಅವಕಾಶ ಇರುವ ವೃತ್ತಿಪರ ಪದವಿ ವ್ಯವಹಾರ ಆಡಳಿತ (ಬಿಸಿನೆಸ್ ಮ್ಯಾನೇಜ್‌ಮೆಂಟ್) ಎಂದು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಮಣಿಪಾಲ ಇಲ್ಲಿಯ ಕ್ಯಾಟ್ ತರಬೇತುದಾರರಾದ ಡಾ. ರಾಜೇಂದ್ರ ಕಾಮತ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜುಲೈ ೧೮ ರಂದು ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಎಂ.ಬಿ.ಎ. ಪದವೀಧರರಿಗೆ ಇರುವ ಮುಕ್ತ ಅವಕಾಶಗಳ ಬಗೆಗೆ ಮಾಹಿತಿ ನೀಡುತ್ತಾ ಈ ಮಾತನ್ನು ಹೇಳಿದರು. ಕ್ಯಾಟ್, ಮ್ಯಾಟ್, ಸಿಮ್ಯಾಟ್ ಮೊದಲಾದ ಎಂ.ಬಿ.ಎ. ಪ್ರವೇಶದ ಪೂರ್ವಭಾವಿ ಪರೀಕ್ಷೆಗಳ ವಿವರಗಳು, ಅವುಗಳ ವಿಷಯಗಳು, ಅಧ್ಯಯನದ ಕ್ರಮ ಈ ಬಗೆಗೆ ಕೂಲಂಕುಷವಾದ ಮಾಹಿತಿಯನ್ನು ಮಣಿಪಾಲದ ಐ.ಎಮ್.ಎಸ.ನ ಕ್ಯಾಟ್ ತರಬೇತುದಾರರಾದ ಶ್ರೀ ಯೋಗೀಶ್ ದೀಕ್ಷಿತ್ ಈ ಸಂದರ್ಭದಲ್ಲಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವೃತ್ತಿ ಮಾರ್ಗದರ್ಶನ ಅಧ್ಯಾಪಕ ಸಲಹೆಗಾರ ಶ್ರೀ ಜಾವೆದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರೀತಿ ವಂದಿಸಿದರು ಮತ್ತು ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

ಯು.ಪಿ.ಎಂ.ಸಿ - ಜಿಎಸ್‌ಟಿ ವಿಶೇಷೋಪನ್ಯಾಸ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜುಲೈ ೧೭ ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗೆಗೆ ವಿಶೇಷೋಪನ್ಯಾಸ ಕಾರ್ಯಕ್ರಮ ಜರಗಿತು. ಮುಂಬೈಯ ಅಲ್ಟ್‌ಫ್ಲೋ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಿಎ.ಆದಿತ್ ದೇವಾನಂದ್ ಈ ಕಾರ್ಯಕ್ರಮ ನಡೆಸಿಕೊಟ್ಟರು. ಒಂದು ದೇಶ ಒಂದೇ ತೆರಿಗೆ ನಿಯಮದಡಿ ದೇಶ ಆರ್ಥಿಕ ಸುಭದ್ರತೆಯತ್ತ ಸಾಗುವ ಪರಿಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿ ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ವಾಣಿಜ್ಯ ಹಾಗೂ ಮೆನೇಜ್‌ಮೆಂಟ್ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಜ್ಞಾನ ಗಂಗೆಯ ಅಭಿಷೇಕ ಗುರುವಿನಿಂದ ಸಾಧ್ಯ

ಜ್ಞಾನ ನಿಂತ ನೀರಾಗಬಾರದು. ಅದು ಹರಿಯುವ ಗಂಗಾ ಪ್ರವಾಹ ಆಗಬೇಕು. ಸಂಪಾದಿತ ಜ್ಞಾನವನ್ನು ಮಕ್ಕಳ ಮಟ್ಟಕ್ಕೆ ಇಳಿದು ಅವರ ಪುಟ್ಟ ಹೃದಯಕ್ಕೆ ತಲುಪಿಸುವ ಕಲೆಗಾರಿಕೆಯನ್ನು ಗುರು ಹೊಂದಿರಬೇಕು. ಸಂಪಾದಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗಿ ತಿಳಿಸಿಕೊಡುವ ಗುರುಗಳು ಶ್ರೇಷ್ಠ ಶಿಕ್ಷಕರಾಗಿ ಪರಿಗಣಿಸಲ್ಪಡುತ್ತಾರೆ ಎಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಹೇಳಿದರು.

ಅವರು ಜುಲೈ ೧೨ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಹಮ್ಮಿಕೊಂಡ ನೈತಿಕ ಶಿಕ್ಷಣ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಗುರುವಿನ ಮಹತ್ವನ್ನು ವಿವರಿಸುತ್ತ ಮಾತನಾಡುತ್ತಿದ್ದರು. ಗುರುಗಳ ಬೋಧನೆ ಎಲ್ಲ ವಿದ್ಯಾರ್ಥಿಗಳಿಗೆ ಸಮಾನವಾಗಿದ್ದು ವಿದ್ಯಾರ್ಥಿಗಳ ಗ್ರಹಣ ಶಕ್ತಿ ವಿಭಿನ್ನವಾಗಿರುತ್ತದೆ. ಮಂದಮತಿಗಳನ್ನು ತೀಕ್ಷ್ಣ ಗ್ರಾಹಿತ್ವ ಮಟ್ಟಕ್ಕೆ ಏರಿಸಿ ಸಮಾಜದಲ್ಲಿ ಅವರಿಗೂ ಮನ್ನಣೆ ಸಿಗುವಂತೆ ಮಾಡುವ ಗುರು ಎಲ್ಲೆಡೆ ಮಾನ್ಯನಾಗುವನು. ಸ್ವಯಂ ಸಂಶಯ ರಹಿತರಾಗಿ ವಿದ್ಯಾರ್ಥಿಗಳ ಸಂದೇಹಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ತಾಳ್ಮೆಯನ್ನು ಗುರುವು ಹೊಂದಿರಬೇಕು. ಒಂದೊಮ್ಮೆ ವಿದ್ಯಾರ್ಥಿಗಳ ಸಂದೇಹವನ್ನು ಆ ಕ್ಷಣದಲ್ಲಿ ಪರಿಹರಿಸಲು ಸಾಧ್ಯವಿಲ್ಲದಿದ್ದರೆ ಅನಂತರದ ದಿನಗಳಲ್ಲಿ ಗ್ರಂಥಗಳ ಅವಲೋಕನದಿಂದ ಅವುಗಳನ್ನು ಪರಿಹರಿಸಬೇಕು. ಇದರಿಂದ ಗುರುಶಿಷ್ಯ ಇಬ್ಬರ ಜ್ಞಾನವೂ ಅಭಿವೃಧ್ದಿಯಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಸಹಯೋಜನಾಧಿಕಾರಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶೀತಲ್ ಸ್ವಾಗತಿಸಿದರು. ಕುಮಾರಿ ಪರಿಮಳ ಧನ್ಯವಾದವಿತ್ತರು ಮತ್ತು ವಿಜೇತ ಕಾರ್ಯಕ್ರಮ ನಿರೂಪಿಸಿದರು.

ಪದವೀಧರರಿಗೆ ಭವಿಷ್ಯದಲ್ಲಿ ಅವಕಾಶಗಳು ಉಜ್ವಲ

ಸರಕಾರಿ, ಖಾಸಗಿರಂಗ , ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು ಸೂಕ್ತವಾದ ಮಾರ್ಗದರ್ಶನದಿಂದ ಈ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪ್ರೈಮ್ ಸಂಸ್ಥೆಯ ಪ್ರಾದೇಶಿಕ ಪ್ರಬಂಧಕ ಶ್ರೀ ಅರುಣ್ ಗುಡ್ಮಿ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜುಲೈ ೧೧ ರಂದು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಬಿ.ಕಾಂ ಮತ್ತು ಬಿ.ಬಿ.ಎಂ. ವಿದ್ಯಾರ್ಥಿಗಳಿಗೆ ಪದವಿ ನಂತರ ಇರುವ ಶೈಕ್ಷಣಿಕ ಅವಕಾಶಗಳು ಮತ್ತು ಜೌದ್ಯೋಗಿಕ ಅವಕಾಶಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

ವೃತ್ತಿ ಮಾರ್ಗದರ್ಶನ ಸಂಘದ ಅದ್ಯಾಪಕ ಸಲಹೆಗಾರ ಉಪನ್ಯಾಸಕ ಶ್ರೀ ಜಾವೆದ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿ ಚೈತ್ರಾ ಸ್ವಾಗತಿಸಿದರು. ರಂಜೀನ್ ಧನ್ಯವಾದವಿತ್ತರು.

ಎನ್.ಎಸ್.ಎಸ್. ನಿಂದ ಸರ್ವಾಂಗೀಣ ವಿಕಾಸ

ಸಾಂಪ್ರದಾಯಿಕ ಪದವಿಗಳಿಂದ ಬೌದ್ದಿಕ ವಿಕಾಸ ಮಾತ್ರ ಸಾಧ್ಯವಾಗಿದ್ದು, ವಪು(ಶರೀರ), ವಸ್ತ್ರ, ವಿದ್ಯೆ, ವಿನಯ, ವಾಕ್ ಮೊದಲಾದ ಪಂಚ ವ ಕಾರಗಳಿಂದ ಕೂಡಿದ ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಎನ್.ಎಸ್.ಎಸ್. ಸೂಕ್ತ ವೇದಿಕೆ ಎಂದು ಕೊಕ್ಕರ್ಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಆರೂರು ತಿಮ್ಮಪ್ಪ ಶೆಟ್ಟಿಯವರು ಹೇಳಿದರು.

ಅವರು ಜುಲೈ ೭ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದ್ಯಾ ವಿನಯೇನ ಶೋಭತೆ ಎಂಬ ಮಾತನ್ನು ಉಲ್ಲೇಖಿಸುತ್ತ ವಿನಯವು ವಿದ್ಯೆಗೆ ಭೂಷಣವಾಗಿದ್ದು ವಿನೀತ ವಿದ್ಯಾವಂತನು ಎಲ್ಲೆಡೆ ಮಾನ್ಯನಾಗುತ್ತಾನೆ. ವಿದ್ಯೆಯ ಜೊತೆಗಿನ ಮೌಲಿಕ ಸಂಸ್ಕಾರಗಳು ಎನ್.ಎನ್.ಎಸ್.ನಿಂದ ಲಭ್ಯವಾಗಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಎನ್.ಎನ್.ಎಸ್. ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ವಾಣಿಜ್ಯ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು. ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. - ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾ ಭವನದಲ್ಲಿ ಜುಲೈ ೭ ರಂದು ನಡೆಯಿತು.

ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಾಬಲೇಶ್ವರ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಪದವೀ ನಂತರ ಸರಕಾರಿ, ಖಾಸಗಿ ಹಾಗೂ ಸ್ವೋದ್ಯೋಗ ರಂಗಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೇಲಿನ ಜೌದ್ಯೋಗಿಕ ರಂಗಗಳಲ್ಲಿ ಯಶಸ್ವಿಯಾಗಬೇಕಾದರೆ ಪದವಿ ಜ್ಞಾನದ ಜೊತೆಗೆ ಸ್ವಯಂ ಕೌಶಲಗಳು ಬೇಕು. ಇಂತಹ ಕೌಶಲಗಳ ಅಭಿವೃದ್ದಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿದ್ದು ವಿದ್ಯಾರ್ಥಿಗಳು ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ಇತ್ತರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು.

ವಿದ್ಯಾರ್ಥಿಗಳಾದ ಶ್ರೀರಾಮ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಶ್ವಿತಾ ಧನ್ಯವಾದವಿತ್ತರು. ಸುರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಕಾಲೇಜು ವಾರ್ಷಿಕಾಂಕ ಸ್ಪರ್ಧೆ ಯು.ಪಿ.ಎಂ.ಸಿ.-ದ್ವಿತೀಯ

೨೦೧೫-೧೬ ರ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ಬಿ ವಿಭಾಗದಲ್ಲಿ (೫೦೦ ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಕಾಲೇಜು) ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕಾಂಕ ಸುಪ್ರಭಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ಮೇ ೪ರಂದು ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ನಡೆದ ಕಾಲೇಜು ಪ್ರಾಂಶುಪಾಲರ ಸಭೆಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಕೆ.ಭೈರಪ್ಪನವರು ಪ್ರಶಸ್ತಿಯನ್ನು ಯು.ಪಿ.ಎಂ.ಸಿಯ ಪ್ರಾಂಶುಪಾಲ ಡಾ.ಮಧುಸೂದನ ಭಟ್ ಇವರಿಗೆ ಹಸ್ತಾಂತರಿಸಿದರು. ಸುಪ್ರಭಾ ಸಂಚಿಕೆಯ ಪ್ರಧಾನ ಸಂಪಾದಕರಾದ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಜೊತೆಗಿದ್ದರು.

ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಕೆ.ಎಂ.ಲೋಕೇಶ್ ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಎಂ.ಖಾನ್, ಹಣಕಾಸು ವಿಭಾಗದ ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ ಪಿ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿ.ಎ. ಪರೀಕ್ಷಾ ಕೇಂದ್ರ ವಾರ್ಷಿಕೋತ್ಸವ ಸನ್ಮಾನ

ದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನ್ಯೂಡೆಲ್ಲಿ ನಡೆಸುತ್ತಿರುವ ಸಿ.ಎ. ಪರೀಕ್ಷೆಗಳ ಉಡುಪಿಯ ಏಕೈಕ ಪರೀಕ್ಷಾ ಕೇಂದ್ರ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸಿ.ಎ. ಪರೀಕ್ಷಾ ಕೇಂದ್ರದ ಹದಿನೈದನೆಯ ವರ್ಷದ ವಾರ್ಷಿಕೋತ್ಸವ ಎಪ್ರಿಲ್ ೩೦ ರಂದು ವೈಭವದಿಂದ ಜರಗಿತು.

ಮುಖ್ಯ ಅತಿಥಿಗಳಾದ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನ್ಯೂಡೆಲ್ಲಿ ಉಡುಪಿ ಶಾಖೆಯ ಮೊದಲ ಅಧ್ಯಕ್ಷರಾದ ಸಿ.ಎ. ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲೇ ಅತ್ಯಂತ ಘನತೆ ಹೊಂದಿರುವ ಸಿ.ಎ. ಪರೀಕ್ಷೆಗಳನ್ನು ಬರೆಯಲು ಉಡುಪಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ಕಲ್ಪಿಸಬೇಕಾದ ಅನಿವಾರ್ಯತೆ ಎದುರಾದಾಗ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸಿ.ಎ. ಪರೀಕ್ಷಾ ಕೇಂದ್ರದ ಉಗಮ ಅತ್ಯಂತ ಸಂತಸ ನೀಡಿದ್ದು ಕೇಂದ್ರದ ಹದಿನೈದನೆಯ ವರ್ಷದ ವಾರ್ಷಿಕೋತ್ಸವ ಐತಿಹಾಸಿಕವಾದುದಾಗಿ ಹೇಳಿದರು. ಓದಿ ಮನನ ಗೈದ ವಿಷಯಗಳನ್ನು ವೈಶಿಷ್ಟ್ಯ ಪೂರ್ಣವಾಗಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ಸಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧ್ಯವಾಗಿದ್ದು, ಸಿ.ಎ. ಪದವೀಧರರ ಕೊರತೆಯನ್ನು ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧಿಸಬೇಕು ಎಂದು ಹೇಳಿದರು.

ಸಿ.ಎ. ಉಡುಪಿ ಶಾಖೆಯ ಪ್ರಥಮ ಕಾರ್ಯದರ್ಶಿ ಶ್ರೀ ಅನಂತನಾರಾಯಣ ಪೈ ಕೆ, ಶಾಖೆಯ ಹಾಲಿ ಅಧ್ಯಕ್ಷರಾದ ಶ್ರೀಮತಿ ರೇಖಾ ದೇವಾನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಎ. ಉಡುಪಿ ಶಾಖೆಯ ಮಾಜಿ, ಹಾಲಿ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಿ.ಎ. ಪರೀಕ್ಷೆಗಳ ಮುಖ್ಯ ಅಧೀಕ್ಷಕ ಕಾಲೇಜಿನ ಪ್ರಾಚಾರ್ಯ ಡಾ ಮಧುಸೂದನ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪರೀಕ್ಷೆಗಳ ಮುಖ್ಯ ಪರಿವೀಕ್ಷಕ ಶ್ರೀ ಗಣೇಶ್ ಕೋಟ್ಯಾನ್ ಧನ್ಯವಾದವಿತ್ತರು. ಹಿಂದಿ ಉಪನ್ಯಾಸಕಿ ಶ್ರೀಮತಿ ಕೃತಿಕಾ ಶೆಣೈ ಪ್ರಾರ್ಥನೆ ಹಾಡಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಸಿ.ಎ. ಪರೀಕ್ಷಾ ಕೇಂದ್ರಕ್ಕೆ ಹದಿನೈದು ವರ್ಷಗಳ ಸಂಭ್ರಮ

ದ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನ್ಯೂಡೆಲ್ಲಿ ಇವರು ನಡೆಸುತ್ತಿರುವ ಸಿ.ಪಿ.ಟಿ., ಐ.ಪಿ.ಪಿ.ಸಿ., ಸಿ.ಎ. ಪೈನಲ್ ಮೊದಲಾದ ಸಿ.ಎ.ಗೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳಿಗೆ ಉಡುಪಿಯ ಏಕೈಕ ಪರೀಕ್ಷಾ ಕೇಂದ್ರವಾಗಿರುವ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಹದಿನೈದು ವರ್ಷಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಹದಿನಾರನೆಯ ವರ್ಷದ ಪರೀಕ್ಷೆಗಳಿಗೆ ಅಣಿಯಾಗಿದೆ.

ಈ ಸಂದರ್ಭದಲ್ಲಿ ಎಪ್ರಿಲ್ ೩೦ ರ ರವಿವಾರದಂದು ಯು.ಪಿ.ಎಂ.ಸಿ. ಕಾಲೇಜಿನಲ್ಲಿ ಸಿ.ಎ. ಪರೀಕ್ಷಾ ಕೇಂದ್ರದ ಹದಿನೈದನೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ದ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಉಡುಪಿ ವಲಯದ ಅಧ್ಯಕ್ಷರಾದ ಶ್ರೀಮತಿ ಸಿ.ಎ.ರೇಖಾ ದೇವಾನಂದ್ , ಶಾಖೆಯ ಮೊದಲ ಅಧ್ಯಕ್ಷರಾದ ಸಿ.ಎ. ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್, ಶಾಖೆಯ ಪ್ರಥಮ ಕಾರ್ಯದರ್ಶಿಗಳಾದ ಸಿ.ಎ. ಅನಂತನಾರಾಯಣ ಪೈ ಕೆ. ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿಗೆ ಅತ್ಯಂತ ಅವಶ್ಯವಾಗಿದ್ದ ಸಿ.ಎ. ಪರೀಕ್ಷಾ ಕೇಂದ್ರದ ಸ್ಥಾಪನೆ, ಯು.ಪಿ.ಎಂ.ಸಿ ಯಲ್ಲಿ ೧೫ ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಸಿ.ಎ. ಪರೀಕ್ಷೆಗಳ ಬಗೆಗಿನ ಸಿಂಹಾವಲೋಕನವನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು. ಸಿ.ಎ. ಉಡುಪಿ ವಲಯದ ಸದಸ್ಯರು, ಯು.ಪಿ.ಎಂ.ಸಿ.ಯ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿರುವರು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಯು.ಪಿ.ಎಂ.ಸಿ.ಯ ಪ್ರಾಚಾರ್ಯ ಡಾ.ಮಧುಸೂದನ ಭಟ್ ತಿಳಿಸಿದ್ದಾರೆ.

ಯು.ಪಿ.ಎಂ.ಸಿ. ಟ್ರೋಫಿ - ಪುಟ್ಬಾಲ್ ಪಂದ್ಯಾಟ ಉಧ್ಘಾಟನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಆಹ್ವಾನಿತ ಕಾಲೇಜುಗಳ ಪುಟ್ಬಾಲ್ ಪಂದ್ಯಾಟ ಯು.ಪಿ.ಎಂ.ಸಿ. ಟ್ರೋಫಿ ಇದರ ಉದ್ಘಾಟನೆಯು ಎಪ್ರಿಲ್ ೩ರಂದು ಎಂ.ಜಿ.ಎಂ. ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಜರಗಿತು.

ಉಡುಪಿ ದಕ್ಷಿಣ ಕನ್ನಡ ವಿನು ಮಾರಾಟ ಫೆಡರೇಶನ್‌ನ ಅಧ್ಯಕ್ಷರಾದ ಶ್ರೀ ಯಶ್ಪಾಲ್ ವಿ.ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಜಗದಾದ್ಯಂತ ಮಾನ್ಯತೆ ಪಡೆದ ಪುಟ್ಬಾಲ್ ಕ್ರೀಡೆಗೆ ಎಲ್ಲಡೆ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದು ಹೇಳಿದರು. ಅತಿಥಿಗಳಾದ ಉಡುಪಿ ಜಿಲ್ಲಾ ಪಂಚಾಯತ್‌ನ ಶ್ರೀಮತಿ ಗೀತಾಂಜಲಿ ಸುವರ್ಣ ಮಾತನಾಡಿ ಆರೋಗ್ಯ ವರ್ಧನೆಗೆ ಸಹಕಾರಿಯಾಗುವ ಕ್ರೀಡೆಗಳಿಗೆ ಪಾಠ್ಯಗಳಷ್ಟೇ ಪ್ರಾಮುಖ್ಯತೆ ದೊರೆಯುವಂತಾಗಲಿ ಎಂದು ಹೇಳಿದರು.

ಜೆ.ಸಿ.ಐ. ಉಡುಪಿ ಇಂದ್ರಾಳಿ ವಲಯ ಹದಿನೈದರ ಸ್ಥಾಪಕಾಧ್ಯಕ್ಷೆ ಜೆ.ಎಫ್.ಎಮ್.ಶೆರ್ಲಿ ಮನೋಜ್, ಬ್ರಹ್ಮಾವರ ಕಾಸ್‌ಲ್ಯಾಡ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಬಿಜು ಜಾಕೆಬ್, ಯು.ಪಿ.ಎಂ.ಸಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್, ಕ್ರೀಡಾ ಕೂಟದ ವಿದ್ಯಾರ್ಥಿ ಸಂಘಟಕ ತೃತೀಯ ಬಿ.ಕಾಂ.ನ ಕ್ಲೈವ್ ನೊಲಾನ್ ಮಸ್ಕರೇನಿಸ್ ಉಪಸ್ಥಿತರಿದ್ದರು.

ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಂಕಿತಾ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿ ಅನಿರುದ್ದ್ ಪಡಿಯಾರ್ ಧನ್ಯವಾದವಿತ್ತರು

 

ಕಾಲೇಜು ವಾರ್ಷಿಕಾಂಕ ಸ್ಪರ್ಧೆ-ಯು.ಪಿ.ಎಂ.ಸಿ.ಯ ಸುಪ್ರಭಾ ಕ್ಕೆ ಸತತ ಎಂಟನೇ ವರ್ಷದಲ್ಲಿ ಬಹುಮಾನ

ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ ಶೈಕ್ಷಣಿಕ ವರ್ಷ ೨೦೧೫-೧೬ ನೇ ಸಾಲಿನ ಅತ್ಯುತ್ತಮ ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ವರ್ಗ ೨ ರಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಂಚಿಕೆ ಸುಪ್ರಭಾ ದ್ವಿತೀಯ ಬಹುಮಾನ ಗಳಿಸಿಕೊಂಡಿದೆ. ಕಾಲೇಜು ವಾರ್ಷಿಕಾಂಕ ಸುಪ್ರಭಾ ಕಳೆದ ಎಂಟು ವರ್ಷಗಳಿಂದ ಸತತವಾಗಿ ಬಹುಮಾನ ಗಳಿಸುತ್ತಿದ್ದು ಸಂಚಿಕೆಯ ಸಂಪಾದಕರಾದ ಶ್ರೀ ರಾಘವೇಂದ್ರ ಜಿ.ಜಿ., ಸಂಪಾದಕ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಅಭಿನಂದಿಸಿದ್ದಾರೆ.

ಸೃಷ್ಟಿಯ ಸಾರ್ಥಕ್ಯಕ್ಕೆ ಅತ್ತೂರು ಧರ್ಮಗುರುಗಳ ಕರೆ

ಯು.ಪಿ.ಎಂ.ಸಿ.,-ಸಂಸ್ಥಾಪಕರ ಸಂಸ್ಮರಣೆ-ವಾರ್ಷಿಕೋತ್ಸವ ಸನ್ಮಾನ

ದೇವರ ಸೃಷ್ಟಿಕಾರ್ಯ ಅದ್ಭುತವಾಗಿದ್ದು ಮನುಷ್ಯರಾಗಿ ಸೃಷ್ಟಿಸಲ್ಪಟ್ಟ ನಾವು ಆ ಸೃಷ್ಟಿಯ ಸಾರ್ಥಕ್ಯವನ್ನು ಮೆರೆಯಬೇಕು. ಮಕ್ಕಳನ್ನು ತಿದ್ದಿ ತೀಡುವ ಕಾರ್ಯವು ಅವರ ವ್ಯಕ್ತಿತ್ವ ವಿಕಸನಕ್ಕಾಗಿ ಹೊರತು ಗುರುಗಳು ತಮಗೆ ಮಾಡುವ ಅವಮಾನ ಎಂದು ವಿದ್ಯಾರ್ಥಿಗಳು ಯಾವತ್ತೂ ಭಾವಿಸಬಾರದು. ಗುರುಗಳು ಪ್ರೀತಿಯಿಂದ ನೀಡುವ ಜ್ಞಾನ ಧಾರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವುದಾಗಿ ಕಾರ್ಕಳ ಅತ್ತೂರು ಸೈಂಟ್ ಲಾರೆನ್ಸ್ ಮೈನರ್ ಬೆಸಲಿಕಾದ ಧರ್ಮಗುರುಗಳಾದ ರೆ|ಫಾ| ಜಾರ್ಜ್ ಥಾಮಸ್ ಡಿಸೋಜ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೬ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ಮಾತನಾಡುತ್ತಿದ್ದರು. ಮುಖ್ಯ ಅಭ್ಯಾಗತರಾಗಿದ್ದ ಉಡುಪಿ ಸಿಎ. ಶಾಖೆಯ ಅಧ್ಯಕ್ಷರಾದ ಸಿಎ ರೇಖಾ ದೇವಾನಂದ್ ಮಾತನಾಡಿ ವಿದ್ಯಾಲಯದಿಂದ ಪಡೆದ ಶಿಕ್ಷಣದ ಉಪಯೋಗವನ್ನು ಪಡೆದುಕೊಂಡು ಸತ್ ಪ್ರಜೆಗಳಾಗಿ ಬಾಳುವಂತೆ ವಿದ್ಯಾರ್ಥಿಗಳನ್ನು ಹಾರೈಸಿದರು.

೨೦೧೬ನೇ ವರ್ಷದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ರವಿರಾಜ್ ಎಚ್.ಪಿ., ಕಾರ್ಯಾಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಪದ್ಮ ಪಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ವಾರ್ಷಿಕ ವರದಿಯನ್ನು ವಾಚಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಬಹುಮಾನ ವಿತರಣೆಯ ವರದಿ ವಾಚಿಸಿದರು. ಅಂತಿಮ ಬಿ.ಬಿ.ಎಂ ವಿದ್ಯಾರ್ಥಿನಿ ಸೋನ್ಸ್ ಮಡೋನಾ ಸ್ವಾಗತಿಸಿದರು. ವಿವೇಕ ಲಾಗ್ವಂಕರ್ ವಂದಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿ ಅನಿರುದ್ದ್ ಪಡಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

ಲೈಂಗಿಕ ಕಿರುಕುಳ - ಪ್ರತಿಬಂಧ ಮಾಹಿತಿ ಕಾರ‍್ಯಕ್ರಮ

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರತಿಬಂಧ - ನಿಷೇಧ ಮತ್ತು ಪರಿಹರ ಕಾಯ್ದೆ ೨೦೧೩ಕ್ಕೆ ಅನುಗುಣವಾಗಿ ಉದ್ಯೋಗಸ್ಥ ಮಹಿಳೆಗೆ ನೀಡುವ ಲೈಂಗಿಕ ಕಿರುಕುಳಗಳ ಪ್ರಕಾರ, ಜಾಗೃತಿ, ಪರಿಹಾರ, ಕಾನೂನು ರೀತ್ಯಾ ಕಿರುಕುಳ ನೀಡುವವರು ಯಾವ ರೀತಿ ಶಿಕ್ಷೆಗೆ ಒಳಗಾಗುತ್ತಾರೆ ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ಮಾರ್ಚ್ ೧೬ ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಮಹಿಳಾ ಸಂಘ ದಿಶಾ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಸರಕಾರ ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಹಾಗೂ ಹಿರಿಯ ವಕೀಲೆ ಶ್ರೀಮತಿ ಸೆಲೆಸ್ಟಿನ್ ಪುಷ್ಪ ಇವರು ವಿದ್ಯಾರ್ಥಿನಿಯರಿಗೆ ಈ ಮಾಹಿತಿಯನ್ನು ನೀಡಿದರು.

ದಿಶಾ ಮಹಿಳಾ ಸಂಘದ ಸಂಯೋಜಕಿ ಶ್ರೀಮತಿ ಜಯಲಕ್ಷ್ಮೀ, ಉಪನ್ಯಾಸಕಿ ಇಂದಿರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿಯರಾದ ಸುಪ್ರಿಯಾ ಸ್ವಾಗತಿಸಿದರು, ಮಹಿತಾ ವಂದಿಸಿದರು ಮತ್ತು ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯುಪಿಎಂಸಿ - ಬೃಹತ್ ರಕ್ತ ದಾನ ಶಿಬಿರ

ಫ್ರೆಂಡ್ಸ್ ಕ್ಲಬ್ ಉಡುಪಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮಾರ್ಚ್ ೧೧ ರಂದು ಬೃಹತ್ ರಕ್ತ ದಾನ ಶಿಬಿರವನ್ನು ಯು.ಪಿ.ಎಂ.ಸಿ.ಯಲ್ಲಿ ನಡೆಸಲಾಯಿತು.

ಜಿಲ್ಲಾ ಉಸ್ತುವಾರಿ, ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾಸಚಿವರಾದ ಶ್ರೀ ಪ್ರಮೋದ ಮದ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಪರೋಪಕಾರ ಪುಣ್ಯಕ್ಕೆ ಪರಪೀಡನೆ ಪಾಪಕ್ಕೆ ಕಾರಣವಾಗುವ ವ್ಯಾಸರ ಮಾತನ್ನು ಉಲ್ಲೇಖಿಸಿ ಪುಣ್ಯ ಸಂಪಾದನೆಗೆ ಅವಕಾಶ ನೀಡುವ ರಕ್ತದಾನಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ಇತ್ತರು. ರಕ್ತವು ನಿಂತ ನೀರಾಗಬಾರದು ಅದು ಹರಿಯುವ ಜ್ಙಾನ ಗಂಗಾ ಪ್ರವಾಹ ಆಗಬೇಕು ಎಂದು ಹೇಳಿದ ಅವರು ಇಂದು ದಾನ ಮಾಡಿದ ರಕ್ತ ಜಾತಿ, ಮತ ಲಿಂಗ, ಭೇದವಿಲ್ಲದೆ ಯಾರ ಪ್ರಾಣವನ್ನು ಬೇಕಾದರೂ ಕಾಪಾಡಬಹುದು. ಈ ನಿಟ್ಟಿನಲ್ಲಿ ದಾನಿಗೆ, ಸ್ವೀಕರಿಸುವವರಿಗೆ ಇಬ್ಬರಿಗೂ ಉಪಕಾರವಾಗುವ ಅತ್ಯಂತ ದೊಡ್ಡ ಸೇವೆ ರಕ್ತದಾನ ಎಂದು ಹೇಳಿದರು.

ಪ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷರಾದ ಶ್ರೀ ವಸಂತರಾವ್ ಕರಂಬಳ್ಳಿ, ಅಧ್ಯಕ್ಷರಾದ ಶ್ರೀ ಹರೀಶ್ ಕೌಡೂರು, ಪದಾದಿಕಾರಿಗಳಾದ ಶ್ರೀ ಸಂದೀಪ್, ರಾಜ್ಯ ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಕೆಮ್ಮಣ್ಣು, ಮಣಿಪಾಲದ ಕೆ.ಎಂ.ಸಿ.ಯ ರಕ್ತ ನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ಗಣೇಶ್ ಮೋಹನ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀ ರವಿರಾಜ್ ಎಚ್.ಪಿ., ಅಧ್ಯಕ್ಷರಾದ ಶ್ರೀ ಮನೋಹರ್ ಶೆಟ್ಟಿ ತೋನ್ಸೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಆಂತರ್ಯ ವಿಕಾಸದಿಂದ ವ್ಯಕ್ತಿತ್ವ ಬಲಿಷ್ಠ

ಭಯೋತ್ಪಾದನೆ, ಅತ್ಯಾಚಾರ, ಅನಾಚಾರಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿರಲು ಮನುಷ್ಯನ ಹೃದಯ ದೌಬಲ್ಯ ಕಾರಣವಾಗಿದ್ದು ಆಂತರ್ಯ ವಿಕಾಸದ ಹೊರತಾಗಿ ಹೃದಯ ಪ್ರಾಬಲ್ಯ ಸಾಧ್ಯವಾಗದು. ಪಾಪಪ್ರಜ್ಞೆಯಿಂದ ಹೃದಯ ಪರಿಶುಧ್ದವಾಗಿ ಪ್ರಾಮಾಣಿಕತೆ , ಸತ್ಯನೈಷ್ಟ್ಯ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಂಡು ಮನೋಬಲವನ್ನು ಸಾಧಿಸಿಕೊಂಡಾಗ ಮನುಷ್ಯನ ವ್ಯಕ್ತಿತ್ವ ಬಲಿಷ್ಠವಾಗುವುದಾಗಿ ಕುಂಜಿಬೆಟ್ಟು ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಹೇಳಿದ್ದಾರೆ.

ಅವರು ಮಾರ್ಚ್ ೭ ರಂದು ಶೃಂಗೇರಿಯ ರಾಜೀವ್ ಗಾಂಧಿ ಪರಿಸರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ(ಮಾನಿತ ವಿಶ್ವವಿದ್ಯಾಲಯ)ದ ಶಿಕ್ಷಾಶಾಸ್ತ್ರಿ (ಬಿ.ಎಡ್) ವಿಭಾಗದ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ನೀಡುತ್ತಾ ಮಾತನಾಡುತ್ತಿದ್ದರು.

ಪ್ರಮಾದ ಮನುಷ್ಯ ಸಹಜವಾಗಿದ್ದು ಪಶ್ಚಾತ್ತಾಪದ ಮೂಲಕ ಅದು ಪುನರಾರ್ವತಿತವಾಗದಂತೆ ಎಚ್ಚರವಹಿಸಬೇಕು. ಗೊತ್ತಿದ್ದೊ ಗೊತ್ತಿಲ್ಲದೆಯೋ ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಅನ್ಯನ್ಯ ಪ್ರಾಯಶ್ಚಿತ್ತವಾಗಿದ್ದು ಇದರಿಂದ ಮುಂದೆ ಉನ್ನತ ವ್ಯಕ್ತಿತ್ವ ಸಾಧಿಸಲು ಸಾಧ್ಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಪ್ರಾಚಾರ್ಯರಾದ ಪ್ರೊ. ಎ.ಪಿ.ಸಚ್ಚಿದಾನಂದ ಅಧ್ಯಕ್ಷರಾಗಿದ್ದರು. ಶಿಕ್ಷಾಶಾಸ್ತ್ರಿ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಕಾಂತ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಡಾ.ರಾಮಚಂದ್ರುಲು ಬಾಲಾಜಿ ಧನ್ಯವಾದವಿತ್ತರು. ಉಪನ್ಯಾಸಕರಾದ ಡಾ.ಹರಿಪ್ರಸಾದ್ ಕೆ., ಡಾ.ವೆಂಕಟರಮಣ ಭಟ್, ಡಾ. ಅರವಿಂದ ಕುಮಾರ್, ಡಾ.ನಾರಾಯಣ ವೈದ್ಯ ಉಪಸ್ಥಿತರಿದ್ದರು.

ಚಾಲಕರಿಗೆ ಸಾರಿಗೆ ನಿಯಮಗಳ ಅರಿವು ಅತ್ಯವಶ್ಯ - ಶ್ರೀ ಅಶೋಕ್ ಎಸ್.ಬಿ.

ಯಾವುದೇ ವಾಹನ ಚಲಾವಣೆಗೆ ಮುನ್ನ ಸಾರಿಗೆ ನಿಯಮಗಳ ಸೂಕ್ತ ಅರಿವು ಇರಬೇಕು. ಚಾಲನೆಗೆ ಮುನ್ನ ಪರವಾನಿಗೆ ಇನ್ಸುರೆನ್ಸ್ ಮೊದಲಾದ ಉಪಯುಕ್ತ ದಾಖಲೆಗಳನ್ನು ಅವಶ್ಯವಾಗಿ ಹೊಂದಿರಬೇಕಾಗಿದ್ದು, ಒಂದೊಮ್ಮೆ ಸೂಕ್ತ ದಾಖಲೆಗಳು ಇಲ್ಲವಾದಲ್ಲಿ ಬಾರೀ ದಂಡ ತೆರಬೇಕಾದಿತು. ಆಕಸ್ಮಿಕವಾಗಿ ಸಂಭವಿಸುವ ವಾಹನ ಅವಘಡಗಳ ಸಂದರ್ಭದಲ್ಲಿ ಪಡೆಯಬಹುದಾದ ಪರಿಹಾರಗಳ ರೂಪುರೇಖೆಗಳನ್ನು ಚಾಲಕರು ಅವಶ್ಯವಾಗಿ ತಿಳಿದಿರಬೇಕೆಂದು ಉಡುಪಿಯ ಪ್ರಸಿದ್ಧ ವಕೀಲರಾದ ಶ್ರೀ ಅಶೋಕ್ ಎಸ್.ಬಿ. ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ವತಿಯಿಂದ ಹಮ್ಮಿಕೊಳ್ಳಲಾದ ಸಾರಿಗೆ ಸುರಕ್ಷಾ ನಿಯಮಗಳ ಬಗೆಗಿನ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ,, ಶ್ರೀ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಬೃಂದಾ ಸ್ವಾಗತಿಸಿದರು, ನಿಶ್ವಿತಾ ಧನ್ಯವಾದವಿತ್ತರು, ಸುರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ - ವಾರ್ಷಿಕ ಕ್ರೀಡಾಕೂಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೬ನೇ ವಾರ್ಷಿಕ ಕ್ರೀಡಾ ಕೂಟವು ಪೆಬ್ರವರಿ ೧೭ರಂದು ಉಡುಪಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.

ಸಿ.ಎ. ಎಸ್. ಪದ್ಮನಾಭ ಕೆದ್ಲಾಯ ಬ್ರಹ್ಮಾವರ ಇವರು ಕ್ರೀಡೋತ್ಸವವನ್ನು ಉದ್ಫಾಟಿಸಿ ದೈನಂದಿನ ಜಂಜಾಟ ಒತ್ತಡಗಳನ್ನು ದೂರ ಮಾಡಿ ಮನಶಾಂತಿ ನೀಡುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಅವಿನಾಶ್. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಜಿ.ಸತ್ಯಪ್ರಕಾಶ್ ಸ್ವಾಗತಿಸಿದರು. ಈಶ್ವರ್ ಕುಮಾರ್ ಶರ್ಮಾ ಧನ್ಯವಾದವಿತ್ತರು. ಕ್ಲೈವ್ ನೊಲಾನ್ ಮಸ್ಕರೇನಸ್ ಕ್ರೀಡಾ ಸಂಹಿತೆಯನ್ನು ಬೋಧಿಸಿದರು. ಕುಮಾರಿ ಮಡೋನಾ ಎಡ್ವರ್ಡ್ ಸೋನ್ಸ್ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ - ಟ್ಯಾಲಿ ಪ್ರಮಾಣಪತ್ರ ವಿತರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಟ್ಯಾಲಿ ಸರ್ಟಿಫೈಡ್ ಕೋರ್ಸ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ ಫೆಬ್ರವರಿ ೧೬ ರಂದು ನಡೆಯಿತು.

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ (ಮೈಸ್) ಉಡುಪಿ ಇಲ್ಲಿಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಉಪಾಧ್ಯಾಯ ಇವರು ಪ್ರಮಾಣಪತ್ರವನ್ನು ವಿತರಿಸಿದರು. ಬೆಂಗಳೂರಿನ ಟ್ಯಾಲಿ ಸಂಸ್ಥೆಯಿಂದ ಮಾನ್ಯತೆ ಪಡೆದ ಉಡುಪಿಯ ಮೈಸ್‌ನ ಶಿಕ್ಷಕರು ವಿದ್ಯಾರ್ಥಿಗಳಿಗೆ ಟ್ಯಾಲಿ ತರಬೇತಿ ನೀಡಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್, ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ, ಟ್ಯಾಲಿ ತರಬೇತಿ ಕಾರ್ಯಕ್ರಮದ ಪ್ರಾಧ್ಯಾಪಕ ಸಲಹೆಗಾರರಾದ ಶ್ರೀಮತಿ ಸಿಬಿ ಪೌಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯು.ಪಿ.ಎಂ.ಸಿ. - ಸಹ್ಯಾದ್ರಿ ವಿಜ್ ಕ್ವಿಜ್ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ವತಿಯಿಂದ ಸಹ್ಯಾದ್ರಿ ವಿಜ್ ಕ್ವಿಜ್ ಸಾಮಾನ್ಯ ಜ್ಞಾನ ಸ್ಪರ್ಧೆ ಕಾರ್ಯಕ್ರಮವು ಫೆಬ್ರವರಿ ೧೪ ರಂದು ನಡೆಯಿತು. ಸಹ್ಯಾದ್ರಿ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಶ್ರೀ ರಮೇಶ್ ಕೆ.ಜಿ. ಮತ್ತು ಗಿರೀಶ್ ಎಂ ಹಾಗೂ ಪ್ರಥಮ ವರ್ಷ ಎಂ.ಬಿ.ಎ ವಿದ್ಯಾರ್ಥಿಗಳು ಯು.ಪಿ.ಎಂ. ಕಾಲೇಜಿನ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಜೊತೆಗೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್, ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಅವಿನಾಶ್, ಉಪನ್ಯಾಸಕರಾದ ಶ್ರೀಮತಿ ಸಿಬಿ ಪೌಲ್, ಶ್ರೀಮತಿ ಪ್ರಭಾ ಕಾಮತ್. ಶ್ರೀಮತಿ ಜಯಲಕ್ಷ್ಮಿ , ಶ್ರೀ ಹರಿಕೇಶವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಯು.ಪಿ.ಎಂ.ಸಿ. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಕಾಲೇಜಿನ ೪ ತಂಡಗಳು ಮಾರ್ಚ್ ೧೦ ರಂದು ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿವೆ.

ಎನಿಗ್ಮಾ 2017

ನಿಟ್ಟೆಯ ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎನಿಗ್ಮಾ 2017 ರಾಜ್ಯ ಮಟ್ಟದ ಅಂತರ್ಕಾಲೇಜು ಮ್ಯಾನೇಜ್‌ಮೆಂಟ್ ಸ್ಪರ್ಧೆಯ ಕ್ವಿಜ್ ವಿಭಾಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್, ಉಪನ್ಯಾಸಕಿ ಶ್ರೀಮತಿ ಅಶಾ ಹೆಗ್ಡೆ ಹಾಗೂ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಇವರನ್ನು ಚಿತ್ರದಲ್ಲಿ ಕಾಣಬಹುದು.

ಗಣರಾಜ್ಯೋತ್ಸವ

ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ೬೮ನೇ ವರ್ಷದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಧ್ವಜಾರೋಹಣಗೈದು ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಧ್ವಜ ಸಂಹಿತೆಯನ್ನು ಬೋಧಿಸಿದರು. ಪ್ರಥಮ ಬಿ.ಕಾಂ.. ವಿದ್ಯಾರ್ಥಿಗಳಾದ ಬೃಂದಾ ಅಮೀನ್ ಸ್ವಾಗತಿಸಿದರು, ನಿಶ್ವಿತಾ ಧನ್ಯವಾದವಿತ್ತರು, ಸುರಕ್ಷಾ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂವಹನ ಕೌಶಲದಿಂದ ಮನ್ನಣೆ

ಕೆತ್ತನೆಯಿಂದ ಶಿಲೆಯು ಶಿಲ್ಪವಾಗುವಂತೆ ವಿದ್ಯಾರ್ಥಿಗಳಲ್ಲಿರುವ ಕೌಶಲಗಳನ್ನು ಉತ್ತೇಜಿಸುವುದರಿಂದ ಶಿಲ್ಪಗಳಂತೆ ಅವರ ಸುಂದರ ವ್ಯಕ್ತಿತ್ವ ಹೊರಹೊಮ್ಮುವುದು. ಮನೆಯಲ್ಲಿ ಬಂಧುಗಳ ಜೊತೆ, ವಿದ್ಯಾಲಯಗಳಲ್ಲಿ ಗೆಳೆಯರ ಜೊತೆ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕವಾಗಿ ನಡೆಸುವ ಉತ್ತಮ ಸಂವಹನದಿಂದ ಸಮಾಜದಲ್ಲಿ ಮನ್ನಣೆ ಲಭಿಸುವುದಾಗಿ ಸಂವಹನ ತರಬೇತಿ ತಜ್ಞೆ , ಮಣಿಪಾಲದ ಶ್ರೀಮತಿ ತನುಜಾ ಮಾಬೆನ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜನವರಿ ೨೪ ರಂದು ಪ್ರಾರಂಭವಾದ ಇಪ್ಪತ್ತು ದಿನಗಳ ಇಂಗ್ಲೀಷ್ ಸಂವಹನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಇಂಗ್ಲೀಷ್ ಉಪನ್ಯಾಸಕ ಶ್ರೀ ರಾಧಾಕೃಷ್ಣ ರಾವ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

ಡಿಜಿಟಲ್ ಪೇಮೆಂಟಿಂದ ಬಲಿಷ್ಠ ಭಾರತ

ಕೃಷಿ ವಾಣಿಜ್ಯಗಳು ರಾಷ್ಟ್ರದ ಪ್ರಗತಿಗೆ ಪೂರಕವಾಗಿದ್ದು ಅವುಗಳ ಉತ್ಪಾದನೆಯ ಹೆಚ್ಚಳಕ್ಕಾಗಿ ಕೃಷಿಕರನ್ನು ಹಾಗೂ ವರ್ತಕರನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಇದ್ದು ಈ ದಿಶೆಯಲ್ಲಿ ಅವರಿಗೆ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಪ್ರಧಾನ ಮಂತ್ರಿಗಳ ಡಿಜಿಟಲ್ ಮೇಮೆಂಟ್ ವ್ಯವಸ್ಥೆಯು ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಇಟ್ಟ ದಿಟ್ಟ ಹೆಜ್ಜೆ ಎಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮೀ ಹೇಳಿದ್ದಾರೆ.

ಅವರು ಜನವರಿ ೧೨ ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಯುವ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಡಿಜಿಟಲ್ ಪೇಮೆಂಟ್ ಅಂದರೆ ನಗದು ರಹಿತ ವ್ಯವಹಾರದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ಸೇವೆಯಿಂದ ಸಿಗುವ ಯಶಸ್ಸು ಶಾಶ್ವತ

ಯಶಸ್ಸನ್ನು ಹುಡುಕಿಕೊಂಡು ಹೋಗಬಾರದು ಅದಾಗಿಯೇ ನಮ್ಮನ್ನು ಅರಸಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಲಭಿಸುವ ಯಶಸ್ಸು ಶಾಶ್ವತವಾಗಿದ್ದು ಇದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯ ಎಂದು ಕೊಡವೂರು ವಲಯದ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಭಟ್ ಹೇಳಿದರು.

ಅವರು ಡಿಸೆಂಬರ್ ೨೮ರಂದು ಕೊಡವೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಸೇವೆಯ ಜೊತೆಗೆ ಇಂದು ಅತ್ಯವಶ್ಯಕವಾದ ನಗದು ರಹಿತ ವ್ಯವಹಾರದ ಬಗ್ಗೆ ಮೊಬೈಲುಗಳ ಬಗೆಗೆ ಸಾಕಷ್ಟು ಮಾಹಿತಿಯನ್ನು ಹಳ್ಳಿಗರಿಗೆ ನೀಡುವ ಕೆಲಸವು ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಆಗಬೇಕು. ಕಾಲಕಾಲಕ್ಕೆ ಬದಲಾಗುತ್ತಿರುವ ಸಮಾಜದ ವ್ಯವಸ್ಥೆಯ ಬಗ್ಗೆ ಕೂಲಂಕುಷ ಮಾಹಿತಿಯನ್ನು ಗ್ರಾಮೀಣ ಜನತೆಗೆ ಒದಗಿಸಬೇಕು. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾರ್ಯ ತತ್ಪರರಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕೊಡವೂರು ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ನಾರಾಯಣ ಬಲ್ಲಾಳ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಎಂ.ಎಸ್.ಭಟ್. ಉದ್ಯಮಿ ಶ್ರೀ ಬಾಸ್ಕರ ಪಾಲನ್ ಬಾಚನಬೈಲು, ಮಲ್ಪೆ ಕೊಡವೂರು ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಪ್ರಭಾತ್ ಕೋಟ್ಯಾನ್, ಶ್ರೀ ದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಜಯಕರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುಂದರ.ಎ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಧನ್ಯವಾದವಿತ್ತರು. ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ನೈತಿಕತೆಯಿಂದ ಭಯ ದೂರ

ನೀತಿ ಶಬ್ದವು ಸಂಸ್ಕೃತದ ಣೀಙ ಪ್ರಾಪಣಿ ಎಂಬ ಧಾತುವಿನಿಂದ ಹುಟ್ಟಿಕೊಂಡಿದ್ದು ಪ್ರಾಪಣ ಅಂದರೆ ಒಯ್ಯುವಿಕೆ ಈ ನಿಟ್ಟಿನಲ್ಲಿ ಮನುಷ್ಯನ ವ್ಯಕ್ತಿತ್ವವನ್ನು ಅತ್ಯಂತ ಎತ್ತರಕ್ಕೆ ಒಯ್ಯುವ ಗುಣವು ನೀತಿಯಾಗಿದ್ದು ನೈತಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ನಿರ್ಭಯ ವಾತಾವರಣವನ್ನು ಕಂಡುಕೊಳ್ಳಬಹುದು ಎಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಹೇಳಿದ್ದಾರೆ.

ಅವರು ಕೊಡವೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ನೈತಿಕತೆಯ ಹಂದರ ಜೀವನವೇ ಬಲು ಸುಂದರ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಪ್ರಾಮಾಣಿಕತೆ, ಸತ್ಯನೈಷ್ಠ್ಯದ ಜೊತೆಗೆ ಪ್ರಸನ್ನ ಮನಸ್ಸಿನಿಂದ ಅಧ್ಯಾಪಕರು ತರಗತಿಯನ್ನು ಪ್ರವೇಶಿಸುವ ವಾತಾವರಣವನ್ನು ವಿದ್ಯಾರ್ಥಿಗಳು ನಿರ್ಮಿಸಬೇಕಾಗಿದ್ದು ವಿದ್ಯಾರ್ಥಿಗಳ ಜ್ಞಾನ ಪಿಪಾಸೆಯನ್ನು ಅವರ ಮಟ್ಟಕ್ಕೆ ಇಳಿದು ಬೋಧಿಸುವ ಮೂಲಕ ತಣಿಸುವ ಪ್ರಯತ್ನವನ್ನು ಅಧ್ಯಾಪಕರು ಮಾಡಬೇಕಾಗಿದೆ. ಸಾಧನೆಯ ಹಾದಿಯಲ್ಲಿ ತಪ್ಪು ಒಪ್ಪುಗಳು ಸಹಜವಾಗಿದ್ದು ಅವುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಗ್ಗಿದಾಗ ಮನುಷ್ಯನು ಜೀವನದ ಧ್ಯೇಯವನ್ನು ತಲುಪಬಹುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ , ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ., ಶ್ರೀ ಹರಿಕೇಶವ, ಶ್ರೀ ಗಣೇಶ್ ಕೋಟ್ಯಾನ್, ಶ್ರೀಮತಿ ಇಂದಿರಾ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ಲತಾ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಬಿರದ ವಿದ್ಯಾರ್ಥಿಗಳಾದ ಅನುಗ್ರಹ ಸ್ವಾಗತಿಸಿದರು. ಕಾರ್ತಿಕ್ ಕಿಣಿ ಧನ್ಯವಿತ್ತರು. ಶ್ರವಣ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಶ್ರಮದಾನದಿಂದ ಪ್ರಕೃತಿಯ ಋಣ ಮುಕ್ತಿ

ಮನುಷ್ಯನು ಪ್ರಾಣಿಗಳಿಗಿಂತ ಭಿನ್ನನಾಗಿದ್ದು ಆಹಾರ ನಿದ್ದೆಗಳು ಮಾತ್ರವಲ್ಲದೆ ಜೀವಿತ ಕಾಲದಲ್ಲಿ ಪ್ರಕೃತಿಯಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾನೆ. ನಿಲ್ಲುವ ನೆಲೆ, ಕುಡಿಯುವ ನೀರು, ತಿನ್ನುವ ಆಹಾರ, ಉಡುವ ವಸ್ತ್ರ, ತೊಡುವ ಆಭರಣ ಇವೆಲ್ಲವೂ ಪ್ರಕೃತಿಯ ಕೊಡುಗೆಗಳಾಗಿದ್ದು ರಾಷ್ಡ್ರೀಯ ಸೇವಾ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳು ನಡೆಸುವ ಶ್ರಮದಾನವು ಇಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ ಪ್ರಕೃತಿ ಮಾತೆಯ ಋಣ ಸಂದಾಯಕ್ಕೆ ಇರುವ ಉತ್ತಮ ಅವಕಾಶವಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಅವರು ಡಿಸೆಂಬರ್ ೨೪ರಂದು ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಕೊಡವೂರಿನ ನಂದಗೋಕುಲ ಶ್ರೀಕೃಷ್ಣ ಗೋಸಂರಕ್ಷಣ ಕೇಂದ್ರದಲ್ಲಿ ನಡೆಸಿದ ಶ್ರಮದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅನುಗ್ರಹಿಸುತ್ತಾ ಮಾತನಾಡುತ್ತಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ., ಶ್ರೀ ಹರಿಕೇಶವ, ಶ್ರೀಮತಿ ಇಂದಿರಾ ಬೋಧಕೇತರ ಸಿಬ್ಬಂದಿ ವರ್ಗದ ಶ್ರೀಮತಿ ಗಿರಿಜಾ ಬಾಯಿ, ವಿಠಲ ನಾಯಕ್ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ವಿಶೇಷ ಶಿಬಿರಕ್ಕೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರವು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಡವೂರು ಇಲ್ಲಿ ಡಿಸೆಂಬರ್ ೨೨ರಂದು ಚಾಲನೆಗೊಂಡಿತು.

ಪರ್ಯಾಯ ಶ್ರೀ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ದೀಪ ಬಿಳೆಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸುತ್ತ ಗ್ರಾಮೋದ್ಧಾರದ ಜೊತೆಗೆ ಸ್ವೋದ್ಧಾರವನ್ನು ಕಂಡುಕೊಳ್ಳಬಹುದಾದ ವೇದಿಕೆ ಎನ್‌ಎಸ್‌ಎಸ್ ಎಂದು ಹೇಳಿದರು. ಕಂಸ, ಜರಾಸಂಧ, ಶಿಶುಪಾಲ ಮೊದಲಾದವರ ವಧೆಯ ನಂತರ ಅವರವರ ಬಂಧುಗಳನ್ನೇ ಸಿಂಹಾಸನದಲ್ಲಿ ಕುಳ್ಳಿರಿಸಿ ತಾನು ಗೋಪಾಲಕರೊಡನೆ ಗ್ರಾಮೋದ್ಧಾರ ದೇಶೋದ್ಧಾರಕ್ಕೆ ತೆರಳಿದ ಕೃಷ್ಣನ ಆದರ್ಶವನ್ನು ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿ ಪ್ರತಿನಿಧಿಗಳು ಜೀವನದಲ್ಲಿ ಪಾಲಿಸಬೇಕೆಂದು ಕರೆ ಇತ್ತರು.

ಉಡುಪಿ ನಗರಸಭಾಧ್ಯಕ್ಷ ಶ್ರೀಮತಿ ವಿನಾಕ್ಷಿ ಮಾಧವ ಬನ್ನಂಜೆ, ಕೆ.ಎಮ್.ಎಫ್. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಗ್ಡೆ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶ್ರೀ ಗೋವಿಂದ್ ಐತಾಳ್, ಸುಮನಸಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಜಿ., ಜಿಲ್ಲಾ ಸಭಾಪತಿ, ಶುಭಾಶಯ ಸಮಿತಿ ರೋಟರಿ ಜಿಲ್ಲಾ ಉಡುಪಿಯ ಶ್ರೀಮತಿ ಪೂರ್ಣಿಮಾ ಜನಾರ್ಧನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಯ ಸಾಲ್ಯಾನ್, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಲ್ಲಿಕಾ ದೇವಿ, ಯು.ಪಿ.ಎಂ.ಸಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಶೆಟ್ಟಿ ತೋನ್ಸೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯು.ಪಿ.ಎಂ.ಸಿಯ ಪ್ರಾಂಶುಪಾಲ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಯೋಜನಾಧಿಕಾರಿ ಉಪನ್ಯಾಸಕರಾದ ಶ್ರೀ ಚಂದ್ರಶೇಖರ್ zsನ್ಯವಾದವಿತ್ತರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ.. ಕಾರ್ಯಕ್ರಮ ನಿರ್ವಹಿಸಿದರು.

ಗ್ರಂಥಾಲಯ ವಿದ್ಯಾರ್ಥಿಗಳ ಪ್ರಾಣಮಿತ್ರ

ಪದವಿಪೂರ್ವ ಪರೀಕ್ಷೆಯಲ್ಲಿ ಪ್ರತಿಶತ ೯೫ಕ್ಕೂ ಮಿಗಿಲಾದ ಅಂಕ ಪಡೆದು ಐ.ಎ.ಎಸ್ ಕಲಿಯುವ ಬಯಕೆಯಿಂದ ದೂರದ ಊರಿಂದ ಬಂದ ಒಬ್ಬ ವಿದ್ಯಾರ್ಥಿ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಅಪರಿಚಿತನಾಗಿ ಏಕಾಂಗಿತನದ ಕೊರಗನ್ನು ಅನುಭವಿಸುತ್ತಿದ್ದಾಗ ಪ್ರಾಣಸ್ನೇಹಿತನಾಗಿ ಬಂದು ಅವನಿಗೆ ಅವಶ್ಯವಾದ ಎಲ್ಲಾ ಪುಸ್ತಕಗಳನ್ನು ಒದಗಿಸಿ ಅವನ ಆಸೆ ಪರಿಪೂರ್ಣವಾಗುವಂತೆ ಮಾಡಿದ ಪ್ರಾಣಸ್ನೇಹಿತತ್ವವನ್ನು ಗ್ರಂಥಾಲಯ ಹೊಂದಿದೆ ಎಂಬುದಾಗಿ ಉಡುಪಿ, ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕ ಶ್ರೀ ಕಿಶೋರ್ ಎಚ್.ವಿ. ಹೇಳಿದ್ದಾರೆ.

ಅವರು ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ದಿನಾಂಕ ೧೯ರಂದು ನಡೆದ ಗ್ರಂಥಾಲಯಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಡೆದ ಸಾಮಾನ್ಯಜ್ಞಾನ ರಸಪ್ರಶ್ನೆ ಸ್ವರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಾಂಪ್ರ್ರದಾಯಿಕ ಪಾಠಪ್ರವಚನಗಳಿಂದ ಆಯಾವಿಷಯಗಳ ಸೀಮಿತ ಜ್ಞಾನ ಒದಗಿದರೆ ಎಲ್ಲಾವಿಷಯಗಳ ಪರಿಪೂರ್ಣ ಜ್ಞಾನವನ್ನು ಗ್ರಂಥಾಲಯಗಳ ಪುಸ್ತಕಗಳು ಒದಗಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಗ್ರಂಥಪಾಲಕಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.

ಸಾಮಾನ್ಯಜ್ಞಾನ ರಸಪ್ರಶ್ನೆಯಲ್ಲಿ ವಿಜೇತರಾದ ಅನಿರುದ್ದ್ ಪಡಿಯಾರ್, ಅಭಿಜಿತ್ ರಾವ್, ಆಜಿತ್ ಭಟ್ ಮತ್ತು ವಿವೇಕ್ ಭಟ್ ಇವರಿಗೆ ಬುಹುಮಾನಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಅನಿರುದ್ಧ ಪಡಿಯಾರ್ ಸ್ವಾಗತಿಸಿದರು, ಆಭಿಜಿತ್ ರಾವ್ ಧನ್ಯವಾದವಿತ್ತರು, ಸತ್ಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.

ಮಾಸ್ಟರ್ ಆತ್ಲೆಟಿಕ್ಸ್ ಚಾಂಪಿಯನ್‌ಶಿಪ್

೩೭ನೇ ರಾಜ್ಯಮಟ್ಟದ ಮಾಸ್ಟರ್ ಆತ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೧೬-೧೭ರ ಬೆಂಗಳೂರಿನ ವಿದ್ಯಾನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ೪೫ರ ಮೇಲ್ಪಟ್ಟ ವಿಭಾಗದಲ್ಲಿ ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಅವರು ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಯೋಗ ಗೀತೆಗಳಿಂದ ವಿಕಸಿತ ಚೇತನ ಉಪೇಂದ್ರ ಪೈಗಳು

ಯೋಗದಿಂದ ಬಾಹ್ಯ ಗೀತೆಯ ತತ್ವಗಳ ಅನುಷ್ಠಾನದಿಂದ ಆಧ್ಯಾತ್ಮ ಹೀಗೆ ಯೋಗ ಮತ್ತು ಗೀತೆಯ ಕರ್ಮ, ಜ್ಞಾನ, ಭಕ್ತಿ ತತ್ವಗಳ ಅನುಷ್ಠಾನದಿಂದ ಸರ್ವತೋಮುಖ ವಿಕಾಸವನ್ನು ಹೊಂದಿದ ವ್ಯಕ್ತಿತ್ವ ಉಪೇಂದ್ರ ಪೈಗಳದ್ದು ಎಂಬುದಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಹೇಳಿದ್ದಾರೆ.

ಅವರು ನವೆಂಬರ್ ೨೬ ರಂದು ಕಾಲೇಜಿನ ಸಭಾಭವನದಲ್ಲಿ ನಡೆದ ಉಪೇಂದ್ರ ಪೈಗಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರು ಪ್ರತಿಷ್ಠೆಗೈದ ಶ್ರೀಕೃಷ್ಣನ ಸನ್ನಿಧಾನದಿಂದ ಉಡುಪಿಯ ಕ್ಷೇತ್ರ ಜಗದ್ವಿಖ್ಯಾತವಾಗಿದ್ದರೆ ವ್ಯವಹಾರ, ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರಗಳಲ್ಲಿ ಮಣಿಪಾಲವು ಇಂದು ಜಗದ್ವಿಖ್ಯಾತರಾಗಿರುವುದಾದರೆ ಅದು ದಿ|ಉಪೇಂದ್ರ ಪೈಗಳು ಹಾಗೂ ಸಹೋದರ ಡಾ|ಮಾಧವ ಪೈಗಳ ಪ್ರಾಮಾಣಿಕ ಪರಿಶ್ರಮದ ಫಲ. ವ್ಯವಹಾರ ರಂಗದಲ್ಲಿ ಉಪೇಂದ್ರ ಪೈಗಳ ಅನುಭವದ ಪರಿಪಾಕ ಅತ್ಯದ್ಭುತ. ಪ್ರತಿಕ್ಷೇತ್ರಗಳಲ್ಲಿ ಅವರ ನಿರ್ವಹಣ ಕೌಶಲ ಅನ್ಯಾದೃಶವಾಗಿದ್ದುದಾಗಿ ಅವರು ಈ ಸಂಧರ್ಭದಲ್ಲಿ ಹೇಳಿದರು.

ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪುಷ್ಪಾಂಜಲಿ ಸಮರ್ಪಿಸಿದರು.

ರಾಷ್ಟ್ರ ಸಂಪರ್ಕ ಭಾಷೆ ಹಿಂದಿ

ಸ್ವಾತಂತ್ರ್ಯ ಸಂಗ್ರಾಮದ ಹಿಂದಿನ ದಿನಗಳಲ್ಲಿ ಭಾರತದ ಪ್ರಜೆಗಳನ್ನು ಒಗ್ಗೂಡಿಸುವ ಏಕೈಕ ಮಂತ್ರ ಹಿಂದಿ ಭಾಷೆಯಾಗಿದ್ದು ಉದ್ಯೋಗಕ್ಕಾಗಿ ದೇಶದಾದ್ಯಂತ ಸಂಚರಿಸಬೇಕಾದ ಅನಿವಾರ್ಯತೆಯ ಈ ಕಾಲ ಘಟ್ಟದಲ್ಲೂ ಸಹ ಹಿಂದಿ ಭಾಷೆ ಬಲ್ಲವನು ಎಲ್ಲೆಡೆ ಯಶಸ್ಸನ್ನು ಸಾಧಿಸುವನು ಎಂದು ಕೆನರಾಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕರಾದ ಶ್ರೀ ಮಾರುತಿ ಎನ್.ಪ್ರಭು ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ ೧೩ ರಂದು ಆಯೋಜಿಸಲಾದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಿದ್ದರು.

ಹಿಂದಿ ದಿನಾಚರಣೆ ಪ್ರಯುಕ್ತವಾಗಿ ಆಯೋಜಿಸಲಾದ ಪ್ರಬಂಧ ಸ್ವರ್ಧೆಯಲ್ಲಿ ಪ್ರಥಮ ಸ್ಧಾನ ಪಡೆದ ವಿದ್ಯಾರ್ಥಿನಿ ಕುಮಾರಿ ನಿಖಿತಾ ಹಾಗೂ ದ್ವಿತೀಯ ಸ್ಧಾನ ಪಡೆದ ಜೆನ್ ರೆನಿಟಾ ಇವರಿಗೆ ಅಭ್ಯಾಗತರು ಬಹುಮಾನವನ್ನು ವಿತರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು, ಹಿಂದಿ ಉಪನ್ಯಾಸಕಿ ಶ್ರೀಮತಿ ಕೃತ್ತಿಕಾ ಪಿ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಂಜೀನ್ ಧನ್ಯವಾದವಿತ್ತರು. ವಿದ್ಯಾರ್ಥಿ ಅನಿರುದ್ಧ್ ಪಡಿಯಾರ್ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಯು.ಪಿ.ಎಂ.ಸಿ. - ಶೈಕ್ಷಣಿಕ ಪ್ರತಿಭೆಗಳಿಗೆ ಸನ್ಮಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ೨೦೧೫-೧೬ ರಲ್ಲಿ ಶೈಕ್ಷಣಿಕವಾಗಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಅಕ್ಟೋಬರ್ ೧ ರಂದು ಕಾಲೇಜು ಸಭಾ ಭವನದಲ್ಲಿ ನಡೆಯಿತು.

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವಿಭಾಗದ ಖ್ಯಾತ ವೈದ್ಯರಾದ ಡಾ.ರಫಿಕ್ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಕಲಿಕೆಯ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮಾತ್ರ ಸಾಧನೆಯನ್ನು ಮಾಡಬಹುದು. ಬದಲಾಗುತ್ತಿರುವ ವಾತಾವರಣ, ಆಹಾರ ಪದ್ದತಿ, ಮಾನಸಿಕೆ ಒತ್ತಡಗಳು ನಾನಾ ವಿಧವಾದ ರೋಗಗಳಿಗೆ ಕಾರಣವಾಗಿದ್ದು ಹಿಂದೆ ಹತ್ತಾರು ಊರುಗಳಿಗೆ ಒಂದು ಆಸ್ಪತ್ರೆ ಇದ್ದರೆ ಇಂದು ಒಂದು ಊರಲ್ಲಿ ಹತ್ತಾರು ಆಸ್ಪತ್ರೆಗಳು ಹುಟ್ಟಿಕೊಳ್ಳಲು ಅವು ಕಾರಣವಾಗಿವೆ. ಅತ್ಯಧಿಕ ರಾಸಾಯನಿಕ ಅಂಶಗಳನ್ನೊಳಗೊಂಡ ಇಂದಿನ ವೇಗದ ಆಹಾರ ಪದ್ದತಿಗಳಿಗಿಂತ , ಪ್ರಾಕೃತಿಕ ಸಂಪನ್ಮೂಲದ ಆಹಾರಗಳನ್ನು ಸಾಕಷ್ಟು ಬಳಸಿಕೊಳ್ಳುವುದರಿಂದ ರೋಗ ಮುಕ್ತ ಜೀವನವನ್ನು ನಡೆಸಬಹುದು. ಪರಿಪೂರ್ಣವಾದ ಆರೋಗ್ಯವು ಕಲಿಕೆಯ ಜೊತೆಗಿದ್ದಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯ ಕುಮಾರ್ ಪರ್ಕಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ, ಉಪ ಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಧನ್ಯವಾದವಿತ್ತರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಚೈತ್ರಾ ಬಿ. ಸನಿಲ್

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿ.ಬಿ.ಎಂ. ವಿದ್ಯಾರ್ಥಿನಿ ಚೈತ್ರಾ ಬಿ. ಸನಿಲ್ ಇವರು ಅಕ್ಟೋಬರ್‌ನಲ್ಲಿ ಚೆನ್ನೈನ ಸತ್ಯಭಾಮ ವಿ.ವಿ.ಯಲ್ಲಿ ನಡೆಯಲಿರುವ ದಕ್ಷಿಣ ಪ್ರಾಂತ್ಯ ಅಂತರ್ ವಿ.ವಿ.ಮಹಿಳಾ ಕ್ರಿಕೆಟ್ ಪಂದ್ಯಕೂಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಲಿದ್ದಾರೆ.

ಉಡುಪಿ ಕಡಿಯಾಳಿ ದಿ ಸ್ಪಾರ್ಟನ್ ಸಂಸ್ಥೆಯ ಫಿಟ್‌ನೆಸ್ ಟ್ರೈನರ್ ಮಿಸ್ ವಿಭಾ ಇವರು ಸೆಪ್ಟೆಂಬರ್ ೨೭ ರಂದು ಕುಂಜಿಬೆಟ್ಟು ಉಪೇಂದ್ರ ಪೈ

ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಸಂಘದಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಸಂಗೀತದ ಮೂಲಕ ದೇಹದಾಢ್ಯ ಕಲೆಯ ಪ್ರಾಯೋಗಿಕ ತರಬೇತಿಯನ್ನು ವಿದ್ಯಾರ್ಥಿನಿಯರಿಗೆ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್, ದಿಶಾ ಮಹಿಳಾ ಸಂಘದ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ದಿಶಾ ಧನ್ಯವಾದವಿತ್ತರು. ರಕ್ಷಾ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

ಸುಪ್ರಭಾ - ಬೆಳ್ಳಿ ವರ್ಷ ಸಂಚಿಕೆ ಅನಾವರಣ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ವರ್ಷ ೨೦೧೫-೧೬ರ ವಾರ್ಷಿಕಾಂಕ ಸುಪ್ರಭಾ ಸೆಪ್ಟೆಂಬರ್ ೨೬ ರಂದು ಲೋಕಾರ್ಪಿತವಾಯಿತು.

ಉಡುಪಿ ಕಿದಿಯೂರಿನ ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜಮೋಹನ್ ವಾರ್ಷಿಕಾಂಕವನ್ನು ಅನಾವರಣಗೊಳಿಸಿ ಮಾನವೀಯತೆ ಜೊತೆಗೆ ಸಾಮಾಜಿಕ ಕಳವಳಿಯನ್ನು ಮೂಡಿಸುವ ಬರಹಗಳು ಇಂದು ಅವಶ್ಯವಾಗಿದ್ದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮಾನವೀಯ ನೆಲೆಯ ಅನುಭವಕ್ಕೆ ಲೇಖನ ರೂಪವನ್ನು ಕೊಡಬೇಕಾದುದು ಅನಿವಾರ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಬೆಂಗಳೂರಿನ ಪೂಣಾಪ್ರಜ್ಞ ಸಂಶೋಧನ ಮಂದಿರದ ಸಹಾಯಕ ನಿರ್ದೇಶಕರಾದ ಡಾ.ರಂಗನಾಥ ಕಟ್ಟಿಯವರು ಮಾತನಾಡಿ ಕಾಕಚೇಷ್ಟೆ, ಬಕಧ್ಯಾನ, ಶ್ವಾನನಿದ್ರೆ, ಮಿತಾಹಾರ, ಗೃಹತ್ಯಾಗ ಇವು ಐದು ವಿದ್ಯಾರ್ಥಿಗಳ ಲಕ್ಷಣವಾಗಿದ್ದು ಇವುಗಳನ್ನು ಅಳವಡಿಸಿಕೊಂಡು ಕಲಿಕೆಯಲ್ಲಿ ನಿರತವಾದಾಗ ವೈಚಾರಿಕ ಸ್ವಾತಂತ್ರ್ಯ ಬೆಳೆಯುವುದು. ಸ್ವತಂತವಾದ ವಿಚಾರಗಳಿಗೆ ಬರಹಗಳ ರೂಪವನ್ನು ಕೊಟ್ಟಾಗ ಅವು ಒಂದು ಉತ್ತಮ ಸಂಚಿಕೆ ಹೊರಬರವುದಕ್ಕೆ ಕಾರಣವಾಗುವುದಾಗಿ ತಿಳಿಸಿದರು.

ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮನೋಹರ ಶೆಟ್ಟಿ ತೋನ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಸಂಚಿಕೆಯ ಸಂಪಾದಕ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ.ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಪ್ರಿಯಾ ವಂದಿಸಿದರು. ಅಂತಿಮ ಬಿ.ಬಿ.ಎಂ. ವಿದ್ಯಾರ್ಥಿ ಅಕ್ಷಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಾಹಿತ್ಯದಿಂದ ಆಂತರ್ಯಕ್ಕೆ ಸಂಸ್ಕಾರ

ದುರ್ವಿಚಾರದಿಂದ ಸದ್ವಿಚಾರದ ಕಡೆಗೆ ದುರ್ನಡತೆಯಿಂದ ಸನ್ನಡತೆಯ ಕಡೆಗೆ, ದುರ್ಮಾರ್ಗದಿಂದ ಸನ್ಮಾರ್ಗದ ಕಡೆಗೆ ಹೇಗೆ ಕೆಡುಕಾಗದ ರೀತಿಯಲ್ಲಿ ಬದುಕನ್ನು ಒಳಿತಾಗಿಸುವ ಮೂಲಕ ಆಂತರ್ಯಕ್ಕೆ ಸಂಸ್ಕಾರವನ್ನು ಒದಗಿಸುವ ಮಾಧ್ಯಮ ಸಾಹಿತ್ಯ ಎಂಬುದಾಗಿ ನಿವೃತ್ತ ಪ್ರಾಚಾರ್ಯರಾದ ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾವತಿಯಿಂದ ಹಮ್ಮಿಕೊಂಡ ಸಾಹಿತ್ಯ ರಸ ಸಿಂಚನ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಪೂರ್ವದ ಕೆಲವು ಅನುವಾದಿತ ಸಾಹಿತ್ಯವನ್ನು ಈ ಸಂದರ್ಭದಲ್ಲಿ ವಿವರಿಸಿದ ಅವರು ಸಾಹಿತ್ಯಾನು ಸಂಧಾನದಿಂದ ವೈಚಾರಿಕತೆ ಬೆಳೆಯುವುದಾಗಿ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಗಳಾದ ಶ್ರವಣಕುಮಾರ್ ಸ್ವಾಗತಿಸಿದರು, ಪವನ್ ವಂದಿಸಿದರು ಮತ್ತು ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ಯುಪಿಎಂಸಿ - ರಕ್ಷಕ ಶಿಕ್ಷಕ ಸಂಘ ಮಹಾಸಭೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಸೆಪ್ಟಂಬರ್ ೧೦ ರಂದು ಕಾಲೇಜು ಸಭಾಭವನದಲ್ಲಿ ಜರಗಿತು. ಕಾಲೇಜು ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆರ್ಧವಾರ್ಷಿಕ ವರದಿಯನ್ನು ಹೆತ್ತವರ ಮುಂದೆ ಮಂಡಿಸಿ ಸಾಂಪ್ರದಾಯಿಕ ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳ ಪ್ರಗತಿಗಾಗಿ ಕಾಲೇಜು ಹಮ್ಮಿಕೊಂಡ ಟ್ಯಾಲಿಕೋರ್ಸ್, ವೃತ್ತಿಮಾರ್ಗದರ್ಶನ, ವ್ಯಕ್ತಿತ್ವವಿಕಸನ ಕಾರ್ಯಕ್ರಮಗಳನ್ನು ತಿಳಿಸಿದರು. ವಿದ್ಯಾರ್ಥಿಗಳ ಹಾಜರಾತಿ ದಾಖಲೆ ಮತ್ತು ಆತಂರಿಕ ಮೌಲ್ಯಮಾಪನಗಳ ಅಂಕಗಳನ್ನು ಪೋಷಕರರು ಪರಿಶೀಲಿಸಿದರು.

ಅನಂತರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀ ಜಯಕುಮಾರ್ ಪರ್ಕಳ ನೂತನ ಆಧ್ಯಕ್ಷರಾಗಿಯೂ, ಶ್ರೀಮತಿ ಪದ್ಮಾ ಪಿ.ಭಟ್ ಕಾರ್ಯದರ್ಶಿಗಳಾಗಿಯೂ, ಬಿ.ಸದಾನಂದ, ಪ್ರತಿಭಾ ಎಸ್.ಆಚಾರ್ಯ, ಶ್ರೀ ಜಿ.ಆರ್.ರಾಯ್ಕರ್, ಟಿ.ನಾರಾಯಾಣ ಭಟ್, ಎಂ.ಇಕ್ಬಾಲ್, ಎಸ್.ಸುಕುಮಾರ್ ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ವಂದಿಸಿದರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಯುಪಿಎಂಸಿ - ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟಂಬರ್ ೧೦ ರಂದು ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಪ್ರಸಿದ್ಧ ಮನೋಶಾಸ್ತ್ರಜ್ಞ ಡಾ.ಪಿ.ವಿ.ಭಂಡಾರಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ತಕ್ಷಣದ ದುಡುಕುತನ ಆತ್ಮಹತ್ಯೆಗೆ ಮುಖ್ಯ ಕಾರಣವಾಗಿದ್ದು ಸಮಸ್ಯೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಬೇಕು. ಸಮಸ್ಯೆಗಳು ಹುದುಗಿಟ್ಟು ಕೊಂಡಷ್ಟು ಅವು ಉಲ್ಬಣವಾಗಲಿದ್ದು ಆತ್ಮೀಯರಲ್ಲಿ ಹಂಚಿಕೊಂಡಾಗ ೫೦ ಪ್ರತಿಶತ ಕಡಿಮೆಯಾಗಿ ಆ ಮೂಲಕ ಸಂಭವನೀಯ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಖಿನ್ನತೆ, ಪರೀಕ್ಷಾ ಆತಂಕ, ಪ್ರೇಮ ವೈಫಲ್ಯ ಆಕಸ್ಮಿಕವಾಗಿ ಲೈಂಗಿಕ ಶೋಷಣೆಗೆ ಒಳಗಾಗುವುದು, ಮಾದಕ ದ್ರವ್ಯಗಳಿಗೆ ಬಲಿಯಾಗುವುದು ಇವೇ ಮೊದಲಾದವುಗಳು ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣಗಳಾಗಿದ್ದು ಸಮಯೋಚಿತ ಚಿಕ್ಸಿತೆಗಳಿಂದ ಇವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು. ರೀಲ್ ಲೈಫ್, ರಿಯಲ್ ಲೈಫ್‌ಗಳಿಗೆ ವ್ಯತ್ಯಾಸಗಳಿದ್ದು ಧಾರವಾಹಿ ಸಿನಿಮಾಗಳ ಪ್ರಚೋದನಾತ್ಮಕ ಪ್ರಯೋಗಗಳನ್ನು ನಿಜಜೀವನದಲ್ಲಿ ತಂದು ಕೊಳ್ಳಬಾರದು. ೨೫ ವರ್ಷಗಳ ನಂತರ ಮನುಷ್ಯನ ಮೆದುಳಿಗೆ ತಪ್ಪು ಒಪ್ಪಿನ ಅರಿವಾಗಲಿದ್ದು ಅದಕ್ಕಿಂತ ಮುಂಚೆಗೈಯ್ಯುವ ಅಪರಾಧಗಳು ಆಮೇಲೆ ಪಶ್ಚಾತ್ತಾಪಕ್ಕೆ ಕಾರಣವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಲಯನ್ಸ್ ಕ್ಲಬ್ ಇಂದ್ರಾಳಿ ಉಡುಪಿ ಇದರ ಅಧ್ಯಕ್ಷರಾದ ಮೊಹಮದ್ ಮೌಲಾ, ಲಯನೆಸ್ ಸಂಧ್ಯಾಮೋಹನ್, ಜೈಂಟ್ಸ್ ಗ್ರೂಪ್ ಉಡುಪಿ ಇದರ ಅಧ್ಯಕ್ಷರಾದ ರಮೇಶ್ ಪೂಜಾರಿ, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಶೆಟ್ಟಿ ತೋನ್ಸೆ, ಗೌರವಧ್ಯಕ್ಷರಾದ ಶ್ರೀ ರವಿರಾಜ್ ಎಚ್.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕ , ಲಯನ್ಸ್ ಕ್ಲಬ್ ಇಂದ್ರಾಳಿ, ಜೈಂಟ್ಸ್ ಗ್ರೂಫ್ ಉಡುಪಿ ಹಾಗೂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಡಾ.ಮಧುಸೂದನ್ ಭಟ್ ವಹಿಸಿದ್ದರು. ಎನ್.ಎಸ್.ಎಸ್. ಸಹಯೋಜನಾಧಿಕಾರಿ ಉಪನ್ಯಾಸಕ ಶ್ರೀ ಚಂದ್ರಶೇಖರ ಸ್ವಾಗತಿಸಿದರು, ಜೈಂಟ್ಸ್ ಕ್ಲಬ್‌ನ ಸದಸ್ಯ ಶ್ರೀ ಮಧುಸೂದನ ಹೇರೂರು ಧನ್ಯವಾದವಿತ್ತರು. ವಿದ್ಯಾರ್ಥಿನಿ ಸುರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಕಾಮರ್ಸ್ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ - ಶ್ರೀ ನರಸಿಂಹ ನಾಯಕ್

ಇಂದಿನ ತಾಂತ್ರಿಕ ಕಾಲಘಟ್ಟದಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸರಿಯಾಗಿ ಬಳಸಿಕೊಂಡು ಕ್ರಿಯಾಶೀಲರಾದಾಗ ಉತ್ತಮ ಭವಿಷ್ಯವನ್ನು ಕಾಣಬಹುದು ಎಂದು ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಸದರ್ನ್ ಇಂಡಿಯಾ ಚಾರ್ಟಡ್ ಅಕೌಟೆಂಟ್ಸ್ ಸ್ಟೂಡೆಂಟ್ಸ್ ಅಸೋಶಿಯೇಶನ್ (ಸಿಕಾಸ) ಇದರ ಅಧ್ಯಕ್ಷರಾದ ಸಿ.ಎ. ನರಸಿಂಹ ನಾಯಕ್ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ ೭ರಂದು ವೃತ್ತಿ ಮಾರ್ಗದರ್ಶನ ಮಾಹಿತಿ ನೀಡುತ್ತ ಮಾತನಾಡುತ್ತಿದ್ದರು.

ಕಾಮರ್ಸ್ ವಿದ್ಯಾರ್ಥಿಗಳ ಮುಂದಿರುವ ಸಿ.ಎ., ಸಿಎಸ್, ಸಿ.ಎಂ.ಎ, ಮೊದಲಾದ ಕೋರ್ಸ್‌ಗಳ ಬಗ್ಗೆ ಸವಿವರ ಮಾಹಿತಿಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವೃತ್ತಿ ಮಾರ್ಗದರ್ಶನ ಅಧ್ಯಾಪಕ ಸಲಹೆಗಾರ ಉಪನ್ಯಾಸಕ ಶ್ರೀ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸತ್ಯಪ್ರಕಾಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಅನಿರುದ್ದ್ ಪಡಿಯಾರ್ ವಂದಿಸಿದರು.

ಕಂಚಿನ ಪದಕ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜು ಮಂಗಳೂರುಇವರು ಸೆಪ್ಟಂಬರ್ ೩ ರಂದು ಆಯೋಜಿಸಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಈಜು ಸ್ವರ್ಧೆಯ ಪುರುಷರ ವಿಭಾಗದ ೧೫೦೦ ಮೀಟರ್ ಫ್ರಿಸ್ಟೈಲ್, ೪೦೦ ಮತ್ತು ೨೦೦ ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿ ಮೊಹಮದ್ ಫರ‍್ಹಾನ್ ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

ನೈತಿಕ ಸುಭದ್ರತೆಯಿಂದ ಸುಂದರ ಬದುಕು

ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾನೂನು ಒಳಗಿನ ಸ್ವಾತಂತ್ರ್ಯವನ್ನು ಬಳಸಿಕೊಂಡು ಕಾನೂನು ಬಾಹಿರವಾದ ಸ್ವೇಚ್ಛಾಚಾರದಿಂದ ದೂರವಾಗಿ ನೈತಿಕ ಸುಭದ್ರತೆಯನ್ನು ಕಾಯ್ದುಕೊಳ್ಳುವುದರಿಂದ ಮಹಿಳೆಯರು ಸುಂದರ ಬದುಕನ್ನು ನಡೆಸಬಹುದು ಎಂದು ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ರಾಜಕೀಯ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ದಯಾನಂದ ಡಿ. ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಸಂಘದಿಂದ ಸೆಪ್ಟೆಂಬರ್ ೧ ರಂದು ಆಯೋಜಿಸಲಾದ ಪದವೀ ವಿದ್ಯಾರ್ಥಿನಿಯರಿಗೆ ನೀತಿ ಸಂಹಿತೆ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು. ಇಂದಿನ ತಾಂತ್ರಿಕ ಯುಗದಲ್ಲಿ ಸುಲಭವಾದ ಆಸೆ ಆಮಿಷಗಳಿಗೆ ಬಲಿಯಾಗದೆ ಉದ್ರೇಕಕಾರಿ ಉಡುಗೆ ತೊಡುಗೆಗಳನ್ನು ಬಳಸದೆ ಅಪರಿಚಿತರ ಸಂಪರ್ಕದೊಂದಿಗೆ ದೂರವಿರುವುದರಿಂದ ಯಾವುದೇ ಒತ್ತಡಕ್ಕೆ ಸಿಲುಕುವ ಅವಕಾಶವಿರುವುದಿಲ್ಲ. ಈ ರೀತಿ ಒತ್ತಡ ರಹಿತವಾಗಿ ಭಯಮುಕ್ತವಾಗಿ, ಶಾಂತಿ ನೆಮ್ಮದಿಯ ಬದುಕನ್ನು ನಡೆಸುವಲ್ಲಿ ಮಹಿಳೆಯರು ಯಶಸ್ಸನ್ನು ಸಾಧಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕಾಲೇಜಿನ ದಿಶಾ ಮಹಿಳಾ ಸಂಘದ ಅಧ್ಯಾಪಕಿ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿಯರಾದ ಜಾನೆ ರೆನಿಟಾ ಡಿಮೆಲ್ಲೊ ಸ್ವಾಗತಿಸಿದರು, ಅಂಕಿತಾ ವಂದಿಸಿದರು ಮತ್ತು ಸಿಂಧು ಕೆ.ಡಿ. ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ - ಸಂಸ್ಕೃತೋತ್ಸವ

ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ ಎಂಬಂತೆ ಭಾಷೆಗಳಲ್ಲೆಲ್ಲ ಮುಖ್ಯವಾಗಿ ಮಾಧುರ್ಯವನ್ನು ಮೇಳೈಸಿಕೊಂಡ ಭಾಷೆ ಸಂಸ್ಕೃತ ಆಗಿದ್ದು ತನ್ನ ಮಾಧುರ್ಯ ಗುಣದಿಂದ, ಜಗತ್ತಿನ ಎಲ್ಲರ ಭಾಷೆಗಳನ್ನು ಅದು ಶ್ರೀಮಂತ ಗೊಳಿಸಿರುವುದಾಗಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ.ಜಯಶಂಕರ್ ಕಂಗಣ್ಣಾರು ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ ೨೩ ರಂದು ಹಮ್ಮಿಕೊಂಡ ಸಂಸ್ಕೃತೋತ್ಸವ ಕಾರ್ಯಕ್ರಮದ ಅಭ್ಯಾಗತರಾಗಿ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ವಾಣಿಜ್ಯ ಅಥವಾ ಮ್ಯಾನೇಜ್ಯಮೆಂಟ್ ವಿಷಯಗಳನ್ನು ಸಂಸ್ಕೃತ ವಾಙ್ಮಯದೊಂದಿಗೆ ಮೇಳೈಸಿ ಅಧ್ಯಯನಗೈದಾಗ ಪರಿಪಕ್ವವಾದ ವ್ಯಾಪಾರಿ ಅಥವಾ ಪರಿಪೂರ್ಣ ಮ್ಯಾನೇಜರ್ ಆಗಿ ಹೊರಹೊಮ್ಮಬಹುದು ಎಂಬುದಾಗಿ ಹೇಳಿದ ಅವರು ಈ ನಿಟ್ಟಿನಲ್ಲಿ ಸಂಸ್ಕೃತವನ್ನು ಕೇವಲ ಭಾಷೆಯನ್ನಾಗಿ ಕಲಿಯದೆ ವಿಜ್ಞಾನ, ವಾಣಿಜ್ಯ, ಕಲಾ ಮೊದಲಾದ ಎಲ್ಲ ಪದವಿಗಳ ಜೊತೆಗೆ ಸಂಯೋಜಿಸಿ ಕಲಿಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ.ಮಧುಸೂದನ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಪ್ರಿಯ ವಂದಿಸಿದರು. ವಿದ್ಯಾರ್ಥಿನಿ ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಇವರು ನಡೆಸಿಕೊಟ್ಟ ಯುವ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸ್ವಾತಂತ್ರ್ಯೋತ್ಸವ - ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು

ಉಡುಪಿ : - ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ ೭೦ ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ ಮಂಗಳೂರು ಶಾಖೆಯ ಸದಸ್ಯರಾದ ಶ್ರೀ ನಂದಗೋಪಾಲ್ ಶೆಟ್ಟಿ ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶವನ್ನಿತ್ತರು. ಕಾಲೇಜಿನ ಪ್ರಾಚಾರ್ಯರಾದ ಡಾ| ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಉಡುಪಿ ವಲಯ ಸಿ.ಎ.ಶಾಖಾಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್ ಹಾಗೂ ಉಡುಪಿ ವಲಯದ ಸದಸ್ಯರು, ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಮ್ಮೂರ ಸಸ್ಯ ಬೆಳೆಸಿ ಉಳಿಸಿ ಬಳಸಿ - ಡಾ. ಟಿ. ಶ್ರೀಧರ ಬಾಯರಿ

ಮನುಷ್ಯನ ಹೊರತಾಗಿಯೂ ಸಸ್ಯ ಬದುಕಬಹುದು. ಆದರೆ ಸಸ್ಯಗಳಿಲ್ಲದೆ ಮನುಷ್ಯನ ಬಾಳು ಕಲ್ಪನೆಗೂ ನಿಲುಕದು. ಪ್ರಕೃತಿಯಲ್ಲಿ ಒಂದಾದ ಮನುಷ್ಯ ಪ್ರಕೃತಿಯ ಜೊತೆಗೆ ಬಾಳಿ ಬೆಳಗಬೇಕು. ತಾನು ಆರೋಗ್ಯವಂತನಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಮ್ಮೂರ ಸಸ್ಯಗಳನ್ನು ಬೆಳೆಸಿ ಉಳಿಸಿ ಬಳಸುವ ಕಾರ್ಯವಾಗಬೇಕು ಎಂಬುದಾಗಿ ಉದ್ಯಾವರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ದ್ರವ್ಯ ಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ಟಿ.ಶ್ರೀಧರ ಬಾಯರಿ ಹೇಳಿದರು.

ಅವರು ಆಗಸ್ಟ್ ೧೧ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಹಮ್ಮಿಕೊಂಡ ನಮ್ಮೂರ ಸಸ್ಯಗಳಲ್ಲಿ ಜೌಷಧೀಯ ಗುಣಗಳು ಎಂಬ ವಿಚಾರದ ಮೇಲೆ ಮಾತನಾಡುತ್ತಿದ್ದರು. ನಾಸ್ತಿ ಸಸ್ಯ ಮನೌಷಧಂ ಎಲ್ಲಾ ಸಸ್ಯಗಳಲ್ಲಿ ಜೌಷಧೀಯ ಗುಣಗಳಿವೆ. ಅಂತಹ ಸಸ್ಯಗಳನ್ನು ಆಹಾರವಾಗಿ ಸೇವಿಸಿದಾಗ ದೇಹದ ಎಲ್ಲ ನರನಾಡಿಗಳಿಗೆ ಸ್ವಯಂ ಶಕ್ತಿ ತುಂಬುತ್ತದೆ ಖರ್ಚಿಲ್ಲದೆ ಆರೋಗ್ಯದ ಸ್ವಯಂ ರಕ್ಷಣೆ ಈ ರೀತಿ ಸಾಧ್ಯವಾಗುವುದಾಗಿ ಹೇಳಿದ ಅವರು ನಮ್ಮೂರ ಸಸ್ಯ ಸೇವನೆಯಿಂದ ಸಾತ್ವಿಕ ಗುಣಗಳು ಕಲೆತು ಸುಸಂಸ್ಕೃತ ವ್ಯಕ್ತಿಯಾಗಿ ಬಾಳಿ ಬೆಳಗಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸೇವಾ ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆದಿತಿ ಸ್ವಾಗತಿಸಿದರು, ಅಮೂಲ್ಯ ಧನ್ಯವಾದವಿತ್ತರು ಮತ್ತು ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ಸಂಸ್ಕೃತ ಸಾಹಿತ್ಯ ಮೌಲ್ಯಗಳ ಆಗರ - ಡಾ.ವ್ಯಾಸನಕೆರೆ ಪ್ರಭಂಜನ ಆಚಾರ್ಯ

ಮೌಲ್ಯಗಳಿಂದಾಗಿ ನಮ್ಮ ದೇಶಕ್ಕೆ ಇತರ ದೇಶಗಳಿಗಿಂತ ಹೆಚ್ಚು ಬೆಲೆ ಮತ್ತು ಗೌರವ ಸಿಗುವಂತಾಗಿದೆ. ಹಿಂದೆ ಅನಕ್ಷರಸ್ಥರ ಕಾಲದಲ್ಲಿ ಮೌಲ್ಯವಂತರೇ ನ್ಯಾಯ ನಿರ್ಣಯ ಮಾಡುತ್ತಿದ್ದರು. ಈಗ ನ್ಯಾಯಧೀಶರಿಗೇ ಹಣದ ಆಮಿಷ, ರಾಮಾಯಣ, ಮಹಾಭಾರತದಂತಹ ಸಂಸ್ಕೃತ ಸಾಹಿತ್ಯ ವಾಙ್ಮಯಗಳು ಮೌಲ್ಯಗಳ ಆಗರವಾಗಿದ್ದು ಮೌಲ್ಯಾಧಾರಿತ ಜೀವನದಿಂದ ಮಾತ್ರ ಬದುಕು ಸಾರ್ಥಕವಾಗುವುದಾಗಿ ಬೆಂಗಳೂರಿನ ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಟ್ರಾನದ ನಿರ್ದೇಶಕರಾದ ಡಾ.ವ್ಯಾಸನಕೆರೆ ಪ್ರಭಂಜನ ಆಚಾರ್ಯ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಹಮ್ಮಿಕೊಂಡ ನೈತಿಕ ಶಿಕ್ಷಣ ಉಪನ್ಯಾಸ ಮಾಲಿಕೆಯಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಚಾರದಲ್ಲಿ ಮಾತನಾಡುತ್ತಿದ್ದರು.

ಮೌಲ್ಯಗಳು ಜಾತಿಮತ ಭೇದಗಳಿಂದ ಹೊರತಾಗಿದ್ದು ಸಂಸ್ಕಾರಕ್ಕನುಗುಣವಾಗಿ ವ್ಯಕ್ತಿಯಲ್ಲಿ ನೆಲೆ ಮಾಡುತ್ತವೆ. ಎಂಬುದನ್ನು ಪುರಾಣ ಪಾತ್ರಗಳನ್ನು ಉದಾಹರಿಸಿ ವಿವರಿಸಿದ ಅವರು ಮೂರು ಗಂಟೆಗಳ ಪರೀಕ್ಷೆಗಳು ವರ್ಷದ ಫಲತಾಂಶವನ್ನು ತಿಳಿಸಿದರೆ ಬದುಕಿನ ಫಲಿತವನ್ನು ಮೌಲ್ಯಗಳು ತಿಳಿಸಿಕೊಡುತ್ತೇವೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಾದ ಸಿಂಧು ಸ್ವಾಗತಿಸಿದರು ಮತ್ತು ಚೈತ್ರ ಧನ್ಯವಾದವಿತ್ತರು.

ಹೂಡಿಕೆಯಲ್ಲಿ ಜಾಗೃತಿ ಅತ್ಯವಶ್ಯ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ ೪ ರಂದು ಮುಂಬೈ ಸ್ಟೋಕ್ ಎಕ್ಸೆಚೇಂಜ್‌ನ ಪರವಾಗಿ ಲೋಟಸ್ ನೋಲ್ ವೆಲ್ತ್ (ಪೈ) ಲಿಮಿಟೆಡ್ ಇದರ ಸಂಪನ್ಮೂಲ ವ್ಯಕ್ತಿ ಶ್ರೀ ಪಿ.ಜೆ.ಶೇಖರ್ ಇವರು ಹೂಡಿಕೆ ಮುಂಜಾಗರೂಕತಾ ಕ್ರಮಗಳು ಎಂಬ ವಿಚಾರದಲ್ಲಿ ವಿಶೇಷೋಪನ್ಯಾಸ ನೀಡಿದರು. ಬಂಡವಾಳ ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್ , ಸ್ಟೋಕ್ ಎಕ್ಸ್ ಚೇಂಜ್ ಇವುಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದ ಅವರು ಇವುಗಳಲ್ಲಿ ಬಂಡವಾಳ ಹೂಡುವಾಗ ಎಚ್ಚರ ಅತ್ಯವಶ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ವೃತ್ತಿ ಮಾರ್ಗದರ್ಶನ ಅಧ್ಯಾಪಕ ಸಲಹೆಗಾರ ಶ್ರೀ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಅನಿರುದ್ದ ಪಡಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

ಗಾಂಧಿ ಚಿಂತನೆಯ ಸಾಕಾರತೆಗೆ ಎನ್.ಎಸ್.ಎಸ್. ವೇದಿಕೆ

೧೯೬೯ರ ಗಾಂಧಿ ಜನ್ಮ ಶತಮಾನೋತ್ಸವ ವರ್ಷದಲ್ಲಿ ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆಯು (ಎನ್.ಎಸ್.ಎಸ್.) ಸ್ವಚ್ಫ ಭಾರತದ ಗಾಂಧಿ ಕನಸಿನ ಸಾಕಾರತೆಗೆ ಸೂಕ್ತ ವೇದಿಕೆಯಾಗಿರುವುದಾಗಿ ಉಡುಪಿ ಪೂರ್ಣಪ್ರಜ್ಙ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಮಂಜುನಾಥ ಕರಬ ಹೇಳಿದ್ದಾರೆ.

ಅವರು ಜುಲೈ ೨೧ ರಂದು ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್. ಚಟುವಟಿಕೆಗಳನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು. ಸೇವಾವಕಾಶಗಳು ಇಂದಿನ ದಿನಗಳಲ್ಲಿ ಹೇರಳವಾಗಿದ್ದು ಅವುಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸಿನ ಅವಶ್ಯಕತೆ ಇದೆ. ಸ್ವಚ್ಫ ಮನಸ್ಸಿನಿಂದ ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಾಗ ಬದುಕಿನ ನೈಜ ಪಾಠದ ಅರಿವು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಎನ್.ಎಸ್.ಎಸ್. ಸಹಕಾರಿಯಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್ ಇವರು ಸ್ವಾಗತಿಸಿದರು. ಸಹಯೋಜನಾಧಿಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. ಟ್ಯಾಲಿ ಸರ್ಟಿಫೈಡ್ ಕೋರ್ಸ್ ಆರಂಭ

ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಟ್ಯಾಲಿ ಅರಿವು ಅತ್ಯವಶ್ಯವಾಗಿದ್ದು ಕಾಲೇಜುಗಳಲ್ಲಿ ದೊರೆಯುವ ಟ್ಯಾಲಿ ಕೋರ್ಸ್‌ನ ತರಬೇತಿಯ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್‌ನ ಆಡಳಿತಾಧಿಕಾರಿ ಶ್ರೀಮತಿ ಗಾಯತ್ರಿ ಉಪಾಧ್ಯಾಯ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಟ್ಯಾಲಿ

ಸಂಸ್ಥೆ ಬೆಂಗಳೂರು ಇದರ ಮಾನ್ಯತೆ ಪಡೆದಿರುವ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ (ಮೈಸ್) ವತಿಯಿಂದ ಪ್ರಾರಂಭವಾದ ಟ್ಯಾಲಿ ಸರ್ಟಿಫೈಡ್ ಕೋರ್ಸ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮೈಸ್‌ನ ಶಿಕ್ಷಕಿ ಶ್ರೀಮತಿ ಪ್ರೇಮಾ.ಎಸ್.ದೇವಾಡಿಗ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕಿರಾದ ಶ್ರೀಮತಿ ಸಿ.ಬಿ.ಪೌಲ್ ಸ್ವಾಗತಿಸಿದರು ಮತ್ತು ಶ್ರೀಮತಿ ಪ್ರಭಾ ಕಾಮತ್ ವಂದಿಸಿದರು.

 

ಅಂತಾರಾಷ್ಟ್ರೀಯ ಮಾನವೀಯತೆ ಮೆರೆದ ರೆಡ್‌ಕ್ರಾಸ್

ಜಾತಿಮತ ಭೇದವಿಲ್ಲದೆ ನಿಷ್ಪಕ್ಷವಾದ ತುರ್ತು ಸೇವೆಗೈದು ಮಾನವೀಯತೆ ಮೆರೆಯಲು ವಿಪುಲ ಅವಕಾಶ ರೆಡ್ ಕ್ರಾಸ್ ಸಂಸ್ಥೆಯಲ್ಲಿರುವುದಾಗಿ ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಮಾಜಿ ಕೋಶಾಧಿಕಾರಿ ಶ್ರೀ ಟಿ.ಚಂದ್ರಶೇಖರ್ ಹೇಳಿದ್ದಾರೆ.

ಅವರು ಜುಲೈ ೧೮ ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ೨೦೧೬-೧೭ರ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಹುಟ್ಟು, ಅದರ ಕಾರ್ಯ ವೈಖರಿಗಳು, ಯುವ ರೆಡ್ ಕ್ರಾಸ್ ಘಟಕದ ಸದಸ್ಯರ ಸೇವಾ ಕೈಂಕರ್ಯಗಳ ಬಗೆಗೆ ಸ್ಥೂಲ ವಿವರಣೆ ನೀಡಿದ ಅವರು ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ರೆಡ್ ಕ್ರಾಸ್ ಘಟಕದ ಮಾಜಿ ಕಾರ್ಯದರ್ಶಿ ಶ್ರೀ ಕೆ. ರಾಮಚಂದ್ರ ದೇವಾಡಿಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು.

ಯುವ ರೆಡ್‌ಕ್ರಾಸ್ ಘಟಕದ ಅಧ್ಯಾಪಕ ಸಲಹೆಗಾರ ಶ್ರೀ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನೀಶ್ ಸ್ವಾಗತಿಸಿದರು ಮತ್ತು ಶ್ರವಣ ಕುಮಾರ್ ಧನ್ಯವಾದವಿತ್ತರು. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. - ಸಹಪಠ್ಯ ಚಟುವಟಿಕೆ ಉದ್ಘಾಟನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ವರ್ಷ 2016-17ರ ಸಹಪಠ್ಯ ಚಟುವಟಿಕೆಗಳ ಉಧ್ಘಾಟನೆಯನ್ನು ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ವೈ. ರವೀಂದ್ರನಾಥ್ ರಾವ್ ಇವರು ಜುಲೈ 14 ರಂದು ನೆರವೇರಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಂತ ನೆಲೆಯನ್ನು ಕಾಣಬೇಕಾದರೆ ಪದವಿಗಳಿಂದ ಗಳಿಸಿದ ಜ್ಞಾನ ಮಾತ್ರ ಸಾಲದು. ಆ ಜ್ಞಾನವನ್ನು ಸಮಯೋಚಿತವಾಗಿ, ಸಾಂದರ್ಭಿಕವಾಗಿ ಬಳಸಿಕೊಳ್ಳುವ ಕೌಶಲವನ್ನು ಹೊಂದಿರಬೇಕು. ಶಿಕ್ಷಣದಿಂದ ಪಡೆದ ಜ್ಞಾನದ ಜೊತೆಗೆ ವ್ಯಕ್ತಿಗತ ಕೌಶಲಗಳನ್ನು ಬೆಳೆಸಿಕೊಳ್ಳುವುದರಿಂದ ಸಾಮಾನ್ಯನು ಉತ್ತಮನಾಗಿ, ಉತ್ತಮನು ಅತ್ಯುತ್ತಮನಾಗಿ, ಅತ್ಯುತ್ತಮನು ಸರ್ವೊತ್ತಮನಾಗಿ ಸಮಾಜದಿಂದ ಗುರುತಿಸಲ್ಪಡಬಹುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಶ್ರವಣ ಕುಮಾರ್ ವಂದಿಸಿದರು ಮತ್ತು ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ACTIVITIES 2015-16

ಶ್ರೀ ಏಕನಾಥ ಭಟ್  ಸನ್ಮಾನ

ಎಪ್ರಿಲ್ ೬ ರಂದು ನಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬ ಸಮಾರಂಭದಲ್ಲಿ ೨೫ ವರ್ಷಗಳ ಪೂರ್ಣ ಸೇವೆಗೈದು ಈಗಲೂ ವೃತ್ತಿಯಲ್ಲಿರುವ ಕಾಲೇಜಿನ ಬೋಧಕೇತರ ಸಿಬ್ಬಂದಿ ಶ್ರೀ ಏಕನಾಥ ಭಟ್ ಇವರನ್ನು ಸನ್ಮಾನಿಸಲಾಯಿತು. ಕಾಣಿಯೂರು ಮಠಾಧೀಶರಾದ ಶ್ರೀಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರು ಶ್ರೀ ಏಕನಾಥ ಭಟ್ರನ್ನು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ವಿನೋದ್ ಭಟ್, ದಿ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ, ಉಡುಪಿ ಶಾಖಾಧ್ಯಕ್ಷರಾದ ಶ್ರೀ ಗಣೇಶ್.ಬಿ.ಕಾಂಚನ್, ಕಾಲೇಜು ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜು ವಾರ್ಷಿಕಾಂಕ ಸ್ವರ್ಧೆ

ಉಪೇಂದ್ರ ಪೈ ಕಾಲೇಜಿನ ಸುಪ್ರಭಾ - ತೃತೀಯ

ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ೨೦೧೪-೧೫ ನೇ ಸಾಲಿನ ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ಬಿ ವಿಭಾಗದಲ್ಲಿ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕಾಂಕ ಸುಪ್ರಭಾ ತೃತೀಯ ಬಹುಮಾನ ಗಳಿಸಿದೆ. ಕಾಲೇಜಿನ ವಾರ್ಷಿಕಾಂಕವು ಕಳೆದ ೭ ವರ್ಷಗಳಿಂದ ನಿರಂತರವಾಗಿ ಬಹುಮಾನಗಳನ್ನು ಗಳಿಸುತ್ತಿದ್ದು ಕಾಲೇಜಿನ ಈ ಮಹತ್ಸಾಧನೆಯಲ್ಲಿ ಕಾರಣರಾದ ಪ್ರಧಾನ ಸಂಪಾದಕರು, ಸಂಪಾದಕ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿವರ್ಗ, ಹಾಗೂ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು ಅಭಿನಂದಿಸಿದ್ದಾರೆ.

ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿಗೆ ಯು.ಪಿ.ಎಂ.ಸಿ. ಟ್ರೋಫಿ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ವಿ.ವಿ.ಮಟ್ಟದ ಅಂತರ್ಕಾಲೇಜು ಆಹ್ವಾನಿತ ವಾಲಿಬಾಲ್ ಪಂದ್ಯಾಟದಲ್ಲಿ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಯು.ಪಿ.ಎಂ.ಸಿ ಟ್ರೋಫಿ ಹಾಗೂ ನಗದು ರೂ. ೧೦,೦೦೦ ನ್ನು ಗೆದ್ದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಬಾರ್ಕೂರ್ ಎಸ್.ಆರ್.ಎಸ್.ಎಂ., ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೭,೦೦೦ ಮತ್ತು ಶಾಶ್ವತ ಫಲಕವನ್ನು, ತೃತೀಯ ಸ್ಥಾನವನ್ನು ಕಟೀಲ್ ಎಸ್.ಡಿ.ಪಿ.ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೫,೦೦೦ ಮತ್ತು ಶಾಶ್ವತ ಫಲಕ, ಹಾಗೂ ಚತುರ್ಥ ಸ್ಥಾನವನ್ನು ಸರಕಾರಿ ಪದವಿ ಕಾಲೇಜು, ಕೋಟೇಶ್ವರ, ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೩,೦೦೦ ಮತ್ತು ಶಾಶ್ವತ ಫಲಕವನ್ನು ಗೆದ್ದು ಕೊಂಡಿದ್ದಾರೆ.

ಬೆಸ್ಟ್ ಆಲ್‌ರೌಂಡರ್ : ಕಟೀಲ್ ಕಾಲೇಜಿನ - ಶಬರೀಶ್ ರೈ, ಬೆಸ್ಟ್ ಲಿಫ್ಟರ್ : ಬಾರ್ಕೂರು ಕಾಲೇಜಿನ ಲಕ್ಷ್ಮೀಶ್ ಮತ್ತು ಬೆಸ್ಟ್ ಎಟೆಕರ್ : ಶಿರ್ವಾ ಕಾಲೇಜಿನ ಪ್ರಮೋದ್ ಗೆದ್ದುಕೊಂಡಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತರಾದ ಕೃಷ್ಣಮೂರ್ತಿ ಆಚಾರ‍್ಯ, ವಿನುಗಾರಿಕ ಫೆಡರೇಶನ್ ಅಧ್ಯಕ್ಷರಾದ ಶ್ರೀಯುತ ಯಶ್ಪಾಲ್ ಎ.ಸುವರ್ಣ ಹಾಗೂ ಶ್ರೀಮತಿ ಜ್ಯೋತಿ ರಮನಾಥ್ ಶೆಟ್ಟಿಯವರು ಉಪಸಿತ್ಥರಿದ್ದು ಬಹುಮಾನ ವಿತರಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಪೆರ್ಡೂರಿನ ಉಪೇಂದ್ರ ಅವರು ಕಾರ‍್ಯಕ್ರಮ ನಿರ್ವಹಿಸಿದರು. ಕುಮಾರಿ ಅನನ್ಯ ಅತಿಥಿಗಳನ್ನು ಸ್ವಾಗತಿಸಿ ವಂದನಾರ್ಪಣೆಯನ್ನು ನೆರವೇರಿಸಿದರು.

ಯು.ಪಿ.ಎಂ.ಸಿ. ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ತರಗತಿಗಳಲ್ಲಿ ಪಡೆಯುವ ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ಸುಪ್ತ್ರವಾಗಿರುವ ಅವರವರ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿದಾಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಸಂಪಾದಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆಗಳು ಎಲ್ಲ ರೀತಿಯ ಜಾತಿ ವೈಷಮ್ಯಗಳನ್ನು ಮರೆತು ಎಲ್ಲಾ ಸಮಾಜ ಬಂಧುಗಳನ್ನು ಬೆಸೆಯುವ ಕೊಂಡಿಯಾಗಿ

ಮೆರೆಯುತ್ತಿವೆ ಎಂದು ಉದ್ಯಮಿ ಶ್ರೀ ಅಮೃತ್ ಶೆಣೈ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬ ಪ್ರಯುಕ್ತ ಮಾರ್ಚ್ ೧೧ ರಂದು ಆಯೋಜಿಸಲಾದ ಅಂತರ್ಕಾಲೇಜು ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಯಮಿಗಳಾದ ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್‌ರ ಮಾರ್ಗದರ್ಶನದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಯೋಜಿಸಿದರು. ವಿದ್ಯಾರ್ಥಿನಿಯಾದ ದೀಕ್ಷಾ ಸ್ವಾಗತಿಸಿದರು. ಕುಮಾರಿ ಅಂಕಿತಾ ವಂದಿಸಿದರು ಮತ್ತು ಕುಮಾರಿ ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. - ಸಹ್ಯಾದ್ರಿ ವಿಜ್ ಕ್ವಿಜ್ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ವತಿಯಿಂದ ಸಹ್ಯಾದ್ರಿ ವಿಜ್ ಕ್ವಿಜ್ ಸಾಮಾನ್ಯ ಜ್ಞಾನ ಸ್ಪರ್ಧೆ ಕಾರ್ಯಕ್ರಮವು ಮಾರ್ಚ್ ೪ ರಂದು ನಡೆಯಿತು. ಸಹ್ಯಾದ್ರಿ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಶ್ರೀ ರಮೇಶ್ ಕೆ.ಜಿ. ಮತ್ತು ಗಿರೀಶ್ ಎನ್ ಹಾಗೂ ಸಂಶೋಧನ ವಿದ್ಯಾರ್ಥಿ ಕಾರ್ತಿಕ್ ಭಂಡಾರಿ ಕಾಲೇಜಿನ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಜೊತೆಗೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್, ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾ ಕುಮಾರಿ, ಉಪನ್ಯಾಸಕರಾದ ಶ್ರೀಮತಿ ಸಿಬಿ ಪೌಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಯು.ಪಿ.ಎಂ.ಸಿ. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಕಾಲೇಜಿನ ೪ ತಂಡಗಳು ಮಾರ್ಚ್ ೧೧ ರಂದು ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿವೆ.

ಯು.ಪಿ.ಎಂ.ಸಿ ಬೃಹತ್ ರಕ್ತದಾನ ಶಿಬಿರ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಮತ್ತು ಫ್ರೆಂಡ್ಸ್ ಗ್ರೂಪ್ ಉಡುಪಿ ಇವರು ಜಂಟಿಯಾಗಿ ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರವು ಮಣಿಪಾಲದ ಕೆ.ಎಮ್.ಸಿ. ಆಸ್ಪ್ರತೆಯ ಸಹಯೋಗದೊಂದಿಗೆ ಫೆಬ್ರವರಿ ೨೭ ರಂದು ಉಪೇಂದ್ರ ಪೈ ಕಾಲೇಜಿನಲ್ಲಿ ನಡೆಯಿತು.

ಮಣಿಪಾಲದ ಕೆ.ಎಂ.ಸಿ.ಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ|ಮನೀಷ್ ರತೂರಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನದ ಪ್ರಾಮುಖ್ಯತೆಯನ್ನು ವಿವರಿಸಿದರು. ಫ್ರೆಂಡ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಸಂದೀಪ್, ಮಾಜಿ ಅಧ್ಯಕ್ಷರಾದ ಶ್ರೀ ವಸಂತ್ ರಾವ್ ಕರಂಬಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಸಹಯೋಜನಾಧಿಕಾರಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಧನ್ಯವಾದವಿತ್ತರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಫ್ರೆಂಡ್ಸ್ ಕ್ಲಬ್ ಉಡುಪಿ ಇವರ ಸಹಯೋಗದೊಂದಿಗೆ ಫೆಬ್ರವರಿ ೨೭ ರಂದು ನಡೆದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಅಣ್ಣಾಮಲೈ ಭೇಟಿ ಇತ್ತರು. ಫ್ರೆಂಡ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಸಂದೀಪ್, ಮಾಜಿ ಅಧ್ಯಕ್ಷರಾದ ಶ್ರೀ ವಸಂತ್ ರಾವ್ ಕರಂಬಳ್ಳಿ, ಸದಸ್ಯರಾದ ಶ್ರೀ ಹರೀಶ್ ಕೌಡೂರು, ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್, ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು.

ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಗುರಿಯಾಗಲಿ - ಸ್ವಾಮೀ ವೀರೇಶಾನಂದಜೀ

ಪಾರಂಪರಿಕ ಶಿಕ್ಷಣದಿಂದ ಪಡೆದ ಅಂಕಗಳ ಜೊತೆಗೆ ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಮನ್ನಣೆ ದೊರೆಯುವುದು. ಈ ನಿಟ್ಟಿನಲ್ಲಿ ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ಚಾರಿತ್ರ್ಯ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ತುಮಕೂರು ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿಯವರು ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಫೆಬ್ರವರಿ ೨೬ ರಂದು ರಾಷ್ಟ್ರೀಯ ಸೇವಾಯೋಜನಾ ವತಿಯಿಂದ ಹಮ್ಮಿಕೊಂಡ ನೈತಿಕ ಶಿಕ್ಷಣ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುತ್ತಿದ್ದರು. ಗೊತ್ತುಗುರಿಯಿಲ್ಲದೆ ಹರಿಯುವ ಯೌವನದ ಹೊಳೆಗೆ ನೈತಿಕತೆಯ ದಡಗಳ ನಿರ್ಮಾಣವಾಗಬೇಕು. ಅತ್ಯಾಚಾರ, ಲೈಂಗಿಕತೆ. ಮಾದಕದ್ರವ್ಯಗಳ ಸ್ಪರ್ಶವೂ ಸೋಂಕದೆ ವಿದ್ಯಾರ್ಥಿ ಜೀವನವನ್ನು ಕೇವಲ ವಿದ್ಯಾರ್ಜನೆಗಾಗಿ ಉಪಯೋಗಿಸಬೇಕು. ವಿದ್ಯಾರ್ಜನೆಯ ಜೊತೆಗೆ ಗುರುಗಳಿಗೆ, ಹೆತ್ತವರಿಗೆ ತೋರುವ ಗೌರವಾದರಗಳಿಂದ ನೈತಿಕತೆ ಸ್ವಯಂ ಸಿದ್ಧಿಸುವುದು. ಹವ್ಯಾಸ ಬೀಜದಿಂದ ಜ್ಞಾನಫಲ, ಜ್ಞಾನ ಬೀಜದಿಂದ ಚಾರಿತ್ರ್ಯ ಫಲ, ಚಾರಿತ್ರ್ಯ ಬೀಜದಿಂದ ಸುಂದರ ಭವಿಷ್ಯದ ಫಲ ಲಭಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಮಹಾತ್ಮಾಗಾಂಧಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕುಸುಮಾ ಕಾಮತ್, ಶ್ರೀ ರಘುನಾಥ ಕಿಣಿ ಮತ್ತು ಯೋಗತರಬೇತಿದಾರರಾದ ಶ್ರೀಮತಿ ನಳಿನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿಗಳಾದ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಮತ್ತು ಶ್ರೀ ಚಂದ್ರಶೇಖರ್ ಸಂಯೋಜಿಸಿದರು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ದೀಪಕ್ ಸ್ವಾಗತಿಸಿದರು, ಪ್ರದೀಪ್ ಕುಮಾರ್ ಧನ್ಯವಾದವಿತ್ತರು, ಸತ್ಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಯು.ಪಿ.ಎಂ.ಸಿ - ಬೆಳ್ಳಿ ವರ್ಷದ ಕ್ರೀಡೋತ್ಸವ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಇಪ್ಪತ್ತೈದೆನೆಯ ಬೆಳ್ಳಿ ವರ್ಷದ ಕ್ರೀಡೋತ್ಸವವು ಪೆಬ್ರವರಿ 12ರಂದು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡಲ್ಲಿ ನಡೆಯಿತು.

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿಯವರು ಕ್ರೀಡಾಕೂಟವನ್ನು ಉದ್ಫಾಟಿಸುತ್ತ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಸಹಕಾರಿಯಾಗಿದ್ದು ಒತ್ತಡಗಳ ಜಂಜಾಟದಿಂದ ಕೂಡಿದ ಈ ಕಾಲದಲ್ಲಿ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಕ್ರೀಡೆಯು ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿ ನಿಶ್ಚಿತ್ ಪ್ರಭಾಕರ್ ಧನ್ಯವಾದವಿತ್ತರು. ವಿದ್ಯಾರ್ಥಿನಿ ಸುಶ್ರಾವ್ಯ ಕ್ರೀಡಾ ಸಂಹಿತೆ ಬೋಧಿಸಿದರು. ಶ್ರೇಯಸ್ವಿ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ - ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟವು ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪೆಬ್ರವರಿ 12 ರಂದು ಜರಗಿತು.

ಹಳೆ ವಿದ್ಯಾರ್ಥಿಗಳಿಗಾಗಿ 100 ಮೀಟರ್ ಓಟ ಹಾಗೂ ಗುಂಡು ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹಳೆ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಗಣೇಶ್ ಬ್ರಹ್ಮಾವರ ಪ್ರಥಮ ಸ್ಥಾನವನ್ನು, ಸಾಂಸ್ಕೃತಿಕ ಸಂಘದ ಮತೋರ್ವ ಸದಸ್ಯ ಶ್ರೀ ಗಿರೀಶ್ ಐತಾಳ ದ್ವಿತೀಯ ಸ್ಥಾನವನ್ನು ಹಾಗೂ ಉದ್ಯಮಿ ಮಕ್ಸೂದ್ ಅಹ್ಮದ್ ತೃತೀಯ ಸ್ಥಾನವನ್ನು ಪಡೆದರು. ಗುಂಡು ಎಸೆತದ ಪುರುಷರ ವಿಭಾಗದಲ್ಲಿ ಉದ್ಯಮಿ ಶ್ರೀ ಮಧುಸೂದನ್ ಪ್ರಥಮ ಸ್ಥಾನವನ್ನು, ಸಂಘದ ಅಧ್ಯಕ್ಷ ಶ್ರೀ ಮನೋಹರ್ ಶೆಟ್ಟಿ ದ್ವಿತೀಯ ಸ್ಥಾನವನ್ನು ಹಾಗೂ ಮಹಿಳೆಯರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಶ್ರೀಮತಿ ಲತಾ ಪ್ರಥಮ ಸ್ಥಾನವನ್ನು, ಶ್ರೀಮತಿ ಸುಗುಣ ದ್ವಿತೀಯ ಸ್ಥಾನವನ್ನು ಹಾಗೂ ಸಂಘದ ಗೌರವಾಧ್ಯಕ್ಷತೆಯಾದ ಶ್ರೀಮತಿ ಪ್ರಭಾ ಕಾಮತ್ ತೃತೀಯ ಸ್ಥಾನವನ್ನು ಪಡೆದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವೋದ್ಯೋಗದಿಂದ ಬದುಕಿನ ಭಯದೂರ

ಪ್ರದಾಯಿಕ ಪದವಿ ಶಿಕ್ಷಣಗಳಲ್ಲಿ ಸಾಮಾನ್ಯ ಅಂಕಗಳನ್ನು ಪಡೆದ ವಿದ್ಯಾರ್ಥಿಗಳೂ ಭವಿಷ್ಯದ ಬಗ್ಗೆ ಚಿಂತಿಸಬೇಕಿಲ್ಲ. ಇಂದಿನ ಸ್ವರ್ಧಾತ್ಮಕ ಕಾಲಘಟ್ಟದಲ್ಲೂ ಸ್ವೋದ್ಯೋಗದ ಬಗ್ಗೆ ಆಸಕ್ತಿ ಇದ್ದರೆ ಸಾಕಷ್ಟು ಅವಕಾಶಗಳಿವೆ. ಸ್ವೋದ್ಯೋಗದ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸಿ ತರಬೇತಿಯನ್ನು ಪಡೆಯುವುದರಿಂದ ಬದುಕನ್ನು ಸ್ವಯಂ ರೂಪಿಸಿಕೊಳ್ಳುವ ಮೂಲಕ ಜೀವನ ಭಯದಿಂದ ದೂರವಾಗಬಹುದು ಎಂದು ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ತರಬೇತಿ ಶಿಕ್ಷಕ ಶ್ರೀ ಕರುಣಾಕರ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಸ್ವೋದ್ಯೋಗ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು, ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಗಣರಾಜ್ಯೋತ್ಸವ

ಕುಂಜಿಬೆಟ್ಟು, ಉಪೇಂದ್ರ ಪೈ ಕಾಲೇಜಿನಲ್ಲಿ ಲಯನ್ಸ್ ಮಿಡ್ ಟೌನ್ ಉಡುಪಿ ಶಾಖೆಯ ಸಹಯೋಗದೊಂದಿಗೆ ೬೭ನೇ ವರ್ಷದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಧ್ವಜಾರೋಹಣಗೈದು ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು. ಲಯನ್ಸ್ ಕ್ಲಬ್ ಮಿಡ್ ಟೌನ್ ಉಡುಪಿ ಶಾಖೆಯ ಆಧ್ಯಕ್ಷರಾದ ಶ್ರೀ ಉದಯ ಕುಮಾರ್ ಹಾಗೂ ಸದಸ್ಯರು, ರೆಡ್ ಕ್ರಾಸ್ ಉಡುಪಿ ಶಾಖೆಯ ಅಧ್ಯಕ್ಷರಾದ ಬಸ್ರೂರು ರಾಜೀವ ಶೆಟ್ಟಿ ಹಾಗೂ ಸದಸ್ಯರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಥಮ ಬಿ.ಬಿ.ಎಂ. ವಿದ್ಯಾರ್ಥಿಗಳಾದ ಶಿಖಾ ಹೆಗ್ಡೆ ಸ್ವಾಗತಿಸಿದರು, ತೀರ್ಥ ಪಿ ಹೆಗ್ಡೆ ಧನ್ಯವಾದವಿತ್ತರು, ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಎಸ್.ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶರತ್ ಕುಮಾರ್ ರಮೇಶ್ ಶೇಟ್ ಧ್ವಜ ಸಂಹಿತೆಯನ್ನು ಬೋಧಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಪೇಂದ್ರ ಪೈ ಕಾಲೇಜಿಗೆ ಪೇಜಾವರ ಶ್ರೀಗಳ ಭೇಟಿ

ಪಂಚಮಪರ್ಯಾಯ ಪೀಠವನ್ನೇರಲಿರುವ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ತಮ್ಮ ಶಿಷ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥರೊಂದಿಗೆ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿಗೆ ಜನವರಿ ೧೪ ರಂದು ಭೇಟಿ ಇತ್ತರು.

ಕಾಲೇಜಿನ ರಜತೋತ್ಸವ ಪ್ರಯುಕ್ತ ನವೀಕೃತ ಕಾಲೇಜಿನ ಪ್ರಾಕಾರವನ್ನು ಉದ್ಘಾಟಿಸಿದ ಶ್ರೀಪಾದಂಗಳವರು ಭಗವತ್ ಪ್ರಜ್ಞೆಯನ್ನು ಬೆಳಸಿಕೊಳ್ಳುವುದರಿಂದ ಮಾತ್ರ ಅಪರಾಧಗಳಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ಅಪರಾಧ ಮುಕ್ತರಾಗಿ ದೇವಪ್ರೇಮ, ದೇಶಪ್ರೇಮಗಳನ್ನು ಬೆಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ಇತ್ತರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಉಭಯ ಶ್ರೀಪಾದಂಗಳವರನ್ನು ಗೌರವಿಸಿದರು. ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಕೌಶಲಗಳ ಅಭಿವೃದ್ಧ್ದಿಗೆ ಗ್ರಂಥಾಲಯ ಸಹಕಾರಿ

ಸಾಂಪ್ರದಾಯಿಕ ಪಾಠ ಪ್ರವಚನಗಳಿಂದ ಪಡೆದ ಜ್ಞಾನದ ಜೊತೆಗೆ ಸ್ವಯಂ ಕೌಶಲಗಳನ್ನು ಹೊಂದಿದ್ದರೆ ಮಾತ್ರ ಜೌದ್ಯೊಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದಾಗಿದ್ದು ಕೌಶಲಗಳ ಅಭಿವೃದ್ಧಿಗೆ ಗ್ರಂಥಾಲಯಗಳನ್ನು ಸಕ್ರಿಯವಾಗಿ ಉಪಯೋಗಿಸಬೇಕು ಎಂದು ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಪ್ರಧಾನ ಗ್ರಂಥಪಾಲಕರಾದ ಡಾ| ಶ್ರೀಧರ ಹೆಗ್ಡೆ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜನವರಿ ೧೩ರಂದು ಹಮ್ಮಿಕೊಳ್ಳಲಾದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಂಥಾಲಯದ ನಿರ್ವಹಣೆಯಲ್ಲಿ ಡಾ| ರಂಗನಾಥನ್ ಅವರ ಆದರ್ಶಗಳನ್ನು ಪರಿಪಾಲಿಸುವಂತೆ ಅವರು ಈ ಸಂದರ್ಭದಲ್ಲಿ ಕರೆ ಇತ್ತರು.

ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿತವಾದ ಸಾಮಾನ್ಯ ಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಗ್ರಂಥಾಪಾಲಕಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಂದನ ಸ್ವಾಗತಿಸಿದರು. ಸ್ಪೂರ್ತಿ ಧನ್ಯವಾದವಿತ್ತರು ಮತ್ತು ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು

ಜನನೀ ಜನ್ಮಭೂಮಿಗಳ ವಾತ್ಸಲ್ಯದ ಚೆಲುಮೆ ವಿವೇಕಾನಂದರು

ಜನನೀ ಜನ್ಮಭೂಮಿಶ್ಚ ಸ್ವರ್ಗಾ ಗರೀಯಸೀ ಎಂಬಂತೆ ಜನನೀ ಹಾಗೂ ಜನ್ಮ ಭೂಮಿಗಳಲ್ಲಿ ವಿವೇಕಾನಂದರು ಹರಿಸಿದ್ದ ಪ್ರೀತಿಯ ಪರಾಕಾಷ್ಠೆ ಸಾರ್ವಕಾಲಿಕ ಆದರ್ಶವಾಗಿರುವುದಾಗಿ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ದಯಾನಂದ ಡಿ. ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾವತಿಯಿಂದ ಸ್ವಾವಿi ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾರತೀಯ ಸಂಸ್ಕೃತಿಯ ವೈಭವವನ್ನು ಜಗದಾದ್ಯಂತ ಪಸರಿಸಿದ ವಿವೇಕಾನಂದರ ವ್ಯಕ್ತಿತ್ವವನ್ನು ಸ್ಮರಿಸಿ ಯುವ ಜನತೆಗೆ ಅವರಿತ್ತ ಸಂದೇಶವನ್ನು ಬಿತ್ತರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್, ಸೇವಾ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರವಣ್ ಕುಮಾರ್ ಸ್ವಾಗತಿಸಿದರು. ದೀಪಕ್ ಧನ್ಯವಾದವಿತ್ತರು. ಅಜಿತ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. ಪದವೀ ಸಂಸ್ಕೃತ ಪಾಠ್ಯ ಅನಾವರಣ

ಮಂಳೂರು ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಕ ಸಂಘ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಪದವೀ ತರಗತಿ ದ್ವಿತೀಯ ಸೆಮಿಸ್ಟರ್ ಸಂಸ್ಕೃತ ಪಾಠ್ಯಗಳ ಅನಾವರಣ ಹಾಗೂ ಕಾರ್ಯಾಗಾರದ ಉದ್ಘಾಟನೆಯು ಜನವರಿ ೬ ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಪುಸ್ತಕಗಳನ್ನು ಅನಾವರಣಗೊಳಿಸಿ ಕಾರ‍್ಯಾಗಾರವನ್ನು ಉದ್ಘಾಟಿಸಿದ ಉಡುಪಿ ಸಂಸ್ಕೃತ ಕಾಲೇಜಿನ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ|ಎನ್.ಲಕ್ಷ್ಮೀನಾರಾಯಣ ಭಟ್ ಇವರು ಹೊಸ ಪಾಠ್ಯಗಳ ವಿಷಯದಲ್ಲಿ ಹೊಸ ಅಭಿರುಚಿಗಳನ್ನು ಹೊಂದಿ ಪೂರ್ವಸಿದ್ಧತೆಗಳನ್ನು ಕೈಗೊಂಡು ಪಾಣಿನಿಯ ವ್ಯಾಕರಣ ಪ್ರಕ್ರಿಯೆಗೆ ಅನುಗುಣವಾಗಿ ಪಾಠಗಳನ್ನು ನಡೆಸುವಂತೆ ಪ್ರಾಧ್ಯಾಪಕರಿಗೆ ಕರೆ ಇತ್ತರು. ಬೋಧಕ, ಬೋಧ್ಯ ಹಾಗೂ ಬೋಧನಾ ಸಾಮಾಗ್ರಿಗಳ ಪರಿಪೂರ್ಣತೆಯಿಂದ ಸಂಸ್ಕೃತ ಪಾಠಗಳು ಪದವೀ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಪ್ರಾಧ್ಯಾಪಕರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಅವರು ಸಲಹೆ ಇತ್ತರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್ ಸಭಾಧ್ಯಕ್ಷರಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕ ಸಂಘದ ಅಧ್ಯಕ್ಷರಾದ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯರಾದ ಡಾ.ರಮೇಶ್ ಟಿ.ಎಸ್. ಸ್ವಾಗತಿಸಿದರು. ಸಂಘದ ಕಾರ್ಯದರ್ಶಿಗಳಾದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ| ಮಂಜುನಾಥ್ ಭಟ್ ಧನ್ಯವಾದವಿತ್ತರು. ಉಡುಪಿ ಪೂರ್ಣಪ್ರಜ್ಷ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ|ರಾಮಕೃಷ್ಣ ಉಡುಪ ಕಾರ್ಯಕ್ರಮ ನಿರ್ವಹಿಸಿದರು.

ಪಾಠ್ಯಗಳ ಸಮೀಕ್ಷೆ, ಪ್ರಶ್ನಕೋಶ ತಯಾರಿಯ ಬಗ್ಗೆ ಸಮಾಲೋಚನೆಗಳು, ಕರುಡು ಪ್ರಶ್ನೆ ಕೋಶ ತಯಾರಿಗಳು ಕಾರ್ಯಾಗಾರದಲ್ಲಿ ನಡೆದವು. ಮಂಗಳೂರು ವಿ.ವಿ. ವಿವಿಧ ಕಾಲೇಜಿಗಳ ೫೦ ಸಂಸ್ಕೃತ ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು

ಪರ್ಯಾಯ ಶ್ರೀಗಳವರಿಂದ ಎನ್.ಎಸ್.ಎಸ್. ಚಟುವಟಿಕೆ ವೀಕ್ಷಣೆ

ಯೂರು, ಶ್ರೀ ವಿದ್ಯಾಸಮುದ್ರತೀರ್ಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ವಾರ್ಷಿಕ ವಿಶೇಷ ಶಿಬಿರದ ಚಟುವಟಿಕೆಗಳ ಸಾಕ್ಷ್ಯ ಚಿತ್ರಗಳನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಪರ‍್ಯಾಯ ಶ್ರೀ ವಿದ್ಯಾವಲ್ಲಭ ತೀರ್ಥರು ದಿನಾಂಕ ೯ರಂದು ವೀಕ್ಷಿಸಿದರು.

ಶಾಲಾವಠಾರ, ಗರಡಿ ಪ್ರದೇಶ, ಕಿದಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿ ನಡೆಸಿದ ಶ್ರಮದಾನ, ರಂಗತರಬೇತಿ, ಅಂಗಾಂಗದಾನ ಮಹತ್ವ, ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳು, ವಿದ್ಯಾರ್ಥಿಗಳು ನಡೆಸಿದ ಗ್ರಾಮಸಮೀಕ್ಷೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾಭ್ಯಾಸ ಇತ್ಯಾದಿಗಳನ್ನು ವೀಕ್ಷಿಸಿದ ಶ್ರೀಪಾದರು ಕಾಲೇಜಿನ ಎನ್,.ಎಸ್,ಎಸ್ ಚಟುವಟಿಕೆಗಳನ್ನು ಶ್ಲಾಘಿಸಿ ಹರಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್, ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್, ಸಾಕ್ಷ್ಯಚಿತ್ರಗಳ ನಿರ್ಮಾಪಕರಾದ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಹಾಗೂ ಎನ್.ಎಸ್.ಎಸ್. ಫಟಕದ ವಿದ್ಯಾರ್ಥಿ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯು.ಪಿ.ಎಂ.ಸಿ. - ನೂತನ ಮಹಿಳಾ ವಿಶ್ರಾಂತಿ ಕೊಠಡಿ ಉದ್ಘಾಟನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತವರ್ಷದಲ್ಲಿ ನೂತನವಾಗಿ ನಿರ್ಮಿಸಿದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕುಸುಮಾ ಕಾಮತ್ ಅವರು ಡಿಸೆಂಬರ್ ೧೦ ರಂದು ಉದ್ಘಾಟಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್, ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಆಶಾ ಕುಮಾರಿ, ತಂತ್ರಜ್ಞರಾದ ಶ್ರೀ ಸತೀಶ್ ಪೈ, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭವಿಷ್ಯದ ದಾರಿದೀಪ ಎನ್.ಎಸ್.ಎಸ್

ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಲಿಯುವ ಪಾಠಗಳು ಮುಂದಿನ ಬದುಕಿಗೆ ದಾರಿದೀಪವಾಗುವುದು. ಮೂಕನು ವಾಗ್ಮಿಯಾಗಿ, ದುರ್ಬಲನು ಸಬಲನಾಗಿ ಅಸಹಿಷ್ಣು ಸಹಿಷ್ಣುವಾಗಿ ಸೋಮಾರಿಯು ಚುರುಕಾಗುವಂತೆ ಪರಿವರ್ತನೆಗೊಳಿಸುವ ಉತ್ತಮ ವೇದಿಕೆ ಎನ್.ಎಸ್.ಎಸ್ ಎಂದು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ದಯಾನಂದ ಡಿ ಹೇಳಿದ್ದಾರೆ.

ಅವರು ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ ೨ ರಿಂದ ೮ ರವರೆಗೆ ನಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪಂದುಬೆಟ್ಟು, ಉಪಾಧ್ಯಕ್ಷರಾದ ಶ್ರೀಮತಿ ಉಷಾ, ಸದಸ್ಯರಾದ ಶ್ರೀ ಸುಂದರ್ ಪೂಜಾರಿ, ಮಾಜಿ ಸದಸ್ಯರಾದ ಶ್ರೀ ವೆಂಕಟರಮಣ ಕಿದಿಯೂರು, ಶ್ರೀ ವಿದ್ಯಾ ಸಮುದ್ರ ತೀರ್ಥ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಉಪಾಧ್ಯ, ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಶ್ವೇತನ್ ಎಸ್.ಶೆಟ್ಟಿ, ಮಲ್ಪೆ ಯಾಂತ್ರಿಕ ದೋಣಿ ಮೀನುಗಾರರ ಸಂಘ ಅಧ್ಯಕ್ಷರಾದ ಗುಂಡು ಬಿ.ಅಮೀನ್, ಕಿದಿಯೂರು ಮಹಿಳಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುಪಿಎಂಸಿ ಪ್ರಾಚಾರ್ಯ ಡಾ|ಮಧುಸೂದನ ಭಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಸಹಯೋಜನಾಧಿಕಾರಿ ಉಪನ್ಯಾಸಕರಾದ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ಯೋಜನಾಧಿಕಾರಿ ಉಪನ್ಯಾಸಕರಾದ ಶ್ರೀ ರಾಜೇಶ್ ಕುಮಾರ್ ಧನ್ಯವಾದವಿತ್ತರು. ವಾಣಿಜ್ಯ ವಿಭಾಗ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಎಂಬ್ರಾಡರಿ ತರಬೇತಿ ಸಮಾರೋಪ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಸಂಘದಿಂದ ಆಯೋಜಿಸಲಾದ ಎಂಬ್ರಾಡರಿ ತರಬೇತಿ ತರಗತಿಯ ಸಮಾರೋಪ ಸಮಾರಂಭವು ಕಾಲೇಜಿನ ಸಭಾಭವನದಲ್ಲಿ ಅಕ್ಟೋಬರ್ ೩ ರಂದು ನಡೆಯಿತು.

ಉಡುಪಿಯ ಪ್ರಸಿದ್ಧ ವಿನ್ಯಾಸ ತಜ್ಞೆ ಶ್ರೀಮತಿ ಪದ್ಮಾವತಿ ಶೆಟ್ಟಿಯವರು ಈ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಸಮಾರೋಪ ಮಾತುಗಳನ್ನಾಡುತ್ತ ಯಾವುದೇ ವಿಷಯದ ನಾಲ್ಕನೇ ಒಂದು ಭಾಗ ಮಾತ್ರ ಅಧ್ಯಾಪಕರಿಂದ ಕಲಿಯಬಹುದಾಗಿದ್ದು ಸ್ವಯಂ ಕೌಶಲದಿಂದ ಕಲಿತ ವಿಷಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ಸ್ವೋದ್ಯೋಗದಲ್ಲಿ ನಿರತರಾಗಬೇಕೆಂದು ಹೇಳಿದರು.

ಕಾಲೇಜಿನ ಉಪನ್ಯಾಸಕಿಯರಾದ ಶ್ರೀಮತಿ ಪಲ್ಲವಿ, ಕು|ಇಂದಿರಾ ಇವರ ಜೊತೆಗೆ ೨೬ ವಿದ್ಯಾರ್ಥಿನಿಯರು ಈ ತರಬೇತಿಯ ಪ್ರಯೋಜನವನ್ನು ಪಡೆದಕೊಂಡರು. ತರಬೇತಿಯಲ್ಲಿ ಪಾಲ್ಗೊಂಡವರಿಗೆ ಈ ಸಂದರ್ಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.

ದಿಶಾ ಮಹಿಳಾ ಸಂಘದ ಅಧ್ಯಾಪಕಿ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿದರು. ಪ್ರಶಸ್ತಿ ಸ್ವಾಗತಿಸಿ ಧನ್ಯವಾದವಿತ್ತರು.

ಆದರ್ಶ ಕರ್ಮಯೋಗಿ ಶ್ರೀ ಉಪೇಂದ್ರ ಪೈ

ಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ವ್ಯಾವಹರಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಸೇವೆಗೈದು ಆದರ್ಶ ಕರ್ಮಯೋಗಿಯ ವ್ಯಕ್ತಿತ್ವವನ್ನು ಮೆರೆದ ಮಹಾನ್ ಚೇತನ ಶ್ರೀ ಉಪೇಂದ್ರ ಅನಂತ ಪೈಗಳು ಎಂಬುದಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಹೇಳಿದ್ದಾರೆ.

ಅವರು ನವೆಂಬರ್ ೨೬ ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಶ್ರೀ ಉಪೇಂದ್ರ ಅನಂತ ಪೈಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ವ್ಯಕ್ತಿತ್ವವನ್ನು ಕುರಿತಾಗಿ ಮಾತನಾಡುತ್ತಿದ್ದರು. ಅಯೋಗ್ಯ ಮನುಷ್ಯರೇ ಜಗತ್ತಲ್ಲಿ ಇಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ವಿಧದ ಕೌಶಲ ಇದೆ. ಅವುಗಳನ್ನು ಬೆಳಕಿಗೆ ತರುವ ಪ್ರಯತ್ನವಾದಾಗ ಮನುಷ್ಯ ಕ್ರಿಯಾಶೀಲನಾಗುವ ಮೂಲಕ ತನ್ನ ಬದುಕನ್ನು ಸ್ವಯಂ ರೂಪಿಸಬಲ್ಲ. ಈ ನಿಟ್ಟಿನಲ್ಲಿ ಕೌಶಲಗಳ ಅಭಿವೃದ್ದಿಗೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂಬ ಉಪೇಂದ್ರ ಪೈಗಳ ಸಂದೇಶವನ್ನು ಈ ಸಂದರ್ಭದಲ್ಲಿ ಅವರು ಹೇಳಿದರು.

ಶ್ರೀ ಉಪೇಂದ್ರ ಅನಂತ ಪೈಗಳ ಭಾವಚಿತ್ರಕ್ಕೆ ಪ್ರಾಚಾರ್ಯರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಪುಷ್ಪಾಂಜಲಿಯನ್ನು ಸರ್ಮಪಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ ಕೋಟ್ಯಾನ್ ಪ್ರಾರ್ಥಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ವಂದಿಸಿದರು.

ಕ್ಯಾನ್ಸರ್ ಜಾಗೃತಿಯಿಂದ ಅಪಾಯ ದೂರ ಡಾ. ಕೃಷ್ಣ ಶರಣ್

ಮಾರಕ ರೋಗ ಕ್ಯಾನ್ಸರ್ ಗೆ ನಿಖರ ಕಾರಣಗಳಿಲ್ಲ. ಯಾವುದೇ ಬ್ಯಾಕ್ಟೀರಿಯಾದಿಂದ ಅಥವಾ ಇನ್ನೀತರ ಸೋಂಕುಗಳಿಂದ ಅದು ಹರಡುವುದಿಲ್ಲ. ಇಂದಿನ ಜೀವನ ಪದ್ಧತಿ, ಆಹಾರ ಪದ್ಧತಿಗಳ ವ್ಯತ್ಯಾಸ, ದೈಹಿಕ ವ್ಯಾಯಾಮಗಳ ಕೊರತೆ ಮಾದಕ ದ್ರವ್ಯಗಳ ಅತಿಯಾದ ಸೇವನೆ ಇತ್ಯಾದಿಗಳಿಂದ ಸಂಭವನೀಯ ಕ್ಯಾನ್ಸ್‌ರಿನ ಬಗೆಗೆ ಅರಿವನ್ನು ಪಡೆದು ಅವುಗಳಿಂದ ಜಾಗೃತರಾದಾಗ ಅಪಾಯದಿಂದ ದೂರವಿರಬಹುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರೇಡಿಯೋ ಥೆರಪಿ ಮತ್ತು ಅಂಕೋಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಕೃಷ್ಣ ಶರಣ್ ಹೇಳಿದ್ದಾರೆ.

ಅವರು ಡಿಸೆಂಬರ್ ೪ ರಂದು ಕಿದಿಯೂರು ವಿದ್ಯಾಸಮುದ್ರ ತೀರ್ಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳಿಗಾಗಿ ನಡೆದ ಕ್ಯಾನ್ಸ್‌ರ್ ರೋಗ ಪತ್ತೆ ಹಚ್ಚುವಿಕೆ ಹಾಗೂ ತಡೆಗಟ್ಟುವಿಕೆ ಎಂಬ ವಿಚಾರದಲ್ಲಿ ಮಾತನಾಡುತ್ತಿದ್ದರು. ಅಂಬಲ್ಪಾಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಕೇಶವ ಅಮೀನ್, ಕಾಲೇಜು ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೀಪ ಸ್ವಾಗತಿಸಿದರು.ಭರತ್ ಧನ್ಯವಾದವಿತ್ತರು. ಅಕ್ಷಯ್ ಕಾರ್ಯಕ್ರಮ ನಿರ್ವಹಿಸಿದರು.

ಸುಖಾಯು ಹಿತಾಯು ಆಯುರ್ವೇದದ ವೈಶಿಷ್ಟ್ಯ- ಡಾ|ಕೃಷ್ಣ ಯು.ಕೆ.

ನಿಯತವಾದ ದಿನಚರಿಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಸುಖೀ ಜೀವನ ನಡೆಸುವುದರ ಜೊತೆಗೆ ಕಾಮ, ಕ್ರೋಧ, ಲೋಭ, ಮತ್ಸರ ಮೊದಲಾದ ಮನುಷ್ಯ ಸಹಜ ಸ್ವಭಾವಗಳನ್ನು ನಿಯಂತ್ರಿಸುವುದರಿಂದ ಸಮಾಜದ ದೃಷ್ಟಿಯಲ್ಲಿ ಹಿತಾಯುವಾಗಿ ಬದುಕಬಹುದು. ಇವೆರಡೂ ಆಯುರ್ವೇದ ವಿಜ್ಞಾನದಿಂದ ಮಾತ್ರ ಸಾಧ್ಯ ಎಂದು ಜಪಾನಿನ ನಿಪ್ಪೋನ್ ಆಯುರ್ವೇದ ಶಾಲೆಯ ನಿರ್ದೇಶಕರಾದ ಡಾ|ಕೃಷ್ಣ ಯು.ಕೆ. ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತೋತ್ಸವ ಪ್ರಯುಕ್ತ ಹಮ್ಮಿಕೊಂಡ ವಿಶೇಷೋಪನ್ಯಾಸ ಮಾಲಿಕೆಯಲ್ಲಿ ಆಯುರ್ವೇದ ಪದ್ಧತಿಯಿಂದ ಆರೋಗ್ಯ ಸಂರಕ್ಷಣೆ ಎಂಬ ವಿಚಾರದಲ್ಲಿ ಮಾತನಾಡುತ್ತಿದ್ದರು. ಸಕಾಲದಲ್ಲಿ ಹಿತವಾದ ಮಿತವಾದ ಆಹಾರವನ್ನು ಸೇವಿಸುವುದರಿಂದ ವೈಚಾರಿಕ ಬೆಳವಣಿಗೆ ಸಾಧ್ಯವಾಗಿದ್ದು ವ್ಯಕ್ತಿಯ ಸರ್ವತೋಮುಖ ಪ್ರಗತಿಗೆ ಇದು ಪೂರಕವಾಗುವುದರ ಜೊತೆಗೆ ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಧೈರ್ಯದಿಂದ ಮುನ್ನುಗ್ಗಲು ಸದೃಢ ಆರೋಗ್ಯ ಅವಶ್ಯವಾಗಿದ್ದು ಆಯುರ್ವೇದ ವಿಜ್ಞಾನದಿಂದ ಇದು ಲಭಿಸುವುದಾಗಿ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅನಿರುದ್ಧ್ ಸ್ವಾಗತಿಸಿದರು, ಕುಮಾರಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. ವಾರ್ಷಿಕಾಂಕ ಸುಪ್ರಭಾ ಅನಾವರಣ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೦೧೪-೧೫ ರ ವಾರ್ಷಿಕಾಂಕ ಸಂಚಿಕೆ ಸುಪ್ರಭಾ ಇದರ ಅನಾವರಣ ಕಾರ್ಯಕ್ರಮವು ಸೆಪ್ಟೆಂಬರ್ ೧೧ ರಂದು ಕಾಲೇಜು ಸಭಾಭವನದಲ್ಲಿ ನಡೆಯಿತು.

೧೯೯೬ ರಿಂದ-೧೯೯೯ ರವರೆಗೆ ಕಾಲೇಜಿನ ಪ್ರಾಚಾರ‍್ಯರಾಗಿ ನಿವೃತ್ತರಾದ ಪ್ರೊ.ಎ.ನಾರಾಯಣಾಚಾರ್ಯರು ವಾರ್ಷಿಕಾಂಕವನ್ನು ಅನಾವರಣಗೊಳಿಸುತ್ತ ಹಳ್ಳಿ, ಹಳ್ಳಿಗಳ ಸರ್ವೆ ನಡೆಸಿ ಸಂಗ್ರಹಿಸಿದ ಮಾಹಿತಿಗಳಿಂದ ಸಂಚಿಕೆಯು ಪರಿಪೂರ್ಣವಾಗುವುದಲ್ಲದೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯ ವ್ಯಕ್ತಿಗಳೊಂದಿಗೆ ಸಂದರ್ಶನ ನಡೆಸಿ ಅವರ ವಿಚಾರಗಳನ್ನು ಲೇಖನ ರೂಪದಲ್ಲಿ ಸಂಚಿಕೆಯಲ್ಲಿ ಪ್ರಕಟಿಸಿದಾಗ ಅವು ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕವಾಗುವುದಾಗಿ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಆಶಾ ಕುಮಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಾರ್ಷಿಕಾಂಕದ ಸಂಪಾದಕರಾದ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜಿ.ಸತ್ಯಪ್ರಕಾಶ್ ಧನ್ಯವಾದವಿತ್ತರು, ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಸಾಮಾಜಿಕ ಐಕ್ಯದಿಂದ ರಾಷ್ಟ್ರೈಕ್ಯ - ಡಾ| ನಿ. ವಿಜಯ ಬಲ್ಲಾಳ್

ಸಹಬಾಳ್ವೆ ಸಹಾಧ್ಯಯನ, ಸಹಚಿಂತನೆ, ಸಹಿಷ್ಣುತೆ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಏಕತೆಯನ್ನು ಸಾಧಿಸಬಹುದು. ಸಾಮಾಜಿಕ ಏಕತೆಯಿಂದ ರಾಷ್ಟ್ರೀಯ ಐಕ್ಯದತ್ತ ಸಾಗಲು ಸೇವಾಕೈಂಕರ್ಯದಲ್ಲಿ ತೊಡಗುವುದು ಅನಿವಾರ್ಯವಾಗಿದ್ದು ರಾಷ್ಟ್ರೀಯ ಸೇವಾಯೋಜನೆಯು ಇಂತಹ ಸೇವಾ ಮನೋಭೂಮಿಕೆಗೆ ಸೂಕ್ತ ವೇದಿಕೆಯಾಗಿದೆ ಎಂದು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿಗಳಾದ ಡಾ| ನಿ. ವಿಜಯ ಬಲ್ಲಾಳ್ ಹೇಳಿದ್ದಾರೆ.

ಅವರು ಡಿಸೆಂಬರ್ ೨ ರಂದು ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ವೈಜ್ಞಾನಿಕ ಕಾಲಘಟ್ಟದಲ್ಲಿ ಮನುಷ್ಯನು ನಾನಾರೀತಿಯ ಒತ್ತಡಗಳಿಗೆ ಒಳಗಾಗುತ್ತಿದ್ದು ರಾಷ್ಟ್ರೀಯ ಸೇವಾಯೋಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇವುಗಳಿಂದ ಸಂಪೂರ್ಣ ಹೊರಬರುವುದಲ್ಲದೆ ವೈಚಾರಿಕತೆಯ ಸದ್ಬಳಕೆಗೆ ಇಂತಹ ಶಿಬಿರಗಳು ಸಹಕಾರಿಯಾಗುವುದಾಗಿ ಅವರು ಹೇಳಿದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಮೋದ್ ಸಾಲಿಯಾನ್, ಉದ್ಯಮಿ ಶ್ರೀ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಲ್ಪೆಯ ಉದ್ಯಮಿ ಶ್ರೀ ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ಹಿರಿಯಣ್ಣ ಟಿ.ಕಿದಿಯೂರು, ಶ್ರೀ ವಿದ್ಯಾ ಸಮುದ್ರ ತೀರ್ಥ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ಶ್ರೀ ರಾಧಾಕೃಷ್ಣ ಆಚಾರ್ಯ, ಬಿಲ್ಲವ ಯುವ ಘಟಕದ ಅಧ್ಯಕ್ಷರಾದ ಶ್ರೀ ರಾಮರಾಜ್ ಕಿದಿಯೂರು, ಕಿದಿಯೂರು ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಉಷಾ ಶ್ರೀನಿವಾಸ್, ಶ್ರೀ ವಿದ್ಯಾಸಮುದ್ರತೀರ್ಥ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮೂಖ್ಯೋಪಾಧ್ಯಾಯರಾದ ಶ್ರೀ ಶ್ವೇತನ್ ಎಸ್.ಶೆಟ್ಟಿ ಉಪಸ್ಥಿತರಿದ್ದು, ಶಿಬಿರವು ಯಶಸ್ವಿಯಾಗಲೆಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು. ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ವಾಣಿಜ್ಯ ವಿಭಾಗ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಪ್ರೊ.ಎ.ನಾರಾಯಣಾಚಾರ್ಯ ಇವರಿಗೆ ಸನ್ಮಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬ ಪ್ರಯುಕ್ತ ೧೯೯೬ ರಿಂದ - ೧೯೯೯ ರವರೆಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಎ.ನಾರಾಯಣಾಚಾರ್ಯ ಇವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಆಶಾ ಕುಮಾರಿ, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದೇಶವನ್ನು ಏಕಸೂತ್ರದಲ್ಲಿ ಪೋಣಿಸುವ ಭಾಷೆ ಹಿಂದಿ

ಭಾಷೆಗಳು ಯಾವುವೂ ಕಷ್ಟವಲ್ಲ. ಭಾವನೆಗಳ ಅಭಿವ್ಯಕ್ತಿಗೆ ಸಂವಹನ ಮಾಧ್ಯಮವಾಗಿ ಭಾಷೆಯನ್ನು ಬಳಸುವುದರಲ್ಲಿ ಶ್ರದ್ಧೆ ತೋರಿದಾಗ ಅದು ಯಾವುದೇ ಭಾಷೆಯಾಗಿದ್ದರೂ ಸ್ವಾಯತ್ತವಾಗುವುದು. ವೈವಿಧ್ಯಮಯ ಜನಾಂಗವನ್ನು ಹೊಂದಿದ ದೇಶವು ನಮ್ಮದಾಗಿದ್ದು ಸಮಗ್ರ ದೇಶವನ್ನು ಏಕಸೂತ್ರದಲ್ಲಿ ಪೋಣಿಸಲು ಒಂದು ಭಾಷೆಯ ಅವಶ್ಯಕತೆ ತೋರಿದಾಗ ಮಹಾತ್ಮಗಾಂಧೀಜಿಯವರು ಹಿಂದಿ ಭಾಷೆಯು ದೇಶವನ್ನು ಏಕಸೂತ್ರದಲ್ಲಿ ಪೋಣಿಸಲು ಸಹಕಾರಿಯಾಗುವುದಾಗಿ ಅಭಿಪ್ರಾಯ ಪಟ್ಟಿದ್ದರು ಎಂದು ಉಡುಪಿಯ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ|ಮಾಧವಿ ಭಂಡಾರಿ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ ೨೯ರಂದು ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದ ಅಭ್ಯಾಗತರಾಗಿ ಮಾತನಾಡುತ್ತಿದ್ದರು.

ಕಾಲೇಜಿನ ರಜತ ವರ್ಷ ಪ್ರಯುಕ್ತ ಮಂಗಳೂರು ವಿ.ವಿ. ಅಂತರ್ಕಾಲೇಜು ಮಟ್ಟದ ಹಿಂದಿ ಪ್ರಬಂಧ ಸ್ವರ್ಧೆಯನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು ವಿಜೇತರಾದ ಉಡುಪಿ ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಆಯೆಷಾ ಮಿನಾಜ್ ಪ್ರಥಮ ಹಾಗೂ ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿನಿ ರೇಶ್ಮಾ ದ್ವಿತೀಯ ಇವರಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು, ಹಿಂದಿ ಉಪನ್ಯಾಸಕಿ ಶ್ರೀಮತಿ ಕೃತಿಕ ರಾವ್ ಸ್ವಾಗತಿಸಿದರು, ವಿದ್ಯಾರ್ಥಿನಿ ಸಿಮ್ರಾನ್ ಧನ್ಯವಾದವಿತ್ತರು, ವಿದ್ಯಾರ್ಥಿ ಅನಿರುದ್ಧ್ ಪಡಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಂಸ್ಕೃತದಿಂದ ಸರ್ವಾಂಗೀಣ ವಿಕಾಸ - ಡಾ| ರಮೇಶ್ ಟಿ.ಎಸ್.

ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸಗಳ ಜೊತೆಗೆ ಸಾಮಾಜಿಕ, ರಾಜಕೀಯ, ವೈಜ್ಞಾನಿಕ, ತಾಂತ್ರಿಕ ಹೀಗೆ ಸಮಾಜದ ಎಲ್ಲ ಸ್ತರಗಳಲ್ಲಿ ವಿಕಾಸವನ್ನು ಹೊಂದಿಸುವ ಏಕೈಕ ಭಾಷೆಯಾಗಿ ಸಂಸ್ಕೃತ ಮೆರೆದಿದೆ. ಸಂಸ್ಕೃತ ಸಂಸ್ಕೃತಿ ದೇಶದ ಎರಡು ಪ್ರತಿಷ್ಠೆಗಳಾಗಿದ್ದು ಸಂಸ್ಕೃತಾಧ್ಯಯನದಿಂದ ಜಗತ್ತಿನ ಇತರ ಭಾಷಾ ವಾಙ್ಮಯ ಸಾಹಿತ್ಯವನ್ನು ಅಭ್ಯಸಿಸಲು ಸುಲಭ ಸಾಧ್ಯ ಎಂದು ಉಡುಪಿ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಪ್ರಾಚಾರ್ಯರಾದ ಡಾ|ರಮೇಶ್ ಟಿ.ಎಸ್. ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಅಗಸ್ಟ್ ೩೧ ರಂದು ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಾಚೀನ ಖುಷಿ ಮುನಿಗಳು ಕಂಡ ಸತ್ಯ ವಿಚಾರಗಳು ಸಂಸ್ಕೃತ ಸಾಹಿತ್ಯದಲ್ಲಿ ಅಡಗಿದ್ದು ಅವುಗಳ ಪರಿಪೂರ್ಣ ಅರಿವಿಗೆ ಸಂಸ್ಕೃತದ ಜ್ಞಾನ ಅತ್ಯವಶ್ಯ ಎಂದು ಹೇಳಿದ ಅವರು ಭಕ್ತಿ ಪಂಥದ ಮಹಾನುಭಾವರು ಇಡೀ ಜಗತ್ತಿಗೆ ತಿಳಿಸಿಕೊಡುವುದಕ್ಕಾಗಿ ತಮ್ಮ ಪ್ರಾಂತೀಯ ಭಾಷೆಗಳ ಬದಲಾಗಿ ಸಂಸ್ಕೃತದಲ್ಲಿ ಗ್ರಂಥ ರಚನೆಯಲ್ಲಿ ತೊಡಗಿರುವುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಈ ಸಂದರ್ಭದಲ್ಲಿ ಮಾತನಾಡುತ್ತ ಸಂಸ್ಕೃತ ಪದಗಳ ಸ್ವರ್ಶವಿಲ್ಲದ ಯಾವ ಭಾಷೆಯೂ ಜಗತ್ತಲ್ಲಿ ಇಲ್ಲ. ಮನುಷ್ಯರು ಮಾತ್ರವಲ್ಲದೆ ಪಶು ಪಕ್ಷಿಗಳ ಕೂಗಿನಲ್ಲೂ ಸಂಸ್ಕೃತದ ಅನುಕರಣೆ ಇದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿ ಸಂಸ್ಕೃತ ವೇದ ಮಂತ್ರಗಳ ಸಸ್ವರ ಉಚ್ಚಾರಣೆಯಿಂದ ಯೌಗಿಕ ಚಿಕಿತ್ಸೆಯು ಶರೀರಕ್ಕೆ ಲಭಿಸುವುದಾಗಿ ಹೇಳಿದರು.

ವಿದ್ಯಾರ್ಥಿಗಳಾದ ಅಜಿತ್ ಭಟ್ ವೇದಘೋಷ ಮಾಡಿದರು. ವಿದ್ಯಾರ್ಥಿನಿ ಸುಪ್ರಿಯಾ ಧನ್ಯವಾದವಿತ್ತರು. ಕು|ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ - ರಕ್ಷಕ -ಶಿಕ್ಷಕ ಸಂಘದ ಮಹಾಸಭೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಶೈಕ್ಷಣಿಕ ವರ್ಷದ ಮಹಾಸಭೆಯು ಅಗಸ್ಟ್ ೨೨ ರಂದು ಕಾಲೇಜು ಸಭಾಭವನದಲ್ಲಿ ನಡೆಯಿತು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಅರ್ಧವಾರ್ಷಿಕ ವರದಿಯನ್ನು ಹೆತ್ತವರ ಮುಂದಿರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತ ಶಿಕ್ಷಕರ ಕರ್ತವ್ಯದ ಜೊತೆಗೆ ಹೆತ್ತವರು ಮಕ್ಕಳ ವಿಷಯದಲ್ಲಿ ತೋರಬೇಕಾದ ಕಾಳಜಿಯ ಬಗ್ಗೆ ಪ್ರಸ್ತಾಪಿಸಿದರು. ಶಿಕ್ಷಕರು, ಹೆತ್ತವರು ವಿದ್ಯಾರ್ಥಿಗಳು ಅವರವರ ಕರ್ತವ್ಯಗಳನ್ನು ಅರಿತು ಪ್ರಾಮಾಣಿಕವಾಗಿ ನಿರ್ವಹಿಸುವುದರಿಂದ ಸುಸಂಸ್ಕೃತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬಹುದು ಎಂದು ಹೇಳಿದರು.

ಸಂಘದ ಪದಾಧಿಕಾರಿಗಳ ಆಯ್ಕೆಯು ಈ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಕೆ.ಶಾರದಾ, ಕಾರ್ಯದರ್ಶಿಯಾಗಿ ಶ್ರೀ ಎ.ಎಸ್.ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀಮತಿ ಶೋಭಾ ಪಿ ಹೆಗ್ಡೆ, ಶ್ರೀಮತಿ ಪ್ರತಿಭಾ ಎಸ್ ಆಚಾರ್ಯ, ಶ್ರೀಮತಿ ಭಾರತಿ ಆರ್, ಶ್ರೀಮತಿ ಶಕೀನಾ, ಶ್ರೀ ಪೂರ್ಣಾನಂದ ಶಾಸ್ತ್ರಿ ಹಾಗೂ ಶ್ರೀ ಜಯಕುಮಾರ್ ಪರ್ಕಳ ಇವರು ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾದ ಶ್ರೀ ರಾಜಗೋಪಾಲ್, ಕಾರ್ಯದರ್ಶಿಗಳಾದ ಶ್ರೀಮತಿ ಶಕೀಲಾ ಬಾನು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀ ರಾಧಾಕೃಷ್ಣ ರಾವ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾ ಕುಮಾರಿ ವೇದಿಕೆಯಲ್ಲಿದ್ದರು.

ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ಸಂಘದ ಕಾರ್ಯದರ್ಶಿಗಳಾದ ಎ.ಎಸ್.ಆಚಾರ್ಯ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಪ್ರಥಮ ಚಿಕಿತ್ಸೆಯ ಅರಿವಿನಿಂದ ಪ್ರಾಣ ಸಂರಕ್ಷಣೆ

ಬೆಂಕಿ ಆಕಸ್ಮಿಕ, ಪ್ರವಾಹ, ಅಪಘಾತ, ಅಪಸ್ಮಾರ ಮೊದಲಾದ ಗಂಡಾಂತರಗಳ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಪೂರ್ವಭಾವಿಯಾಗಿ ಮಾಡುವ ಪ್ರಥಮ ಚಿಕಿತ್ಸೆಯಿಂದ ಪ್ರಾಣ ಸಂರಕ್ಷಣೆ ಮಾಡಿಕೊಳ್ಳಬಹುದು ಎಂದು ಮಾಹೆಯ ಪಬ್ಲಿಕ್ ಹೆಲ್ತ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಕಾಮತ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ವತಿಯಿಂದ ಹಮ್ಮಿಕೊಂಡ ಪ್ರಥಮ ಚಿಕಿತ್ಸೆಯ ಅರಿವಿನ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹಾವು, ನಾಯಿಗಳು ಕಚ್ಚಿದಾಗ ಗಾಯ ಸೂಕ್ಷ್ಮವಾಗಿದ್ದರೂ ಕ್ರಮೇಣ ವಿಷವು ವ್ಯಾಪಿಸಿ ಪ್ರಾಣಾಪ್ರಾಯಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆಯನ್ನು ಅರಿತು ದೇಹಕ್ಕೆ ವ್ಯಾಪಿಸುವ ವಿಷವನ್ನು ಯಾವ ರೀತಿ ತಡೆಗಟ್ಟಬಹುದು ಎಂಬುದನ್ನು ಪ್ರಾಯೋಗಿವಾಗಿ ತಿಳಿಸಿಕೊಟ್ಟರು. ಕೋಳಿ ಅಂಕಗಳಲ್ಲಿ ಬಳಸುವ ಶಸ್ತ್ರವು ಅತ್ಯಂತ ಭಯಂಕರವಾಗಿದ್ದು ಒಂದೊಮ್ಮೆ ಅವುಗಳ ಗಾಯವನ್ನು ಉಪೇಕ್ಷಿಸಿದಲ್ಲಿ ಪ್ರಾಣಕ್ಕೆ ಅಪಾಯವಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆಯಿಂದ ಪ್ರಾಥಮಿಕ ಶಮನವನ್ನು ಅಂತಹ ಸಂದರ್ಭದಲ್ಲಿ ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಇಂಡಿಯನ್ ರೆಡ್‌ಕ್ರಾಸ್ ಕರ್ಣಾಟಕ ವಿಭಾಗದ ಅಧ್ಯಕ್ಷರಾದ ಶ್ರೀ ಬಸ್ರೂರು ರಾಜೀವ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಯುವ ರೆಡ್ ಕ್ರಾಸ್ ವಿಭಾಗದ ಅಧ್ಯಾಪಕ ಸಲಹೆಗಾರರಾದ ಶ್ರೀ ಜಾವೆದ್ ಕಾರ್ಯಕ್ರಮ ನಿರ್ವಹಿಸಿದರು.

ಶೇರು ಮಾರುಕಟ್ಟೆ ವ್ಯವಹಾರಕ್ಕೆ ತರಬೇತಿ ಅವಶ್ಯ - ಪ್ರೊ.ರಘುನಂದನ್

ಸಂಪನ್ಮೂಲ ವ್ಯಕ್ತಿಗಳಿಂದ ಯೋಗ್ಯ ತರಬೇತಿ ಪಡೆದು ಶೇರು ಮಾರುಕಟ್ಟೆಯಲ್ಲಿ ಬಂಡವಾಳವನ್ನು ತೊಡಗಿಸುವುದರಿಂದ ಅತ್ಯಧಿಕ ಲಾಭವನ್ನು ಗಳಿಸಬಹುದು ಎಂದು ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ತರಬೇತುದಾರರಾದ ಪ್ರೊ.ಬಿ.ವಿ.ರಘುನಂದನ್ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತವರ್ಷ ಪ್ರಯುಕ್ತ ಹಮ್ಮಿಕೊಳ್ಳಲಾದ ವಿಶೇಷೋಪನ್ಯಾಸ ಮಾಲಿಕೆಯಲ್ಲಿ ಶೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದರು. ಹೂಡಿಕೆ ಮಾಡಬೇಕಾದ ಕಂಪೆನಿಗಳ ಗುಣಮಟ್ಟವನ್ನು ಚೆನ್ನಾಗಿ ಅರಿತು ಯೋಗ್ಯ ದೇಶ ಕಾಲದಲ್ಲಿ ಬಂಡವಾಳವನ್ನು ತೊಡಗಿಸಿ ಕಾಯುವ ಸಹನೆ ತೋರಿದಾಗ ಕಾಲಾಂತರದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಉಪನ್ಯಾಸಕ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಬದುಕಿಗೆ ಹತ್ತಿರವಾದ ಕ್ರೀಡೆ ಚೆಸ್ - ಡಾ.ಎನ್.ವಿಜಯಬಲ್ಲಾಳ

ಶತ್ರುಗಳು ಯಾವ ಸಂದರ್ಭದಲ್ಲಿ ಯಾವ ಮೂಲೆಯಿಂದಾದರೂ ಆಕ್ರಮಿಸಬಹುದು. ಅದನ್ನು ಸಮರ್ಥವಾಗಿ ತಡೆಗಟ್ಟಿ ನಿರ್ಭಯ ರಾಜಕೀಯವನ್ನು ನಡೆಸಬೇಕಾದುದು ರಾಜನ ಕರ್ತವ್ಯ. ಈ ನಿಟ್ಟಿನಲ್ಲಿ ಚೆಸ್ ಕ್ರೀಡೆಯು ಬದುಕಿಗೆ ತೀರ ಹತ್ತಿರವಾಗಿದೆ ಎಂದು ಅಂಬಲ್ಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಯಾದ ಡಾ. ಎನ್.ವಿಜಯ ಬಲ್ಲಾಳ್ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟಂಬರ್ ೩ ರಿಂದ ೫ ರವರೆಗೆ ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ಪುರುಷರ ಮತ್ತು ಮಹಿಳೆಯರ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನಸಿಕ ಕಸರತ್ತೇ, ಪ್ರಧಾನವಾಗಿರುವ ಚೆಸ್ ಕ್ರೀಡೆಯಲ್ಲಿ ಮನಸ್ಸಿನ ಸ್ಥಿರತೆಗೆ ಆರೋಗ್ಯ ಪೂರ್ಣ ಶಾರೀರಿಕ ದೃಢತೆ ಬೇಕು. ಜಯ, ಅಪಜಯ ಕ್ರೀಡೆಗಳಲ್ಲಿ ಸಾಮಾನ್ಯವಾಗಿದ್ದು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದಾಗ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಈ ನಿಟ್ಟಿನಲ್ಲಿ ಬುದ್ಧಿ ಕೌಶಲದ ಚೆಸ್ ಕ್ರೀಡೆ ಭವಿಷ್ಯದ ಕಾರ್ಯಕ್ಷೇತ್ರಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಪ್ರಯತ್ನಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು.

ಉಡುಪಿ ಮಂಗಳೂರು ಸಹಕಾರಿ ಮೀನುಗಾರಿಕಾ ಫೆಡರೇಶನ್ ಇದರ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಸೈಂಟ್ ಮೇರಿಸ್, ಶಿರ್ವ ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೇಣು ಗೋಪಾಲಕೃಷ್ಣ ನೋಂಡಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮಡಿಕೇರಿ ಸೇರಿದಂತೆ ಪುರುಷರ ವಿಭಾಗದಲ್ಲಿ ೨೬ ತಂಡಗಳು, ಮಹಿಳಾ ವಿಬಾಗದಲ್ಲಿ ೧೭ ತಂಡಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಡಾ|ವಸಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿಯ ಸನ್ಮಾನ್ಯ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ ೩ ರಿಂದ ಪ್ರಾರಂಭವಾದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯನ್ನು ವೀಕ್ಷಿಸಿದರು. ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್ ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು.

ಗಾಂಧೀಜಿಯ ಕನಸಿನ ನನಸು ಸನಿಹ

ಮನೆಸ್ವಚ್ಛೆ, ಗ್ರಾಮಸ್ವಚ್ಛದ ಮೂಲಕ ಸಂಪೂರ್ಣ ದೇಶ ಸ್ವಚ್ಛತೆಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಕನಸು ನನಸಾಗುವ ದಿನ ಹತ್ತಿರವಾಗಿದೆ ಎಂದು ಉಡುಪಿ ನಗರಸಭಾಧ್ಯಕ್ಷರಾದ ಶ್ರೀ ಯುವರಾಜ್ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಲಾದ ಕುಂಜಿಬೆಟ್ಟುವಿನಿಂದ ಕಲ್ಸಂಕದವರೆಗಿನ ಸ್ವಚ್ಛ ಭಾರತ ಆಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಗರ ಸಭಾ ಸದಸ್ಯರಾದ ಶ್ರೀ ಶಶಿರಾಜ್ ಕುಂದರ್, ಲಯನ್ಸ್ ಕ್ಲಬ್ ಮಿಡ್ ಟೌನ್ ಉಡುಪಿಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಕೆ.ಎಸ್., ಲಯನ್ಸ್ ಜಿಲ್ಲಾ ಗವರ್ನರ್ ಶ್ರೀ ಶ್ರೀಧರ್ ಸನೇವಾ, ಓಕುಡೆ ಡಯಗ್ನಸ್ಟಿಕ್ ಮೆಡಿಕಲ್ ಸೆಂಟರ್ ಕಡಿಯಾಳಿಯ ಡಾ|ಅಶೋಕ್ ಕುಮಾರ್ ವೈ.ಜಿ., ಸಿಂಡಿಕೇಟ್ ಬ್ಯಾಂಕ್ ಕುಂಜಿಬೆಟ್ಟು ಶಾಖೆಯ ಶ್ರೀ ಸೀತಾರಾಮ್, ಹೋಂಡಾ ಮ್ಯಾಟ್ರಿಕ್ಸ್ ವ್ಯವಸ್ಥಾಪಕರಾದ ಶ್ರೀ ಜಯಂತ್, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್‌ನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ನಂತರ ಕಾಲೇಜಿನ ಬೋಧಕ, ಮತ್ತು ಬೋಧಕೇತರ ಸಿಬ್ಬಂದಿಗಳಿಂದ ಆರಂಭಿಸಿ, ರಾಷ್ಟ್ರೀಯ ಸೇವಾಯೋಜನೆಯ ಸುಮಾರು ೮೦ ವಿದ್ಯಾರ್ಥಿಗಳು ಎಂ.ಜಿ.ಎಂ. ಬಸ್ ನಿಲ್ದಾಣದಿಂದ ಆರಂಭಿಸಿ ಕಲ್ಸಂಕದವರೆಗಿನ ರಸ್ತೆಯ ಇಕ್ಕಡೆಗಳನ್ನು ಸ್ವಚ್ಛ ಗೊಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.

ಕಸೂತಿ ಕಲೆಯಿಂದ ಸ್ವೋದ್ಯೋಗ ಸೃಷ್ಟಿ

ವಿಧವಿಧವಾದ ಕಸೂತಿಯಿಂದ ಕೂಡಿದ ವಸ್ತ್ರಗಳಿಗೆ ದುಬಾರಿ ಬೆಲೆ ತೆರುವುದಕ್ಕೆ ಬದಲಾಗಿ ವಸ್ತ್ರಗಳ ಮೇಲೆ ಕಸೂತಿಗಳನ್ನು ಸ್ವಯಂ ರಚಿಸುವುದರಿಂದ ಸ್ವೋದ್ಯೋಗವನ್ನು ಸಂಪಾದಿಸಿಕೊಳ್ಳಬಹುದು ಎಂದು ಉಡುಪಿಯ ಟೈಲರಿಂಗ್ ಎಂಬ್ರಾಡರಿ ತರಬೇತುದಾರರಾದ ಶ್ರೀಮತಿ ಪದ್ಮಾವತಿ ಶೆಟ್ಟಿ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷಪ್ರಯುಕ್ತ ದಿಶಾ ಮಹಿಳಾ ಸಂಘದಿಂದ ಆಯೋಜಿಸಲಾದ ಎಂಬ್ರಾಡರಿ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಯಂ ನೆಲೆಯನ್ನು ತಂದುಕೊಳ್ಳಬೇಕಾದರೆ ಕೆಲವು ಸ್ವೋದ್ಯೋಗಗಳ ಬಗೆಗೆ ಮಾಹಿತಿ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಎಂಬ್ರಾಡರಿ ತರಗತಿಗಳಿಂದ ಮಾಹಿತಿಯನ್ನು ಪಡೆದು ವಿದ್ಯಾರ್ಥಿನಿಯರು ಅದನ್ನು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕಿ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮೀ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಏಂಜಲ್ ಕರಿಷ್ಮ ಸ್ವಾಗತಿಸಿದರು, ಭಟ್ ಶ್ರುತಿ ಧನ್ಯವಾದವಿತ್ತರು, ಅಂಕಿತಾ ಪಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ದುಶ್ಚಟಗಳ ವಿಮೋಚನೆಯಿಂದ ಮೆದುಳಿನ ಸ್ವಚ್ಛೀಕರಣ

ಇಂಟರ್‌ನೆಟ್, ಮೊಬೈಲ್, ದೂರದರ್ಶನ ಮುಂತಾದುವುಗಳ ದುರ್ಬಳಕೆಯ ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಿ, ಧ್ಯಾನ, ಸತ್ಪುರುಷರ ಸಂಗ, ದುಶ್ಚಟಗಳಿಂದ ವಿಮೋಚನೆ ಮುಂತಾದ ಸನ್ಮಾರ್ಗಗಳನ್ನು ಅನುಸರಿಸುವುದರಿಂದ ಬ್ರೈನ್‌ವಾಶ್ ಅಂದರೆ ಮೆದುಳಿನ ಸ್ವಚ್ಛೀಕರಣ ಸಾಧ್ಯ ಎಂದು ನಿವೃತ್ತ ವಿಜಯಬ್ಯಾಂಕ್ ಪ್ರಬಂಧಕರಾದ ದಿವಾನ್ ಕೇಶವ ಭಟ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಹಾಗೂ ದಿಶಾ ಮಹಿಳಾ ಸಂಘದಿಂದ ರಜತ ವರ್ಷ ಪ್ರಯುಕ್ತ ಆಯೋಜಿಸಲಾದ ಯಶಸ್ವೀ ಬದುಕಿನ ಹತ್ತು ಸೂತ್ರಗಳು ಹಾಗೂ ಬ್ರೈನ್‌ವಾಶ್ ಮೆಥೆಡಾಲಜಿ ಎಂಬ ವಿಷಯದ ಮೇಲೆ ವಿಶೇಷೋಪನ್ಯಾಸ ನೀಡುತ್ತಿದ್ದರು. ನಿರ್ಣಯ ಸ್ವೀಕಾರ, ಸಮಸ್ಯಾ ಪರಿಹಾರ, ವಿಮರ್ಶಾತ್ಮಕ ಚಿಂತನೆ, ರಚನಾತ್ಮಕ ಚಿಂತನೆ, ಪರಿಣಾಮಕಾರಿ ಸಂವಹನ, ಪರಸ್ಪರ ಸಂಬಂಧ, ಆತ್ಮಪ್ರಜ್ಞೆ ಇತರರಲ್ಲಿ ತನ್ನನ್ನು ಕಾಣುವುದು, ಭಾವೋದ್ವೇಗ ನಿಗ್ರಹ, ಒತ್ತಡ ನಿಭಾವಣೆಗಳೆಂಬ ಯಶಸ್ವೀ ಬದುಕಿನ ಹತ್ತು ಸೂತ್ರಗಳನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ, ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ತೀರ್ಥ ಸ್ವಾಗತಿಸಿದರು. ಶ್ರೀ ಮಹೇಶ್ ಧನ್ಯವಾದವಿತ್ತರು. ಕು.ಅನುಷಾ ಕಾರ್ಯಕ್ರಮ ನಿರ್ವಹಿಸಿದರು.

ಸ್ವಾತಂತ್ರ್ಯೋತ್ಸವ

ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ 69 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ ದಕ್ಷಿಣಭಾರತೀಯ ಪ್ರದೇಶಿಕ ಸಮಿತಿಯ ಸದಸ್ಯರಾದ ಚೆನ್ನೈ ಮೂಲದ ಸಿ.ಎ. ಕೆ. ಶ್ರೀಪ್ರಿಯಾ ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶವನ್ನಿತ್ತರು. ಕಾಲೇಜಿನ ಪ್ರಾಚಾರ್ಯರಾದ ಡಾ| ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಉಡುಪಿ ವಲಯ ಸಿ.ಎ.ಶಾಖಾಧ್ಯಕ್ಷರಾದ ಶ್ರೀ ಪ್ರಶಾಂತ್ ಹೊಳ್ಳ ಹಾಗೂ ಉಡುಪಿ ವಲಯದ ಸದಸ್ಯರು, ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯು.ಪಿ.ಎಂ.ಸಿ - ಹಳೆ ವಿದ್ಯಾರ್ಥಿಗಳ ಸಮಾವೇಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತೋತ್ಸವ ಪ್ರಯುಕ್ತ ವಿಚಾರ ವಿನಿಮಯ ನಡೆಸುವುದಕ್ಕಾಗಿ ಹಳೆ ವಿದ್ಯಾರ್ಥಿಗಳ ಸಮಾವೇಶ ಇತ್ತೀಚೆಗೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ರಜತ ವರ್ಷವನ್ನು ಆರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಅನೇಕ ಚಟುವಟಿಕೆಗಳನ್ನು ಹಳೆ ವಿದ್ಯಾರ್ಥಿ ಸಂಘದಿಂದ ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಪ್ರಸ್ತುತ ರಜತ ವರ್ಷದ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಶ್ರೀಮತಿ ಪ್ರಭಾ ಕಾಮತ್, ಅಧ್ಯಕ್ಷರಾಗಿ ಶ್ರೀ ಮನೋಹರ ಶೆಟ್ಟಿ ತೋನ್ಸೆ, ಉಪಾಧ್ಯಕ್ಷರಾಗಿ ಶ್ರೀ ನವೀನ್ ಹೆಗ್ಡೆ, ಶ್ರೀ ಮಕ್ಸೂದ್ ಅಹ್ಮದ್, ಶ್ರೀ ನಿತೀಶ್ ಶೆಟ್ಟಿ, ಶ್ರೀಮತಿ ಶ್ರೀದೇವಿ ಭಟ್ ಹಾಗೂ ಶ್ರೀ ಲಿಖಿತ್ ರಾಜ್ ಮತ್ತು ಕಾರ್ಯದರ್ಶಿಯಾಗಿ ಶ್ರೀ ಶಶಿಕಿರಣ್, ಉಪಕಾರ್ಯದರ್ಶಿಯಾಗಿ ಶ್ರೀಮತಿ ಅಂಬಿಕಾ ನಾಯಕ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ರವಿರಾಜ್ ಎಚ್.ಪಿ., ಶ್ರೀ ಗಣೇಶ್ ಬ್ರಹ್ಮಾವರ, ಶ್ರೀ ಮಹಮ್ಮದ್ ಫರಾಜ್, ಶ್ರೀ ಗಿರೀಶ್ ಐತಾಳ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಲುಮೇನ್ ಶಾನ್ ಲೋಬೋ ಹಾಗೂ ಶ್ರೀ ಅಮರ್ ದೀಪ್ ಆಯ್ಕೆಯಾದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಉಪನ್ಯಾಸಕರಾದ ಶ್ರೀಮತಿ ಆಶಾ ಹೆಗ್ಡೆ , ಶ್ರೀ ಪ್ರಭಾ ಕಾಮತ್ ಶ್ರೀ ರಾಧಾಕೃಷ್ಣ ರಾವ್, ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಈಜು ಸ್ವರ್ಧೆಯಲ್ಲಿ ಕಂಚಿನ ಪದಕ

ಸೈಂಟ್ ಫಿಲೋಮಿನ ಕಾಲೇಜು, ಪುತ್ತೂರು ಇವರು ಇತ್ತೀಚೆಗೆ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಈಜು ಸ್ವರ್ಧೆಯ ಪುರುಷರ ವಿಭಾಗದ 1500 ಮೀಟರ್ ಫ್ರಿಸ್ಟೈಲ್ ಮತ್ತು 400 ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವೀತಿಯ ಬಿ.ಕಾಮ್ ವಿದ್ಯಾರ್ಥಿ ಮೊಹಮದ್ ಫರ್‍ಹಾನ್ ಇವರನ್ನು ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಅಭಿನಂದಿಸಿದರು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಹಸ್ತಪ್ರತಿ ಸಂರಕ್ಷಣೆಯಿಂದ ವಾಙ್ಮಯ ಸಂಪತ್ತು ಚಿರಂತನ

ಕಷ್ಟೇನ ಲಿಖಿತಂ ಲೇಖಂ ಯತ್ನೇನ ಪರಿಪಾಲಯೇತ್ ಎಂಬಂತೆ ಹಿಂದಿನವರು ಬಹಳ ಕಷ್ಟದಿಂದ ಬರೆದ ಕೈ ಬರಹಗಳನ್ನು ಪ್ರಯತ್ನ ಪೂರ್ವಕವಾಗಿ ಸಂರಕ್ಷಿಸಬೇಕು ಇದರಿಂದ ಪ್ರಾಚೀನ ವಾಙ್ಮಯ ಸಂಪತ್ತು ಚಿರಸ್ಥಾಯಿಯಾಗುವುದಾಗಿ ಕೆಳದಿ ವಸ್ತುಸಂಗ್ರಹಾಲಯದ ಸಹಾಯಕ ಕ್ಯೂರೇಟರ್ ಆಗಿರುವ ಶ್ರೀ ಜಿ.ವಿ.ಕಲ್ಲಾಪುರ ಹೇಳಿದ್ದಾರೆ.

ಅವರು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಇವರ ಸಹಯೋಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತವರ್ಷ ಪ್ರಯುಕ್ತ ಆಯೋಜಿಸಲಾದ ಒಂದು ದಿನದ ಹಸ್ತಪ್ರತಿ ಸಂರಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಳೆಗರಿಸ್ವರೂಪ, ಅದರಲ್ಲಿರುವ ಬರಹ, ಅವನ್ನು ಸಂರಕ್ಷಿಸುವ ಕ್ರಮ ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ವಿವರಿಸಿದ ಅವರು ಮನೆಗಳಲ್ಲಿ ಹಸ್ತಪ್ರತಿಗಳ ಸಂಗ್ರಹವಿದ್ದಲ್ಲಿ ಸಂರಕ್ಷಣೆ ಅಥವಾ ಸಂರಕ್ಷಣೆಗಾಗಿ ಸಂಶೋಧನ ಪ್ರತಿಷ್ಠಾನಗಳಿಗೆ ನೀಡುವಂತೆ ಕರೆ ಇತ್ತರು.

ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ವಿದ್ವಾನ್ ಶ್ರೀ ಗೋಪಾಲಾಚಾರ್ಯರು ನಶಿಸುವ ಹಂತದಲ್ಲಿರುವ ಹಸ್ತ ಪ್ರತಿಗಳ ಸ್ವರೂಪವನ್ನು ವಿವರಿಸಿ ಅವುಗಳ ಶುದ್ಧಿಕರಣ, ಅನಂತರ ಲಿಪಿ ಸ್ಚರೂಪ ಜ್ಞಾನ, ಸಂಬಂಧಿಸಿದ ಶಾಸ್ತ್ರ, ಸೂಕ್ಷ್ಮಾಕ್ಷರಗಳನ್ನು ಭೂತಗನ್ನಡಿಯಲ್ಲಿ ನೋಡಿ ಹೊಸಹೊಸ ವಿಚಾರಗಳನ್ನು ಅರಿತುಕೊಳ್ಳವ ಬಗೆಯನ್ನು ವಿವರಿಸಿದರು. ಸಂಶೋಧನ ಪ್ರತಿಷ್ಠಾನದ ಲಿಪಿತಜ್ಞ ಶ್ರೀ ಮಹಿತೋಷ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸತ್ಯನಾರಾಯಣ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಪ್ರಿಯಾ ಧನ್ಯವಾದವಿತ್ತರು. ಕು|ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. - ಶೈಕ್ಷಣಿಕ ಸಾಧಕರಿಗೆ ಸನ್ಮಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ೨೦೧೪-೧೫ರ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಸೆಮಿಸ್ಟರ್ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉಡುಪಿ ಜಿಲ್ಲಾ ಬಿಲ್ಡ್‌ರ್‍ಸ್ ಅಸೋಶಿಯೇಶನ್ ಅಧ್ಯಕ್ಷರಾದ ಮಾಂಡವಿ ಬಿಲ್ಡ್‌ರ್‍ಸ್‌ನ ಮಾಲಕರಾದ ಡಾ. ಜೆರ್ರಿ ವಿನ್ಸೆಂಟ್ ಡಯಸ್ ಸಾಧಿತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತ ಕಠಿಣ ಪರಿಶ್ರಮದಿಂದ ಕೂಡಿದ ದುಡಿಮೆ ಯಶಸ್ಸಿಗೆ ಕಾರಣವಾಗಿದ್ದು ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳು ಕಠಿಣಶ್ರಮಕ್ಕೆ ಮುಂದಾಗಬೇಕು. ವಿದ್ಯಾ ವಿನಯೇನ ಶೋಭತೇ ಎಂಬಂತೆ ವಿದ್ಯೆಯ ಜೊತೆಗೆ ವಿನಯವು ಅವಶ್ಯವಾಗಿದ್ದು ದುರಹಂಕಾರದಿಂದ ಕಲಿತವಿದ್ಯೆ ವ್ಯರ್ಥವಾಗುವುದು. ನಡೆದಾಡುವ ದೇವರಂತಿರುವ ತಂದೆ ತಾಯಿಗಳು, ಕಲಿಸಿದ ಗುರುಗಳು ಇವರ ಸೇವೆಗೆ ಸಲ್ಲಿಸುವ ಕೃತಜ್ಞತೆಯಿಂದ ಯಶಸ್ಸಿನ ಉತ್ತುಂಗ ತಲುಪಲು ಸಾಧ್ಯವೆಂದು ಹೇಳಿದರು.

ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಉಡುಪಿ ಲಕ್ಷ್ಮೀ ಎಲೆಕ್ಟ್ರಿಕಲ್ಸ್ ಮಾಲಕರಾದ ಶ್ರೀ ರಾಜಗೋಪಾಲ್ ಇವರು ಪ್ರತಿ ತರಗತಿಯ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಪ್ರಭಾ ಕಾಮತ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಸಾಧನೆಗೈದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಇಂಗ್ಲೀಷ್ ಉಪನ್ಯಾಸಕ ಶ್ರೀ ರಾಧಾಕೃಷ್ಣ ರಾವ್ ವಂದಿಸಿದರು.

ಯು.ಪಿ.ಎಂ.ಸಿ - ಉಪನ್ಯಾಸಕಿಗೆ ಹೃದಯಸ್ಪರ್ಶಿ ವಿದಾಯ

ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಎ.ನಿರ್ಮಲಾ ಶೆಣೈ ಇವರಿಗೆ ವೃತ್ತಿ ನಿವೃತ್ತಿಯ ಸಂದರ್ಭದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುವ ಸಮಾರಂಭ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಇವರು ಉಪನ್ಯಾಸಕಿಯ ಸೇವಾವಧಿಯ ಕೊಡುಗೆಗಳನ್ನು ಸ್ಮರಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಶುಭ ನುಡಿಗಳನ್ನು ಆಡಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾ ಕುಮಾರಿ ಸ್ಮರಣಿಕೆಯನ್ನು ನೀಡಿದರು. ಶ್ರೀಮತಿ ನಿರ್ಮಲಾ ಶೆಣೈ ಇವರ ಪತಿ ಶ್ರೀ ನಾಗೇಶ್ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಯು.ಪಿ.ಎಂ.ಸಿ. - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪದವೀ ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

ಟೈಮ್ - ಸಂಸ್ಥೆಯ ಉಡುಪಿ - ಮಂಗಳೂರು ವಿಭಾಗದ ಮಾರ್ಕೆಟಿಂಗ್ ವಿಭಾಗದ ಉಪನಿರ್ದೇಶಕರಾದ ಶ್ರೀ ಆತಿಶ್ ಪೂಜಾರಿಯವರು ಎಂ.ಬಿ.ಎ.ಗೆ ಸಂಬಂಧದ ಮ್ಯಾಟ್, ಸಿ.ಮ್ಯಾಟ್, ಮೊದಲಾದ ಪರೀಕ್ಷೆಗಳು, ಪಿ.ಜಿ.ಡಿ.ಸಿ.ಎ. ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಬಗೆಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ವೃತ್ತಿಮಾರ್ಗದರ್ಶನ ಸಂಘದ ಅಧ್ಯಾಪಕ ಸಲಹೆಗಾರರಾದ ಶ್ರೀ ಜಾವೆದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ಫೂರ್ತಿ ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕ ಶ್ರೀ ರಾಧಾಕೃಷ್ಣ ರಾವ್ ಸ್ಮರಣಿಕೆ ನೀಡಿದರು. ವಿದ್ಯಾರ್ಥಿನಿ ಶ್ರೀ ಶ್ರೇಯಸ್ವಿ ಕಾರ್ಯಕ್ರಮ ನಿರ್ವಹಿಸಿದರು.

ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಕರೆ

ಮಾದಕ ವ್ಯಸನಗಳು ವ್ಯಕ್ತಿಯ ಅಂಗಾಂಗಳ ಸರ್ವನಾಶಕ್ಕೆ ಕಾರಣವಾಗಿದ್ದು ಅವುಗಳಿಂದ ಮುಕ್ತವಾಗದ ಹೊರತು ಆರೋಗ್ಯ ಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿಲ್ಲ . ಹೀಗಾಗಿ ಸ್ವಾಸ್ಥ್ಯ ಬದುಕಿಗೆ ಮಾದಕ ವ್ಯಸನಗಳಿಂದ ಸಂಪೂರ್ಣ ದೂರವಿರಬೇಕಾದುದು ಅನಿವಾರ್ಯ ಎಂದು ಮಾಹೆಯ ಮಾನಸಿಕ ವೈದ್ಯ ವಿಭಾಗದ ಸಂಶೋಧನ ತಜ್ಞೆ ಡಾ|ಸಪ್ನ ಗಣೇಶ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನ ವತಿಯಿಂದ ಹಮ್ಮಿಕೊಂಡ ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಅವುಗಳಿಂದ ಮುಕ್ತರಾಗುವ ಬಗೆ ಎಂಬ ವಿಚಾರದಲ್ಲಿ ಮಾತನಾಡುತ್ತಿದ್ದರು. ಯಾವುದೇ ರೀತಿಯ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗದೇ ಇರುವುದರು ಮಾತ್ರವಲ್ಲದೆ ಇಂತಹ ವ್ಯಸನಗಳಿಗೆ ಬಲಿಯಾದವರನ್ನು ಅದರಿಂದ ಹೊರಬರುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸೇವಾಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತೇಜಲ್ ಸ್ವಾಗತಿಸಿದರು, ಶೀತಲ್ ಕುಂದರ್ ಧನ್ಯವಾದವಿತ್ತರು, ಕುಮಾರಿ ಚೈತ್ರ ಕಾರ್ಯಕ್ರಮ ನಿರ್ವಹಿಸಿದರು.

 

ಮುಂಜಾಗ್ರತೆಯಿಂದ ರೋಗ ಮುಕ್ತಿ - ಡಾ|ಚೆನ್ನಕೇಶವ ರಾವ್

ರೋಗಗಳಿಗೆ ಪರಿಹಾರ ಕಂಡುಕೊಳ್ಳ್ಳುವುದಕ್ಕಿಂತ ಅವು ಬಾರದಿರುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳ್ಳುವುದರಿಂದ ಕಷ್ಟ, ನಷ್ಟ, ಭ್ರಷ್ಟತೆಗಳಿಂದ ದೂರವಾಗಿ ಸಂಪೂರ್ಣರೋಗ ವಿಮುಕ್ತಿ ಪಡೆಯಬಹುದು ಎಂದು ಉಡುಪಿಯ ಪ್ರಸಿದ್ಧ ಮೂಳೆ ತಜ್ಞ ಡಾ|ಚೆನ್ನಕೇಶವ ರಾವ್ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಹಮ್ಮಿಕೊಂಡ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಎಂಬ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರೋಗಗಳ ಬಗೆಗಿನ ಅರಿವು ಸಮತೋಲಿತ ಆಹಾರ, ಸ್ವಯಂಶಿಸ್ತು ಬದ್ಧ ಜೀವನ ಇವುಗಳಿಂದ ಸದಾ ಆರೋಗ್ಯದ ಬಾಳನ್ನು ನಡೆಸಬಹುದಾಗಿದ್ದು ವಿದ್ಯಾರ್ಥಿದೆಸೆಯಿಂದಲೇ ಇವುಗಳನ್ನು ಪ್ರಾರಂಭಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರವಣ ಕುಮಾರ್ ಸ್ವಾಗತಿಸಿದರು, ಶಾಲೆಟ್ ವಂದಿಸಿದರು, ಕುಮಾರಿ ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು.

ವೃತ್ತಿ ಜೀವನದ ಯಶಸ್ಸಿಗೆ ಕೌಶಲ ಅನಿವಾರ್ಯ - ಡಾ|ಆನಂದ್ ಎಸ್.

ಜ್ಞಾನ, ಕೌಶಲ ಹಾಗೂ ಸದ್ವರ್ತನೆಗಳಿಂದ ಯಶಸ್ವೀ ವೃತ್ತಿ ಬದುಕನ್ನು ನಡೆಸಬಹುದು ಎಂದು ಮಸ್ಕತ್ತಿನ ಕಾಲೇಜ್ ಆಫ್ ಬ್ಯಾಂಕಿಂಗ್ ಆಂಡ್ ಫೈನಾನ್‌ಶಿಯಲ್ ಸ್ಟಡೀಸ್‌ನ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗದ ನಿರ್ದೇಶಕರಾದ ಡಾ|ಆನಂದ ಎಸ್. ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ಆಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ ಬಿಹೇವಿಯರ್ ಟ್ರೈಟ್ಸ್ ಫಾರ್ ಸಕ್ಸಸ್‌ಫುಲ್ ಕರಿಯರ್ ಎಂಬ ವಿಚಾರದ ಮೇಲೆ ಈ ಮಾತನ್ನು ಹೇಳಿದರು. ಕಾಮ, ಕ್ರೋಧ, ಲೋಭ, ಮೋಹ ಮೊದಲಾದ ಅಂತ: ಶತ್ರುಗಳನ್ನು ಆತ್ಮವಿಶ್ವಾಸ, ತಾಳ್ಮೆ, ಪ್ರಾಮಾಣಿಕತೆ, ಧೈರ್ಯ ಮೊದಲಾದ ಅಂತರ್ಮಿತ್ರರ ಸಹಾಯದಿಂದ ಜಯಿಸಬೇಕು. ಅಂತ:ಕರಣ ಪರಿಶುದ್ಧವಾದಾಗ ಮೋಸ ವಂಚನೆಗಳಿಗೆ ಅವಕಾಶವಿರುವುದಿಲ್ಲ. ಇದರಿಂದ ವೃತ್ತಿಯಲ್ಲಿ ನೈರ್ಮಲ್ಯವು ತಲೆದೋರಿ ಅದು ಯಶಸ್ಸಿಗೆ ಕಾರಣವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ವೃತ್ತಿ ಮಾರ್ಗದರ್ಶನ ವಿಭಾಗದ ಅಧ್ಯಾಪಕ ಸಲಹೆಗಾರರಾದ ಶ್ರೀ ಜಾವೆದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ವಿದ್ಯಾರ್ಥಿಗಳಾದ ಸ್ಫೂರ್ತಿ ಸ್ವಾಗತಿಸಿದರು, ಶ್ರೇಯಸ್ವಿ ಧನ್ಯವಾದವಿತ್ತರು, ಕುಮಾರಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಉಪಕಾರಸ್ಮರಣೆ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಡಾ|ಎಚ್.ಸತ್ಯನಾರಾಯಣ ಆಚಾರ್ಯ

ಮಾಡಿದ ಉಪಕಾರವನ್ನು ಸ್ಮರಿಸುವ ಸಂಸ್ಕಾರ ಕೃತಜ್ಞತೆಯಾಗಿದ್ದು ವಾಸಿಸುವ ನೆಲ, ಉಡುವ ಬಟ್ಟೆ, ತೊಡುವ ಆಭರಣ, ಉಣ್ಣುವ ಆಹಾರ, ಗಾಳಿ, ನೀರು, ಪರ್ವತ ಇವೇ ಮೊದಲಾದ ಮನುಷ್ಯನ ಮೂಲಭೂತ ಸೌಕರ್ಯಗಳನ್ನು ದಯಪಾಲಿಸಿರುವ ಜಗತ್ತಿನ ನಿಯಾಮಕನಾದ ಭಗವಂತನನ್ನು ಸ್ಮರಿಸುವ ಮೂಲಕ ಅವನಿಗೆ ಕೃತಜ್ಞರಾಗಬೇಕಾದುದು ಎಲ್ಲರ ಕರ್ತವ್ಯ ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯರಾದ ಡಾ|ಎಚ್.ಸತ್ಯನಾರಾಯಣ ಆಚಾರ್ಯರು ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಭಾರತೀಯ ಸಂಸ್ಕೃತಿ ವೈಶಿಷ್ಟ್ಯ ಎಂಬ ವಿಚಾರದ ಮೇಲೆ ಮಾತನಾಡುತ್ತಿದ್ದರು. ಗುರುಗಳಲ್ಲಿ ಪ್ರಾಮಾಣಿಕವಾದ ವಿಶ್ವಾಸವನ್ನು ತೋರುವುದು ಶ್ರದ್ಧೆ ಎನಿಸಿದ್ದು ಇಂತಹ ಶ್ರದ್ಧಾಭಾವದಿಂದ ಪರಿಪೂರ್ಣ ಜ್ಞಾನವನ್ನು ಪಡೆಯ ಬಹುದು ಎಂದು ಹೇಳಿದ ಅವರು ಆನೆ, ಹುಲಿ, ಚಿರತೆ, ಜಿಂಕೆ ಮೊದಲಾದ ಪ್ರಾಣಿಗಳ ಅಂಗಾಂಗಗಳೂ ಮೌಲ್ಯಯುತವಾಗಿದ್ದು ಮನುಷ್ಯನ ಅಂಗಾಂಗಗಳು ಮಾತ್ರ ಮೌಲ್ಯರಹಿತವಾಗಿವೆ. ಆದಾಗ್ಯೂ ಮನುಷ್ಯನು ಸಕಲ ಪ್ರಾಣಿಗಳನ್ನು ನಿಯಂತ್ರಿಸುವಲ್ಲಿ ಸಮರ್ಥನಾಗಿರುವುದಕ್ಕೆ ಪ್ರಾಣಿಗಳಲ್ಲಿ ಇಲ್ಲದೇ ಇರುವ ವಿವೇಚನಾಶಕ್ತಿ ಒಂದೇ ಕಾರಣವಾಗಿದ್ದು ಇಂತಹ ವಿವೇಚನ ಶಕ್ತಿಯ ಸದ್ಬಳಕೆಯಿಂದ ಶ್ರೇಷ್ಠ ಮಾನವನಾಗಿ ಬದುಕಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು, ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

ಯುವ ರೆಡ್ ಕ್ರಾಸ್

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಿಂದ ಆಶಾ ನಿಲಯದ ವಿಶೇಷ ಮಕ್ಕಳಿಗೆ ಹಣ್ಣುಹಂಪಲನ್ನು ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್, ಯುವ ರೆಡ್ಕ್ರಾಸ್ ಘಟಕದ ಅಧ್ಯಾಪಕ ಸಲಹೆಗಾರರಾದ ಶ್ರೀ ಜಾವೆದ್, ಹಿರಿಯ ಉಪನ್ಯಾಸಕ ಶ್ರೀ ರಾಧಾಕೃಷ್ಣರಾವ್ ಹಾಗೂ ಘಟಕದ ಯುವ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಶಾನಿಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಗ್ನೇಸ್ ಹೇಮಾವತಿ ಕುಂದರ್ ಧನ್ಯವಾದವಿತ್ತರು.

ಸುರಕ್ಷತೆಯ ಅರಿವಿನಿಂದ ಸ್ವರಕ್ಷಣೆ


ಸುರಕ್ಷತೆಯ ಅರಿವಿನಿಂದ ಮಹಿಳೆಯರು ದೌರ್ಜನ್ಯಗಳಿಂದ ಸ್ವಯಂ ರಕ್ಷಣೆ ಪಡೆಯ ಬಹುದಾಗಿ ಕರಾಟೆಪಟು ಶ್ರೀ ಕಾರ್ತಿಕ್ ಎಸ್. ಕಟೀಲ್ ಹೇಳಿದ್ದಾರೆ.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತೋತ್ಸವ ವರ್ಷದಲ್ಲಿ ದಿಶಾ ಮಹಿಳಾ ಸಂಘದಿಂದ ಆಯೋಜಿಸಲಾದ ಮಹಿಳಾಸ್ವರಕ್ಷಣೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೌರ್ಜನ್ಯದ ಪ್ರಕಾರಗಳು ಮತ್ತು ಅವುಗಳಿಂದ ಸ್ವಯಂರಕ್ಷಣೆ ಪಡೆಯುವ ಕುರಿತಾದ ಅಣುಕು ಪ್ರಾತ್ಯಕ್ಷಿಕೆಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ದಿಶಾ ಸಂಘದ ಅಧ್ಯಾಪಕ ಸಲಹೆಗಾರರಾದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ, ಅತಿಥಿಗಳಾದ ಶ್ರೀಮತಿ ಶುಭಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು, ವಿದ್ಯಾರ್ಥಿನಿಯರಾದ ಮೈತ್ರಿ ಬಿ..ಜಿ. ಸ್ವಾಗತಿಸಿದರು, ಸ್ಪೂರ್ತಿ ಧನ್ಯವಾದವಿತ್ತರು, ಕುಮಾರಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.
 

ಸಾಮಾಜಿಕ ಋಣ ಸಂದಾಯಕ್ಕೆ ಎನ್.ಎಸ್.ಎಸ್. ವೇದಿಕೆ
ಶ್ರೀ ಜಯಕರ ಶೆಟ್ಟಿ, ಇಂದ್ರಾಳಿ

ಹುಟ್ಟುವಾಗ ಮನುಷ್ಯನು ಅನೇಕ ಋಣಗಳಿಗೆ ಒಳಗಾಗಿದ್ದು ಅವುಗಳಲ್ಲೊಂದಾದ ಸಾಮಾಜಿಕ ಋಣಸಂದಾಯಕ್ಕೆ ರಾಷ್ಟ್ರೀಯ ಸೇವಾಯೋಜನೆ ಸೂಕ್ತವೇದಿಕೆಯಾಗಿದೆ ಎಂದು ಬಡಗು ಬೆಟ್ಟು ಸಹಕಾರಿ ಸಂಘದ ವ್ಯವಸ್ಥಾಪಕರಾದ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತೋತ್ಸವ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲೇಜಿನಲ್ಲಿ ಪಡೆಯುವ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಾಸ ಆಗಬೇಕು. ಸಾಮಾಜಿಕ ಕಳಕಳಿಯನ್ನು ಹೊಂದಿ ಸೇವೆಯಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವದ ಪರಿಪೂರ್ಣ ವಿಕಾಸವಾಗುವುದು. ಇಂತಹ ಅವಕಾಶಗಳು ರಾಷ್ಟ್ರೀಯ ಸೇವಾಯೋಜನೆಯಲ್ಲಿ ದೊರಕುವುದಾಗಿ ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು, ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.
 

ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮಾಹಿತಿ ಕಾರ್ಯಕ್ರಮ
ಶ್ರೀ ಸಂತೋಷ್ ಪೀಟರ್ ಡಿಸೋಜಾ

ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯು ಪ್ರಪಂಚದಾದ್ಯಂತ ಸಲ್ಲಿಸುತ್ತಿರುವ ತುರ್ತು ಸೇವಾ ಕೈಂಕರ್ಯಗಳ ಬಗೆಗೆ ಮಾಹಿತಿ ನೀಡುವ ಕಾರ್ಯಕ್ರಮ ಇತ್ತೀಚೆಗೆ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜರಗಿತು. ಮಂಗಳೂರಿನ ಪ್ರಸಿದ್ಧ ವಕೀಲರಾದ ಶ್ರೀ ಸಂತೋಷ್ ಪೀಟರ್ ಡಿಸೋಜಾ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನೆರೆ, ಪ್ರವಾಹ, ಭೂಕಂಪ ಮೊದಲಾದ ಆಕಸ್ಮಿಕ ಅನಾಹುತಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಸೇವೆಗಳ ಬಗೆಗೆ ವಿವರ ನೀಡಿದ ಅವರು ರೆಡ್ಕ್ರಾಸ್ ಸಂಸ್ಥೆಯ ಇಂತಹ ಸೇವೆಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ತಿಳಿಸಿದರು. ಪೋಲಿಸ್ ಸ್ಟೇಶನ್ ದೂರವಾಣೆ ಸಂಖ್ಯೆ, ಅಗ್ನಿಶಾಮಕದಳದ ದೂರವಾಣಿ ಸಂಖ್ಯೆ, ಹಾವು ಮೊದಲಾದ ವಿಷಜಂತುಗಳನ್ನು ಪಳಗಿಸುವ ಕೌಶಲವುಳ್ಳವರ ವಿಳಾಸ ಇತ್ಯಾದಿಗಳನ್ನು ಪ್ರತಿಯೊಬ್ಬರು ಹೊಂದಿರ ಬೇಕಾಗಿದ್ದು ಇದರಿಂದ ಆಕಸ್ಮಿಕವಾಗಿ ಒದಗುವ ಗಂಡಾತರದಿಂದ ಪಾರಾಗಬಹುದು ಎಂದು ತಿಳಿಸಿದರು. ಸ್ವಯಂ ಅಪಘಾತಕ್ಕೆ ಒಳಗಾದಾಗ ಅಪಾಯದಿಂದ ಪಾರಾಗುವ ದೃಷ್ಟಿಯಲ್ಲಿ ಮನೆಯ ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡಿರುವ ಸ್ಥಿರ ದಾಖಲೆಗಳನ್ನು ಸದಾ ಜೊತೆಯಲ್ಲಿ ಇಟ್ಟುಕೊಂಡಿರಬೇಕು ಎಂಬುದನ್ನು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾಲೇಜಿನ ಯುವ ರೆಡ್ಕ್ರಾಸ್ ವಿಭಾಗದ ವಲಯದಿಂದ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ಯುವ ರೆಡ್ಕ್ರಾಸ್ ವಿಭಾಗದ ಅಧ್ಯಾಪಕ ಸಲಹೆಗಾರರಾದ ಉಪನ್ಯಾಸಕ ಶ್ರೀ ಜಾವೆದ್ ಉಪಸ್ಥಿತರಿದ್ದರು, ವಿದ್ಯಾರ್ಥಿನಿಯರಾದ ರಮ್ಯ ಸ್ವಾಗತಿಸಿದರು, ಶ್ಯಾಲೆಟ್ ಧನ್ಯವಾದವಿತ್ತರು, ಕುಮಾರಿ ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು.

 

ಕಲಿಕೆಯೊಂದಿಗೆ ಜೀವನ ಕೌಶಲ ಅತ್ಯವಶ್ಯ

ಸಾಂಪ್ರದಾಯಿಕ ಪಾಠಪ್ರವಚನಗಳಿಂದ ಸಂಪಾದಿಸಿದ ಜ್ಞಾನದ ಜೊತೆಗೆ ಜೀವನ ಕೌಶಲಗಳನ್ನು ಬೆಳಸಿಕೊಂಡಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು ಎಂದು ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿದ್ಯಾವಂತ ಆಚಾರ್ಯ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೦೧೫-೧೬ ರಜತೋತ್ಸವ ವರ್ಷದ ಸಹಪಠ್ಯ, ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯ ಜೊತೆಗೆ ಕೌಶಲಗಳನ್ನು ಪ್ರದರ್ಶಿಸುವುದರಿಂದ ಮಾತ್ರ ಸ್ವಯಂ ನೆಲೆಯನ್ನು ಕಂಡುಕೊಳ್ಳ ಬಹುದಾಗಿದ್ದು ಈ ನಿಟ್ಟಿನಲ್ಲಿ ಕಾಲೇಜು ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳವುದು ಅನಿವಾರ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ಕಾಲೇಜಿನ ಮ್ಯಾನೇಜ್ಮೆಂಟ್ ಸಂಘದ ಶಿಕ್ಷಕ ಸಂಯೋಜಕರಾದ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು, ವಿದ್ಯಾರ್ಥಿನಿಯರಾದ ಸಮ್ರೀನ್ ಬಾನು ಸ್ವಾಗತಿಸಿದರು, ಶ್ರೇಯಸ್ವಿ ಧನ್ಯವಾದವಿತ್ತರು, ಕುಮಾರಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.
 

ಭವ್ಯಭಾರತದ ಅಪೂರ್ವ ಕೊಡುಗೆ ಯೋಗ
ಡಾ| ಎ.ವಿವೇಕ ಉಡುಪ

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯ ಮಟ್ಟ ತೀವ್ರ ಕುಸಿಯುತ್ತಿರುವುದು ಯೋಗಜಾಗೃತಿಗೆ ಕಾರಣವಾಗಿದ್ದು ಯೋಗ ಚಿಕಿತ್ಸೆಯಿಂದ ಸರ್ವರೋಗ ನಿರ್ಮೂಲವಾಗುವುದಾಗಿ ಯೋಗ ವೈದ್ಯಕೀಯ ತಜ್ಞ ಸಾಲಿಗ್ರಾಮದ ಸ್ವಾಸ್ಥ್ಯ ಆರೋಗ್ಯ ಜಾಗೃತಿ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ|ಎ.ವಿವೇಕ ಉಡುಪ ಹೇಳಿದ್ದಾರೆ.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನ ವತಿಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಾನಾ ರೀತಿಯ ಒತ್ತಡ, ಸಮಸ್ಯೆಗಳು ಮನುಷ್ಯನನ್ನು ಇಂದು ಕಾಡುತ್ತಿದ್ದು ಇದರಿಂದ ಹೊರಬರಲು ದೃಢ ಮನಸ್ಸಿನ ನಿರ್ಮಾಣವಾಗಬೇಕು. ದೈಹಿಕ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಇದು ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಯೋಗವು ರಾಮ ಬಾಣದ ರೀತಿಯಲ್ಲಿ ಫಲಪ್ರದ ಚಿಕಿತ್ಸೆಯಾಗಿ ಪರಿಣಮಿಸಿದೆ. ಬದುಕಿನಲ್ಲಿ ಎಂತಹ ಜಂಜಾಟಗಳು ಎದುರಾದರೂ ಧೈರ್ಯ ಗುಂದದೆ ಸಮರ್ಥವಾಗಿ ನಿಭಾಯಿಸಬೇಕು. ಇದು ಯೋಗದಿಂದ ಮಾತ್ರ ಸಾಧ್ಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಆಧ್ಯಕ್ಷರಾಗಿದ್ದರು, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು, ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.
 

ಪರಿಸರ ಸಂರಕ್ಷಣೆಯಿಂದ ರೋಗದೂರ

ಮನುಷ್ಯನ ಆರೋಗ್ಯಕ್ಕೆ ಅವಶ್ಯವಾಗಿರುವುದಕ್ಕಿಂತ ತೀರಾ ಕಡಿಮೆ ಮಟ್ಟದ ವನಸಂಪತ್ತನ್ನು ನಾವು ಹೊಂದಿದ್ದು ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದ್ದು ಪ್ರತಿಯೊಬ್ಬರು ಕನಿಷ್ಟ ಅವರ ಜನ್ಮ ದಿನದಂದಾದರೂ ಒಂದು ಗಿಡವನ್ನು ನೆಡುವಂತಾಗಬೇಕು ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಪ್ರೊ..ಪ್ರಕಾಶ ಕಣಿವೆ ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುತ್ತಾ ಈ ಮಾತನ್ನು ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್, ರಾಷ್ಟ್ರೀಯ ಸೇವಾಯೋಜನಾಧಿಕಾರಿ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ಕಾಲೇಜು ವಾರ್ಷಿಕಾಂಕ ಸ್ಪರ್ಧೆ ಉಪೇಂದ್ರ ಪೈ ಕಾಲೇಜು ಪ್ರಥಮ
ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ೨೦೧೩-೧೪ರ ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ಬಿ ವಿಭಾಗ (೫೦೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳು)ದಲ್ಲಿ ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕಾಂಕ ಸುಪ್ರಭಾ ಪ್ರಥಮ ಸ್ಥಾನ ಗಳಿಸಿದೆ.

ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಕುಲಪತಿ ಪ್ರೊ.ಬೈರಪ್ಪ ಇವರು ಪ್ರಶಸ್ತಿಯನ್ನು ಕಾಲೇಜು ಪ್ರಾಚಾರ್ಯ ಡಾ|ಮಧುಸೂದನ ಭಟ್ ಇವರಿಗೆ ಹಸ್ತಾಂತರಿಸಿದರು. ವಾರ್ಷಿಕಾಂಕ ಸಂಪಾದಕ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಜೊತೆಗಿದ್ದರು. ಮಂಗಳೂರು ವಿ.ವಿ. ಕುಲಸಚಿವರಾದ ಪ್ರೊ.ಪಿ.ಎಸ್.ಎಡಪಡಿತ್ತಾಯ, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ.ಬಿ.ನಾರಾಯಣ್, ಹಣಕಾಸು ವಿಭಾಗದ ಅಧಿಕಾರಿಗಳಾದ ಪ್ರೊ.ಪಿ.ಎ.ರೇಗೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಂಪ್ಯೂಟರ್ ಆಪ್ಲಿಕೇಶನ್ಸ್ ಇನ್ ಮ್ಯಾನೇಜ್ಮೆಂಟ್ - ಪಾಠ್ಯ ಅನಾವರಣ
ಮಂಗಳೂರು ವಿಶ್ವ ವಿದ್ಯಾಲಯ ನಾಲ್ಕನೇ ಸೆಮಿಸ್ಟರ್ ಬಿ.ಬಿ.ಎಂ. ಪದವಿ ತರಗತಿಗೆ ನಿಗದಿಪಡಿಸಿದ ಪಾಠ್ಯ ಭಾಗವಾದ ಕಂಪ್ಯೂಟರ್ ಅಪ್ಲಿಕೇಶನ್ಸ್ ಇನ್ ಮ್ಯಾನೇಜ್‌ಮೆಂಟ್ ಪುಸ್ತಕದ ಅನಾವರಣ ಕಾರ್ಯಕ್ರಮ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಡಿಸೆಂಬರ್ ೧೮ರಂದು ಜರಗಿತು.

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ಶ್ರೀ ಜಾವೆದ್ ರಚಿಸಿರುವ ಈ ಪಾಠ್ಯ ಪುಸ್ತಕವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇಲ್ಲಿಯ ಸಂಸ್ಕೃತಾಧ್ಯಯನ ಸಂಶೋಧನ ವಿಭಾಗದ ನಿವೃತ್ತ ನಿರ್ದೇಶಕರಾದ ಡಾ. ಎನ್.ರಾಧಾಕೃಷ್ಣ ಭಟ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಂಪ್ಯೂಟರ್ ಬಗೆಗಿನ ಜ್ಙಾನವು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದ್ದು ವಿಷಯಗಳ ಮಾಹಿತಿಯು ಪ್ರತಿವಿದ್ಯಾರ್ಥಿಯನ್ನು ತಲುಪುವಂತಾಗಬೇಕು. ಕಂಪ್ಯೂಟರ್ ಮಾಹಿತಿಗಳು ಅಂತರ್ಜಾಲದಲ್ಲಿ ಲಭಿಸುವವುದಾದರೂ ಅವೆಲ್ಲವನ್ನು ಕೃತಿಯಲ್ಲಿ ಅಳವಡಿಸಿ ಸುಲಭವಾಗಿ ವಿದ್ಯಾರ್ಥಿಗಳನ್ನು ತಲುಪುವಂತಾಗುವ ಲೇಖಕರ ಶ್ರಮವನ್ನು ಶ್ಲಾಘಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಆಶಾ ಹೆಗ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೃತಿಯ ಲೇಖಕರಾದ ವಾಣಿಜ್ಯ ಉಪನ್ಯಾಸಕ ಶ್ರೀ ಜಾವೆದ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಆಶಾ ಹೆಗ್ಡೆ ವಂದಿಸಿದರು.

ಪುಸ್ತಕದ ಪ್ರತಿಗಳಿಗಾಗಿ ಉಡುಪಿಯ ರಾಫವೇಂದ್ರ ಪುಸ್ತಕ ಭಂಢಾರ ಹಾಗೂ ಮಂಗಳೂರಿನ ಸ್ಕೂಲ್ ಬುಕ್ ಕಂಪೆನಿಯನ್ನು ಸಂಪರ್ಕಿಸಬಹುದಾಗಿ ಪ್ರಕಾಶಕರು ತಿಳಿಸಿದ್ದಾರೆ.

ಚೆಸ್ ಆಟಗಾರ

ದ್ವೀತಿಯ ಬಿ.ಕಾಂ. ವಿದ್ಯಾರ್ಥಿ ಪ್ರಸನ್ನ ವಿ. ಹೆಗ್ಡೆ ಇತ್ತೀಚೆಗೆ ತಮಿಳ್ನಾಡಿನ ವಿ.ಐ.ಟಿ. ವೆಲ್ಲೂರಿರಿನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಅಂತರ್ ವಿ.ವಿ. ಚೆಸ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದಾರೆ.

 

ಎನ್.ಎಸ್.ಎಸ್. ವಾರ್ಷಿಕ ಶಿಬಿರ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರವು ಡಿಸೆಂಬರ್ ೨೦ ರಿಂದ ೨೬ರವರೆಗೆ ಕುತ್ಪಾಡಿ ಹಿರಿಯ ಪ್ರಾಥಮಿಕ ಶಾಲೆ, ಕುತ್ಪಾಡಿ ಇಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಓದುವ ಹವ್ಯಾಸದಿಂದ ಸಂವಹನಕೌಶಲ
ಸಮಾಜದಲ್ಲಿ ಉತ್ತಮ ನಾಗರಿಕನೆನೆಸಿಕೊಳ್ಳಲು ಸಂವಹನ ಕೌಶಲವು ಅತ್ಯವಶ್ಯವಾಗಿದ್ದು ನಿರಂತರ ಓದುವ ಹವ್ಯಾಸದಿಂದ ಅದು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಓದುವ ಹವ್ಯಾಸಕ್ಕಾಗಿ ಗ್ರಂಥಾಲಯವನ್ನು ಸದುಪಯೋಗಪಡಿಸಬೇಕಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಹೆಲ್ತ್ ಸೈನ್ಸಸ್ ಲೈಬ್ರೆರಿಯ ಹಿರಿಯ ಗ್ರಂಥಾಪಲಕರಾದ ಡಾ|ಶಿವಾನಂದ ಭಟ್ ಹೇಳಿದರು.

ಅವರು ಡಿಸೆಂಬರ್ ೧೭ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಲಾದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಮಸ್ಯೆಗಳು ಮನುಷ್ಯನಲ್ಲಿ ಸಹಜವಾಗಿದ್ದು ಅವುಗಳನ್ನು ಸಮರ್ಪಕವಾಗಿ ಪರಿಹರಿಸಬೇಕು. ಶಿಕ್ಷಣದಿಂದ ಪಡೆದ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನದ ಅರಿವೂ ಈ ನಿಟ್ಟಿನಲ್ಲಿ ಅವಶ್ಯವಾಗಿದ್ದು ನಿರಂತರ ಓದುವ ಹವ್ಯಾಸದಿಂದ ಅದು ಸಿದ್ಧಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಲಾದ ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಪಲ್ಲವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಭಾರ್ಗವ ಸ್ವಾಗತಿಸಿದರು, ಅನಿರುದ್ಧ ಧನ್ಯವಾದವಿತ್ತರು, ವಿದ್ಯಾರ್ಥಿ ಸುಬೋಧ ಕಾರ್ಯಕ್ರಮ ನಿರ್ವಹಿಸಿದರು.

ಬಲಿಷ್ಟ ಮಹಿಳೆಯಿಂದ ಸುದೃಢ ಸಮಾಜ
ಸುಶಿಕ್ಷಿತ ಮಹಿಳೆ ತನ್ನ ಸಬಲತೆಯನ್ನು ಸಾಂದರ್ಭಿಕವಾಗಿ ತೋರುವುದರಿಂದ ಬಲಿಷ್ಟ ಸಮಾಜ ನಿರ್ಮಾಣವಾಗುವುದಾಗಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಹಿಲ್ಡಾ ರೋಡ್ರಿಗ್ರಸ್ ಹೇಳಿದರು.

ಅವರು ಡಿಸೆಂಬರ್ ೧೬ ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಸಂಘದಿಂದ ಆಯೋಜಿಸಲಾದ ಮಹಿಳೆಯರ ಸಬಲೀಕರಣ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು. ಆಧುನಿಕ ತಾಂತ್ರಿಕ ಮಾಧ್ಯಮಗಳಾದ ಘೇಸ್‌ಬುಕ್, ವಾಟ್ಸಪ್ ಮೊದಲಾದವುಗಳ ದುರುಪಯೋಗವಾಗುತ್ತಿದ್ದು ಅವುಗಳ ಚಟಕ್ಕೆ ವಿದ್ಯಾರ್ಥಿನಿಯರು ಒಳಗಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಅವರು ಸರ್ವಾಂಗೀಣ ಬಲಿಷ್ಟತೆಯನ್ನು ಹೊಂದಿದ ಮಹಿಳೆಯರು ತಮ್ಮ ಬದುಕನ್ನು ಹಸನಾಗಿಸುವ ಗುರಿಯನ್ನು ಇಟ್ಟು ಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕಿ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕಿ ಇಂದಿರಾ ವಂದಿಸಿದರು. ವಿದ್ಯಾರ್ಥಿನಿ ನಿಧಿ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.

ಹಿಂದಿ ದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾರದಾ ರೆಸಿಡೆನ್ಸಿಯಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುಪತಿ ನಕ್ಷತ್ರ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರವ್ಯಾಪಿಯಾಗಿ ಬೆಳೆದಿರುವ ಹಿಂದಿ ಭಾಷೆಯ ಮಹತ್ವವನ್ನು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಹಿಂದಿ ಉಪನ್ಯಾಸಕಿ ಶ್ರೀಮತಿ ನಿರ್ಮಲಾ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ನಯನಾ.ಎ.ಶೆಟ್ಟಿ ವಂದಿಸಿ, ರಕ್ಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಮಾನಸಿಕ ಸ್ಥೈರ್ಯ ಪೋಷಕರ ಕರ್ತವ್ಯ

ಬದುಕಿನ ನಾನಾ ಘಟ್ಟಗಳಲ್ಲಿ ಮಕ್ಕಳು ಮಾನಸಿಕ ದೌರ್ಬಲ್ಯಕ್ಕೆ ಒಳಗಾದಾಗ ಅವರಲ್ಲಿ ಸ್ಥೈರ್ಯ ಧೈರ್ಯ ತುಂಬುವ ಕೆಲಸವನ್ನು ಹೆತ್ತವರು ಮಾಡಬೇಕು. ಶಿಕ್ಷಕರು ತುಂಬುವ ಜ್ಞಾನ, ಹೆತ್ತವರು ನೀಡುವ ಸ್ಥೈರ್ಯ ಇವುಗಳಿಂದ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬಹುದು ಎಂದು ಮುಲ್ಕಿಯ ನಾರಾಯಣಗುರು ಸಂಯುಕ್ತ ಪ್ರೌಢ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಅಡ್ವೆ ರವೀಂದ್ರ ಪೂಜಾರಿಯವರು ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಕ್ಷಕ - ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು.

ಸಂಘದ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯು ಈ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷರಾಗಿ ಉಡುಪಿ ಲಕ್ಷ್ಮಿ ಇಲೆಕ್ಟ್ರಿಕಲ್ಸ್ ಇದರ ಮಾಲಕರಾದ ಶ್ರೀ ರಾಜಗೋಪಾಲ್ ಯು., ಕಾರ್ಯದರ್ಶಿಯಾಗಿ ಶ್ರೀಮತಿ ರಶೀದಾ ಬಾನು ಹಾಗೂ ಸದಸ್ಯರಾಗಿ ಶ್ರೀಮತಿ ಸುದಾ ನಾಯಕ್, ಶ್ರೀಮತಿ ಶಾರದಾ, ಶ್ರೀ ಜಯಕುಮಾರ್, ಶ್ರೀ ಕೆ.ಎನ್.ಸತ್ಯನಾರಾಯಣ್, ಶ್ರೀ ಹೇಮಚಂದ್ರ ಕೆ ಇವರು ಆಯ್ಕೆಯಾದರು.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅರ್ಧವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ವರದಿ ಮಂಡಿಸಿದರು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಪ್ರಭಾ ಕಾಮತ್ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕ ಶ್ರೀ ರಾಧಕೃಷ್ಣ ರಾವ್ ವಂದಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆಯಾದ ಶ್ರೀಮತಿ ಆಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಅನುಭವದಿಂದ ಬದುಕಿನ ಪಾಠ

ಸಾಂಪ್ರದಾಯಿಕ ಪಾಠ ಪ್ರವಚನಗಳಿಂದ ಗಳಿಸುವ ಜ್ಞಾನದಿಂದ ಬೌದ್ಧಿಕ ವಿಕಾಸವಾದರೆ ಬದುಕಿನ ಪಾಠವು ಅನುಭವದಿಂದ ಸಾಧ್ಯವಾಗುವುದಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಹೇಳಿದ್ದಾರೆ.

ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಹಮ್ಮಿಕೊಂಡ ನೈತಿಕ ಶಿಕ್ಷಣ ಸರಣಿಯ ಉಪನ್ಯಾಸ ಮಾಲಿಕೆಯಲ್ಲಿ ಬದುಕಿನ ಪಾಠದ ಬಗ್ಗೆ ಮಾತನಾಡುತ್ತಿದ್ದರು. ಭವಿಷ್ಯದ ಚಿಂತನೆಯಲ್ಲಿ ಅನೇಕ ಗೊಂದಲಗಳು ಏರ್ಪಟ್ಟಾಗ ಹಿರಿಯರ ಅನುಭವ ದಾರಿದೀಪವಾಗುವ ಬಗೆಯನ್ನು ಸೋದಾಹರಣವಾಗಿ ವಿವರಿಸಿದ ಅವರು ನಿರ್ವಂಚನೆಯಿಂದ ಪ್ರಾಮಾಣಿಕತನವನ್ನು ಮೆರೆದಾಗ ಪ್ರತಿಯೊಬ್ಬ ವ್ಯಕ್ತಿ ಬದುಕಿನಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿಗಳಾದ ಉಪನ್ಯಾಸಕ ರಾಜೇಶ್ ನಾಯಕ್, ಸಹ ಯೋಜನಾಧಿಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಕಾರ್ಯಕ್ರಮ ಸಂಯೋಜಿಸಿದರು.

ಚೆಸ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ ತೃತೀಯ ರನ್ನರ್ ಆಪ್

ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಮಂಗಳೂರು ವಿ.ವಿ.ಅಂತರ್ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ ತೃತೀಯ ರನ್ನರ್ ಆಪ್ ಪ್ರಶಸ್ತಿಯನ್ನು ಗೆದ್ದ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಫಲಕವನ್ನು ಕಾಲೇಜು ಪ್ರಾಚಾರ್ಯ ಡಾ. ಮಧುಸೂದನ ಭಟ್ ಇವರಿಗೆ ಹಸ್ತಾಂತರಿಸುತ್ತಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬ್ರೈನ್ ಕ್ವ್ವೆಸ್ಟ್ - ಸೈಂಟ್ ಮೆರೀಸ್ ಪಿ.ಯು ಕಾಲೇಜ್, ಶಿರ್ವ ಚಾಂಪಿಯನ್

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ ೧೩ ರಂದು ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಮರ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬ್ರೈನ್ ಕ್ವ್ವೆಸ್ಟ್ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ಸೈಂಟ್ ಮೆರೀಸ್

ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾದ ಅಂನ್ಸಿತಾ ಡಿಸೋಜಾ ಹಾಗೂ ಶ್ರೇಯ ಆಚಾರ್ ಪ್ರಥಮ ಸ್ಥಾನ ಪಡೆದು ರೂಪಾಯಿ ೯,೯೯೯ ನಗದು ಹಾಗೂ ಚಾಂಪಿಯನ್ಸ್ ಟ್ರೋń